ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿರಂಗದಲ್ಲಿ ಅದೃಷ್ಟದ ಬಾಗಿಲು ತೆರೆಯುವುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಅಕ್ಟೋಬರ್ 2025, 23:36 IST
Last Updated 7 ಅಕ್ಟೋಬರ್ 2025, 23:36 IST
ದಿನ ಭವಿಷ್ಯ
ಮೇಷ
ಒಳ್ಳೆಯತನದಿಂದಾಗಿ ನೀವು ನುಂಗಿಕೊಂಡ ಸಿಟ್ಟು ತಪ್ಪು ಮಾಡಿದವರ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತದೆ. ವೃತ್ತಿರಂಗದಲ್ಲಿ ಅದೃಷ್ಟದ ಬಾಗಿಲು ತೆರೆಯುವುದು. ವಿದ್ಯಾರ್ಥಿನಿಯರಿಗೆ ವಿಶೇಷ ಪ್ರಗತಿ ಪ್ರಾಪ್ತಿಯಾಗಬಹುದು.
ವೃಷಭ
ಯಾವುದೇ ಪರಿಸ್ಥಿತಿಯಲ್ಲಿಯೂ ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡದಿರುವ ತೀರ್ಮಾನ ಮಾಡದಿರಿ. ತಂದೆ ಅಥವಾ ಹಿರಿಯ ಸಹೋದರರಲ್ಲಿ ಸಂಯಮದ ನಡವಳಿಕೆ ಅಗತ್ಯ.
ಮಿಥುನ
ಜೀವನದಲ್ಲಿ ಹೊಸ ರೀತಿಯ ಚಲನೆ ಇಲ್ಲದೆ ಬಂದ ಬೇಸರವು ದಿನಚರಿಯ ಬದಲಾವಣೆಯಿಂದ ನಿವಾರಣೆಯಾಗಬಹುದು. ಕಾರ್ಯರಂಗದಲ್ಲಿ ಅನುಭವಸ್ಥರ ಸಹಯೋಗದಿಂದ ಉನ್ನತಿ ನೋಡಬಹುದು.
ಕರ್ಕಾಟಕ
ಒಂದೇ ಸಮಯದಲ್ಲಿ ಎಲ್ಲ ಕಡೆ ಗಮನ ಹರಿಸುವ ನಿಮ್ಮತನವನ್ನು ನೀವು ಕಲೆ ಎಂದು ಭಾವಿಸಿದ್ದರೂ ಇತರರು ಚಂಚಲತೆ ಎಂದು ದೂಷಿಸುವ ಸಾಧ್ಯತೆ ಇದೆ. ಇರುವ ವಸ್ತುಗಳಲ್ಲಿ ಸಂತೃಪ್ತಿಯನ್ನು ತಂದುಕೊಳ್ಳಿ.
ಸಿಂಹ
ಇಷ್ಟು ದಿನ ಇದ್ದಂಥ ಕೆಲವು ಜವಾಬ್ದಾರಿಗಳ ಭಾರ ಕಡಿಮೆ ಆದುದರಿಂದ ನಿರಾಳದ ಜೀವನವನ್ನು ನಡೆಸುವಿರಿ. ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ. ಸಣ್ಣ ಪ್ರಮಾಣದ ಪ್ರಯಾಣ ಮಾಡುವಿರಿ.
ಕನ್ಯಾ
ಸ್ನೇಹಿತನ ಕೆಲವು ಅನಿರೀಕ್ಷಿತ ನಡೆಗಳನ್ನು ಗುರುತಿಸಿ ಆತನ ಮಾನಸಿಕ ಖಿನ್ನತೆಯನ್ನು ಬೆಳಕಿಗೆ ತರುವಂಥ ಕೆಲಸವನ್ನು ಮಾಡುವ ಸಾಧ್ಯತೆ ಇದೆ. ಜನಮಾನಸದಲ್ಲಿ ಅಚ್ಚಾಗಿರುವ ಕಾರ್ಯಗಳನ್ನು ನಿಲ್ಲಿಸಲು ಹೋಗಬೇಡಿ.
ತುಲಾ
ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಹೋಗಿ ಅದರಿಂದ ಅಪಮಾನಕ್ಕೊಳಗಾಗುವ ಸಾಧ್ಯತೆ ಇದೆ. ಬಂಧುಗಳ ಸಲಹೆ-ಸಹಕಾರ ನೂತನ ಕಾರ್ಯಗಳಿಗೆ ಉತ್ತಮ ಫಲ ಕೊಡುವುದು. ಬಿಳಿ ಬಣ್ಣ ಶುಭವನ್ನು ತರಲಿದೆ.
ವೃಶ್ಚಿಕ
ಪಾರಮಾರ್ಥಿಕವಾಗಿ ಸಾಧನೆಗಳೆಷ್ಟೇ ಇದ್ದರೂ ಸಮಾಜದಲ್ಲಿ ಬದುಕುವಾಗ ಲೌಕಿಕ ಜ್ಞಾನದ ಅಗತ್ಯ ಇದ್ದೇ ಇರಬೇಕೆಂಬುವುದನ್ನು ಸ್ಮರಿಸಿ. ಶಿಕ್ಷಕ ವೃತ್ತಿ ಆರಂಭಿಸುವ ಬಗ್ಗೆ ಆಲೋಚಿಸಿ. ಆಮಿಷಗಳಿಗೆ ಮರುಳಾಗದಿರಿ
ಧನು
ಬುದ್ಧಿವಂತಿಕೆಯನ್ನು ಉಪಯೋಗಿಸಿ ಗ್ರಾಹಕರಲ್ಲಿ ವ್ಯವಹರಿಸಿದರೆ ಲಾಭದ ದಿನವಾಗುತ್ತದೆ. ಮಗನು ಅನಿವಾರ್ಯ ಕಾರಣಗಳಿಂದ ಪರ ಊರಿಗೆ ತೆರಳುವುದು ದುಃಖಕರ ಸಂಗತಿಯಾಗಬಹುದು
ಮಕರ
ಕಾರ್ಯಕ್ಷೇತ್ರದಲ್ಲಿ ಕೋಪವು ಮನೆಯ ಮಡದಿ ಹಾಗೂ ಮಗನ ಮೇಲೆ ಪ್ರಯೋಗವಾಗುವುದು ಬೇಡ. ತಂದೆಯವರ ವ್ಯವಹಾರದ ವಿಷಯಗಳನ್ನು ತಿಳಿದುಕೊಂಡು ಮುಂದುವರಿಯುವಿರಿ. ವಿಶ್ರಾಂತಿ ಪಡೆಯಿರಿ.
ಕುಂಭ
ಉತ್ತಮ ಕೆಲಸ ನಿರ್ವಹಣೆಯಿಂದ ಬಡ್ತಿಯ ವಿಚಾರ ಸುಳಿದಾಡಿ ಸಹೋದ್ಯೋಗಿಗಳ ಈರ್ಷ್ಯೆಗೆ ಕಾರಣವಾಗುತ್ತದೆ. ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಅನುಭವಕ್ಕೆ ಬಂದಲ್ಲಿ ತಡಮಾಡದೆ ವೈದ್ಯರನ್ನು ಭೇಟಿ ಮಾಡಿ.
ಮೀನ
ನಿರುದ್ಯೋಗಿಗಳು ಬಂದ ಅವಕಾಶವನ್ನು ಒಪ್ಪಿಕೊಳ್ಳುವುದು ಸದ್ಯದ ಪರಿಸ್ಥಿತಿಗೆ ಉತ್ತಮವಾಗಿ ಕಾಣುತ್ತದೆ. ಅಕ್ಕ-ಪಕ್ಕದವರಲ್ಲಿ ಸ್ನೇಹಪರ ಸ್ವಭಾವ ತೋರುವುದರಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು.