ADVERTISEMENT

ದಿನ ಭವಿಷ್ಯ: ಈ ರಾಶಿಯ ಆಟೋಮೊಬೈಲ್ ಎಂಜಿನಿಯರ್‌ಗಳಿಗೆ ವಿಶೇಷ ಲಾಭ ಪ್ರಾಪ್ತಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಮಾರ್ಚ್ 2024, 23:47 IST
Last Updated 13 ಮಾರ್ಚ್ 2024, 23:47 IST
   
ಮೇಷ
  • ಈ ದಿನ ಗ್ರಹಗಳು ಪೂರಕವಾಗಿವೆ. ನಿಮ್ಮಿಚ್ಛೆಯಂತೆ ಚಟುವಟಿಕೆಗಳು ನಡೆಯುವುದು . ನಿಮ್ಮ ಅಭಿರುಚಿಗೆ ತಕ್ಕ ವ್ಯಕ್ತಿಗಳೊಂದಿಗೆ ವ್ಯವಹರಿಸುವುದು ಹೆಚ್ಚು ಸೂಕ್ತವಾಗಿರುತ್ತದೆ.
  • ವೃಷಭ
  • ಭೋಗ ವಸ್ತುವಿನ ಖರೀದಿಯ ಅವಕಾಶವು ನಿಮ್ಮದಾಗಲಿದೆ. ದುಂದುವೆಚ್ಚ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಆಲೋಚನೆ ಮಾಡಬೇಕಾದೀತು. ಆಲಸ್ಯಮಯ ಸಮಯವನ್ನು ಅನುಭವಿಸುವಿರಿ.
  • ಮಿಥುನ
  • ಷೇರು ವ್ಯವಹಾರಗಳು ಇಂದು ಕೂಡಿ ಬರುವುವು. ಪರಿಶ್ರಮದ ಜೊತೆ ಅಧಿಕ ಸಮಯವನ್ನು ವೃತ್ತಿಯ ಕೆಲಸಕ್ಕೆ ಮೀಸಲಿಡುವುದರಿಂದ ಅಧಿಕ ಲಾಭ. ಕುಟುಂಬದವರೊಡನೆ ಮನರಂಜನೆಗಾಗಿ ಅಲ್ಪಕಾಲ ಮೀಸಲಿಡಲು ಪ್ರಯತ್ನಿಸಿ.
  • ಕರ್ಕಾಟಕ
  • ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪದಂತಹ ಸಮಸ್ಯೆಗಳು ಎದುರಾಗಬಹುದು, ಕಾಳಜಿವಹಿಸಿ. ಸಂಸಾರದ ವಿಚಾರದಲ್ಲಿ ಮನಸ್ತಾಪ ಬರದಂತೆ ಜಾಗ್ರತೆವಹಿಸಿ. ದುರ್ಗಾ ಸ್ತೋತ್ರ ಪಠಿಸಿದರೆ ಯಶಸ್ಸು ದೊರೆಯುವುದು.
  • ಸಿಂಹ
  • ಬಹಳ ಕಾಲದಿಂದ ಅಪೇಕ್ಷಿಸಿದ್ದ ವಸ್ತುವೊಂದು ಅಲ್ಪ ಶ್ರಮದಿಂದ ಈ ದಿನ ನಿಮಗೆ ದೊರಕಲಿದೆ. ನಿಮ್ಮೆಲ್ಲಾ ವ್ಯವಹಾರಗಳು ಬಹಿರಂಗವಾಗಿದ್ದರೆ ಒಳ್ಳೆಯದು. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಪರಿಶ್ರಮ ವಹಿಸಬೇಕಾಗುವುದು.
  • ಕನ್ಯಾ
  • ಯುವ ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ಲಭಿಸುವುದು. ಎಂದಿನಂತೆ ಮನಸ್ಸು ಹೆಚ್ಚು ಉಲ್ಲಾಸದಿಂದ ಕೂಡಿರುವುದರಿಂದ ಕಾರ್ಯಗಳು ಸರಾಗವಾಗಿ ನಡೆಯುವುದು. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.
  • ತುಲಾ
  • ಆಟೋಮೊಬೈಲ್ ಎಂಜಿನಿಯರ್‌ಗಳಿಗೆ ವಿಶೇಷ ಲಾಭ ಪ್ರಾಪ್ತಿ. ಕೆಲಸದಲ್ಲಿ ಅಪ್ರಾಮಾಣಿಕತೆ ಹಾಗು ದುಡುಕಿನ ನಿರ್ಧಾರ ತೆಗೆದುಕೊಂಡಲ್ಲಿ ಪಶ್ಚಾತಾಪ ಪಡಬೇಕಾದ ಸಂದರ್ಭ ಅನಿವಾರ್ಯ ಒದಗಿಬರುತ್ತದೆ.
  • ವೃಶ್ಚಿಕ
  • ಹಣ ಹೂಡಿಕೆಯ ವಿಷಯದಲ್ಲಿ ಇತರರ ಸಲಹೆಗಳಿಗೆ ಗಮನಕೊಡುವುದಕ್ಕಿಂತ ಅನಿಸಿಕೆಯಂತೆ ನಡೆಯುವುದು ಉತ್ತಮ. ದೇಹದಲ್ಲಿ ಅಧಿಕವಾದ ಉಷ್ಣಾಂಶದಿಂದ ಅನಾರೋಗ್ಯ ಉಂಟಾಗುವ ಸಂಭವವಿದೆ.
  • ಧನು
  • ಮಂಗಳ ಕಾರ್ಯಗಳ ಶುಭ ಸೂಚನೆಗಳು ಕಂಡುಬರುತ್ತವೆ. ಹಂತ ಹಂತವಾಗಿ ನಿಮ್ಮ ಆರ್ಥಿಕ ಸ್ಥಿತಿಯು ಗಟ್ಟಿಯಾಗುತ್ತಲೇ ಹೋಗಲಿದೆ. ದಿನದಿಂದ ದಿನಕ್ಕೆ ತಂದೆ-ತಾಯಿಯವರ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ.
  • ಮಕರ
  • ಸಗಟು ವ್ಯಾಪಾರಿಗಳಿಗೆ ಹೇರಳ ಲಾಭ ಇರಲಿದೆ. ಆರ್ಥಿಕವಾಗಿ ಸೌಕರ್ಯ ಪಡೆದುಕೊಳ್ಳುವಿರಿ. ಪ್ರಗತಿಯ ಲಕ್ಷಣಗಳು ನಿಚ್ಚಳವಾಗಿ ತೋರಿ ಬರುವುದು. ಕೋರ್ಟ್‌-ಕಚೇರಿಯಲ್ಲಿ ಸಮಯ ವ್ಯರ್ಥವಾಗಲಿದೆ.
  • ಕುಂಭ
  • ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ದಲ್ಲಾಳಿತನದ ವ್ಯವಹಾರದಲ್ಲಿ ಎಚ್ಚರವಹಿಸುವುದು ಸೂಕ್ತ. ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ನಾರಾಯಣನ ನಾಮ ಸ್ಮರಣೆ ಮಾಡಿದಲ್ಲಿ ಒಳ್ಳೆಯದಾಗುವುದು.
  • ಮೀನ
  • ಅಧಿಕ ಖರ್ಚು ವೆಚ್ಚಗಳಿಂದ ಮುಕ್ತಿಹೊಂದಲು ದುಸ್ಸಹವಾಸ, ದುರಭ್ಯಾಸದಿಂದ ಹೊರಬರುವ ಯೋಚನೆ ಮಾಡಿರಿ. ಕೃಷಿ ಭೂಮಿಗೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಏಜೆಂಟರ್‌ಗೆ ಲಾಭ ದೊರೆಯುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.