ADVERTISEMENT

ದಿನ ಭವಿಷ್ಯ: ಈ ರಾಶಿಯ ಹೂವು–ಹಣ್ಣುಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಜೂನ್ 2024, 0:08 IST
Last Updated 8 ಜೂನ್ 2024, 0:08 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಮ್ಮ ಸೃಜನಶೀಲತೆ, ಚಿಂತನಾ ಲಹರಿಗಳು ಹಾಗೂ ಕಾರ್ಯ ವೈಖರಿಯು ಇತರರಿಗೆ ವಿಭಿನ್ನವೆನಿಸಲಿದೆ. ಇತರರನ್ನು ಗೌರವಿಸುವುದು ಮತ್ತು ಮಾತು ಪರಾಮರ್ಶಿಸುವುದರ ಜೊತೆಗೆ ಮನ್ನಣೆಯೂ ಇರಲಿ.
  • ವೃಷಭ
  • ನಿಮ್ಮನ್ನು ಸಂದರ್ಶಿಸಲು ಬರುವ ವ್ಯಕ್ತಿಯ ಬಳಿ ದರ್ಪದಿಂದ ನಡೆದುಕೊಳ್ಳುವುದು ಸರಿಯಾದ ವರ್ತನೆ ಅಲ್ಲ. ಪ್ರಯಾಣ ವೇಳೆ ಸ್ನೇಹಿತರೊಂದಿಗೆ ಭೋಗ ವಸ್ತುವಿನ ಖರೀದಿಸುವ ಅವಕಾಶವು ಈ ದಿನ ನಿಮ್ಮದಾಗಲಿದೆ.
  • ಮಿಥುನ
  • ಹಿರಿಯರ ಜೊತೆಯಲ್ಲಿ ತೀರ್ಥಯಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಮಾಡುವುದರಿಂದ ದಿವ್ಯ ಅನುಭೂತಿಯೊಂದಿಗೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮೊಮ್ಮಕ್ಕಳ ಬಹಳ ದಿನದ ನಂತರದ ಭೇಟಿಯು ಸಂತಸ ತರಲಿದೆ.
  • ಕರ್ಕಾಟಕ
  • ನೀವು ನಿಮ್ಮ ನೀತಿ ನಿಯಮಗಳಿಗೆ ಬದ್ಧರಾದರೆ, ಸತ್ಯ ನಿಮ್ಮದಾಗಿದ್ದರೆ ಉದ್ಯೋಗದಲ್ಲಿ ಹೆದರುವ ಅಗತ್ಯವಿಲ್ಲ. ಚಾಣಕ್ಷತನದ ನಿಮ್ಮ ಮಾತುಗಳನ್ನು ಸರಿಯಾದ ಸಮಯದಲ್ಲಿ ಆಡುವುದು ಒಳಿತು.
  • ಸಿಂಹ
  • ಈ ದಿನ ನಿಮ್ಮನ್ನು ಎದುರು ಹಾಕಿಕೊಳ್ಳುವವರಿಗೆ ದೇವರು ತಕ್ಕ ಉತ್ತರ ನೀಡುತ್ತಾನೆ. ಆಶ್ಚರ್ಯಕರ ಘಟನೆ ನಡೆದು ದೇವರಿದ್ದಾನೆ ಎಂಬ ನಂಬಿಕೆ ವೈದ್ಯರ ಅನುಭವಕ್ಕೆ ಬರುವಂತಾಗಲಿದೆ.
  • ಕನ್ಯಾ
  • ಹೊಸ ವಾಹನ ಖರೀದಿಗೆ ಯೋಚಿಸಿದವರು ಸ್ವಲ್ಪ ದಿನಗಳ ಮಟ್ಟಿಗೆ ತಟಸ್ಥರಾಗಿರಿ. ನಿಮ್ಮ ಕೆಲಸಗಳ ಬಗೆಗೆ ಸಾರ್ವಜನಿಕರಿಂದ ನೇರವಾಗಿ ಪ್ರತಿಕ್ರಿಯೆ ಪಡೆಯುವುದರಿಂದ ಗುಣಮಟ್ಟ ವೃದ್ಧಿಸಿಕೊಳ್ಳಲು ಸಾಧ್ಯ.
  • ತುಲಾ
  • ಹೂವು-ಹಣ್ಣುಗಳ ಮಾರಾಟಗಾರರಿಗೆ ತಾವು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಲಾಭವನ್ನು ವ್ಯಾಪಾರದಲ್ಲಿ ಪಡೆದುಕೊಳ್ಳುವುದರಿಂದ ಸಂತೋಷ ಇರುವುದು. ಋಣಾತ್ಮಕ ಚಿಂತನೆಯು ಮಹಿಳೆಯರ ಆರೋಗ್ಯ ಹಾಳು ಮಾಡುತ್ತದೆ.
  • ವೃಶ್ಚಿಕ
  • ಮನೆ ಜಾಗದ ಪಾಲುದಾರಿಕೆ ವಿಷಯದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸ್ಥಿತಿ ಬರಲಿದೆ. ಯಾರೋ ಮಾಡಿದ ತಪ್ಪುಗಳಿಗೆ ಅಧಿಕಾರಿಗಳ ಜೊತೆ ನೀವೂ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶಗಳು ಎದುರಾಗಬಹುದು.
  • ಧನು
  • ದೈವಬಲದ ಕಾರಣ ಕೈಗೊಂಡ ಕೆಲಸ-ಕಾರ್ಯಗಳಲ್ಲಿ ಜಯ ಅಥವಾ ಹೊಸ ಕಾರ್ಯ ಕೈಗೊಳ್ಳಲು ಧೈರ್ಯ ಉಂಟಾಗಲಿದೆ. ನಿಮ್ಮ ಈ ದಿನದ ಪ್ರಮುಖ ಕೆಲಸಗಳಿಗೆ ಪೂರ್ವ ತಯಾರಿ ಅಗತ್ಯವೆನಿಸಲಿದೆ.
  • ಮಕರ
  • ನಿಮ್ಮ ಸಂಗಾತಿಯೊಂದಿಗೆ ಇದ್ದ ದೀರ್ಘಕಾಲದ ಸಮಸ್ಯೆ ಸಮಾಧಾನದಿಂದ ಮಾತನಾಡಿ ಪರಿಹರಿಸಿಕೊಳ್ಳುವಿರಿ. ನಿಮ್ಮಿಂದಾದ ಗಡಿಬಿಡಿಯನ್ನು ಇತರರ ಹೆಗಲ ಮೇಲೆ ಹೊರೆಸುವ ಮೂರ್ಖತನದ ಕೆಲಸ ಮಾಡದಿರಿ.
  • ಕುಂಭ
  • ಲೋಕದಲ್ಲಿ ಸಾಮಾನ್ಯವಾಗಿರುವ ಬದುಕಿನ ಪರಿಭಾಷೆಯಂತಲ್ಲದೆ ವಿಭಿನ್ನವಾಗಿ ಬದುಕಿ ತೋರಿಸುತ್ತೇವೆಂಬ ಕಲ್ಪನೆ ಹುಸಿಯಾಗಲಿದೆ. ಮಾದ್ಯಮ ಸಂಸ್ಥೆಗಳಲ್ಲಿರುವವರಿಗೆ ಉತ್ತಮ ದಿನವಾಗಿ ಪರಿಣಮಿಸಲಿದೆ.
  • ಮೀನ
  • ಕುಟುಂಬದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಎಲ್ಲದರಲ್ಲೂ ಹೆಚ್ಚಿನ ಜಾಗ್ರತೆ ವಹಿಸಿರಿ. ಅವರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಇದ್ದರೂ, ಅನಿವಾರ್ಯ ಕಾರಣಗಳಿಂದಾಗಿ ತಪ್ಪಿಸಿಕೊಳ್ಳಬೇಕಾಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.