ADVERTISEMENT

ದಿನ ಭವಿಷ್ಯ: ವಿದ್ಯಾಭ್ಯಾಸದಲ್ಲಿನ ಸಾಧನೆಗೆ ಗುರುಗಳ ಪ್ರೋತ್ಸಾಹ ಸಿಗುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಜೂನ್ 2024, 0:09 IST
Last Updated 9 ಜೂನ್ 2024, 0:09 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಮ್ಮ ಇಂದಿನ ದಿನದಲ್ಲಿ ಸಂಭವಿಸುವ ಹಲವಾರು ಘಟನೆಗಳಿಂದ ದಿವ್ಯಶಕ್ತಿಯ ಅನುಭೂತಿ ಸಿಗುತ್ತದೆ. ನೀವು ನಿರ್ಧರಿಸಿದ ರೀತಿಯಲ್ಲಿ ನಿಮ್ಮ ಜೀವನ ಇರುವುದು. ಈ ದಿನವು ನೆಮ್ಮದಿಯ ದಿನವೆನಿಸುವುದು.
  • ವೃಷಭ
  • ಸಹೋದರರಲ್ಲಿರುವ ವೈಷಮ್ಯಗಳು ಗಮನಕ್ಕೆ ಬರಲಿದೆ. ಜೀವನದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಅನಿವಾರ್ಯತೆ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ನೀವು ಇನ್ನೊಂದು ಮೆಟ್ಟಿಲು ಹತ್ತುವಂತಾಗಲಿದೆ.
  • ಮಿಥುನ
  • ಮಕ್ಕಳು ತಪ್ಪು ಮಾಡಿದಾಗ ಸಿಟ್ಟು ಬಂದರೂ, ತಿಳಿವಳಿಕೆ ಹೇಳುವುದರಿಂದ ಅವರನ್ನು ಸರಿದಾರಿಗೆ ತನ್ನಿ. ಮುಕ್ತ ಮಾತುಕತೆಯಿಂದಾಗಿ ವ್ಯವಹಾರಗಳು ನೀವು ಅಂದುಕೊಂಡ ರೀತಿಯಲ್ಲಿ ನಡೆಯಲಿವೆ.
  • ಕರ್ಕಾಟಕ
  • ನಿಮ್ಮ ಜೀವನದ ಸಂಕ್ರಮಣ ಕಾಲದಲ್ಲಿ ಎದುರಿಸಬಹುದಾದ ಗೊಂದಲಗಳಲ್ಲಿ ಸಂಗಾತಿಯು ನಿಮ್ಮ ಬೆನ್ನೆಲುಬಾಗಲಿದ್ದಾರೆ. ನಿಮ್ಮ ಕೆಟ್ಟ ಹಾಗೂ ಅನಾವಶ್ಯಕ ಆಲೋಚನೆಗಳು ಅನಾರೋಗ್ಯವನ್ನು ಅಧಿಕಗೊಳಿಸುವುದು.
  • ಸಿಂಹ
  • ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲಾ ಯೋಜನೆಗಳಲ್ಲಿ ಪ್ರಾಬಲ್ಯ ಸಾಧಿಸುವಿರಿ. ದುಡುಕು ನಿರ್ಧಾರದಿಂದ ವ್ಯವಹಾರದಲ್ಲಿ ಸೋಲಬೇಕಾಗುತ್ತದೆ. ಪ್ರೇಮಿಗಳ ಮನೋಕಾಮನೆಗಳು ಪೂರ್ಣಗೊಳ್ಳುವುದು.
  • ಕನ್ಯಾ
  • ಅನಾರೋಗ್ಯದ ಹೊರತಾಗಿಯೂ ಜವಾಬ್ದಾರಿಗಳನ್ನು ನಿಭಾಯಿಸಲೇ ಬೇಕಾದುದು ಮಾನಸಿಕ ಸಂಕಟಕ್ಕೆ ಕಾರಣವಾಗಬಹುದು. ಮಾತೃವರ್ಗದ ಸಂಬಂಧಿಗಳ ಮನೆಯಲ್ಲಿ ಮಂಗಳ ಕಾರ್ಯ ಜರುಗಲಿದೆ.
  • ತುಲಾ
  • ನಿಮ್ಮ ಸಹವರ್ತಿಗಳು ಕೆಲವು ಸನ್ನಿವೇಶಗಳಲ್ಲಿ ನಿಮ್ಮ ಪರವಾಗಿರುವಂತೆ ತೋರಿದರೂ, ಆತ ನಂಬಿಕೆಗೆ ಅರ್ಹನಾಗಿರುವುದಿಲ್ಲ. ದಾಂಪತ್ಯದಲ್ಲಿನ ಸಣ್ಣ ಪುಟ್ಟ ವಿಚಾರಗಳಿಂದ ಮಾನಸಿಕ ಅಸಮಾಧಾನ ಮಾಡಿಕೊಳ್ಳದಿರಿ.
  • ವೃಶ್ಚಿಕ
  • ಅವಿರೋಧ ಆಯ್ಕೆಗೆ ಒಲವು ತೋರಿದ್ದರಿಂದ ನೀವು ಸುಲಭವಾಗಿ ಸ್ಥಾನಗಳಿಸಲು ಸಫಲರಾಗುವಿರಿ. ತಾಳ್ಮೆ-ಸಮಾದಾನದಿಂದಾಗಿ ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ದೊರಕುವುದು.
  • ಧನು
  • ವೃತ್ತಿ ಜೀವನದಲ್ಲಿನ ಅಡೆತಡೆಗಳನ್ನು ಸುಲಭವಾಗಿ ನಿವಾರಿಸುವಿರಿ. ಮೇಲಧಿಕಾರಿಯ ಅಪರೂಪದ ಮೃದು ವರ್ತನೆಯಿಂದ ಕೆಲಸ ಕಾರ್ಯಗಳಲ್ಲಿ ತೃಪ್ತಿಯುಂಟಾಗುವುದು. ತಪ್ಪುಗಳನ್ನು ಮಾಡದಿರಿ.
  • ಮಕರ
  • ಮರಗೆಲಸ ಮಾಡುವವರಿಗೆ ಹೆಚ್ಚಿನ ಅವಕಾಶಗಳು ಬಂದರೂ, ಕೆಲಸಕ್ಕೆ ಸೋಮಾರಿತನ ಅಡ್ಡಿಯಾಗುವುದು. ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಆಶಾಕಿರಣ ದೊರೆಯಲಿದೆ.
  • ಕುಂಭ
  • ವಿದ್ಯಾಭ್ಯಾಸದಲ್ಲಿನ ನಿಮ್ಮ ಸಾಧನೆಗೆ ನಿಮ್ಮ ಗುರುಗಳ ಕಡೆಯಿಂದ ಪ್ರೋತ್ಸಾಹ ಸಿಗುವುದು. ಹೊಸ ಸ್ಥಳದಲ್ಲಿ ಹೊಂದಾಣಿಕೆ ಕಷ್ಟವಾಗಬಹುದು. ಮಕ್ಕಳೊಂದಿಗಿನ ಸುತ್ತಾಟ, ಮಾತುಕತೆ ಮನಸ್ಸಿಗೆ ಹಿತ ತರಲಿದೆ.
  • ಮೀನ
  • ಸಂಗಾತಿಯ ಅಪರೂಪದ ಹೊಗಳಿಕೆಯ ಮಾತುಗಳನ್ನು ಕೇಳಿ ಸಂತೋಷಪಡುವಿರಿ. ಶಾಂತ ಚಿತ್ತದಿಂದ ಕೆಲಸ ಮಾಡಿ. ಹಳೆಯ ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸುವುದು ಉತ್ತಮ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.