ದಿನ ಭವಿಷ್ಯ: ಈ ರಾಶಿಯವರಿಗೆ ಸಂಪಾದನೆಯ ವಿಷಯದಲ್ಲಿ ಆಸೆ ಇರಲಿ, ದುರಾಸೆ ಬೇಡ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಅಕ್ಟೋಬರ್ 2025, 23:30 IST
Last Updated 1 ಅಕ್ಟೋಬರ್ 2025, 23:30 IST
ದಿನ ಭವಿಷ್ಯ
ಮೇಷ
ನಿವೇಶನ ಕೊಳ್ಳುವ ನಿಮ್ಮ ಕನಸು ನನಸಾಗಲಿದೆ. ಕೆಲಸ ಕಾರ್ಯಗಳು ನಿಧಾನವಾಗಿಯಾದರೂ ಸಂಪೂರ್ಣವಾಗಿ ನೆರವೇರುವುದು. ಹೋಟೆಲ್ ಉದ್ಯಮದವರಿಗೆ ಇಂದು ಹೆಚ್ಚಿನ ವರಮಾನ ದೊರೆಯಲಿದೆ.
ವೃಷಭ
ಇನ್ನೊಬ್ಬರಿಗೆ ಮೋಸ ಮಾಡಲು ಪ್ರೇರೇಪಣೆ ಸಿಗಲಿದೆ. ಆದರೆ ನಿಮ್ಮ ಬುದ್ಧಿಯನ್ನು ಸ್ಥಿಮಿತದಲ್ಲಿ ಇರಿಸಿಕೊಳ್ಳಿರಿ. ರೈತರು ಧವಸ ಧಾನ್ಯಗಳನ್ನು ಪ್ರಾಣಿಪೀಡೆಗಳ ದಾಳಿಗೆ ತುತ್ತಾಗದಂತೆ ಜಾಗ್ರತೆಯನ್ನು ಮಾಡಿ ಸಂರಕ್ಷಿಸಿ.
ಮಿಥುನ
ಹೊಸ ಉದ್ಯೋಗಿಗಳಿಗೆ ಅವಿತರ ದುಡಿಮೆಯ ಬಿಸಿ ತಟ್ಟಲಿದೆ. ಸ್ವತಂತ್ರವಾಗಿ ತರಕಾರಿ, ಹಣ್ಣು, ಹೂವು ವ್ಯಾಪಾರ ನಡೆಸಲು ಯೋಚಿಸಿದವರಿಗೆ ಶುಭ ದಿನ. ವಿವಾಹಕ್ಕಾಗಿ ಧಾರ್ಮಿಕ ಮಾರ್ಗದಲ್ಲಿ ಪ್ರಯತ್ನವನ್ನು ಮಾಡಿರಿ.
ಕರ್ಕಾಟಕ
ಸಂಪಾದನೆಯ ವಿಷಯದಲ್ಲಿ ಆಸೆ ಇರಲಿ, ದುರಾಸೆ ಬೇಡ. ಅವಿತರ ಕಾರ್ಯದ ಒತ್ತಡಗಳು ದೇಹಕ್ಕೆ ಆಯಾಸವನ್ನು ತರಲಿದೆ. ಕಾರ್ಯ ಸಾಧನೆಗೆ ಪೂರಕವಾದಂತಹ ಸ್ನೇಹಿತನ ಬೇಟಿಯು ಹೆಚ್ಚಿನ ಸಂತೋಷವನ್ನು ಉಂಟುಮಾಡುತ್ತದೆ.
ಸಿಂಹ
ನಿಮ್ಮ ಸಹೋದ್ಯೋಗಿಗಳಿಗೆ ಆಗದಿರುವ ಹಾಗು ಅತ್ಯಂತ ಕ್ಲಿಷ್ಟಕರವಾದ ಸಮಸ್ಯೆಯನ್ನು ಬಿಡಿಸುವಲ್ಲಿ ಯಶಸ್ವಿಯಾಗುವಿರಿ. ಗೃಹಾಲಂಕಾರ ವಸ್ತುಗಳ ಖರೀದಿಯು ಮನೆಯಲ್ಲಿ ಹರ್ಷದ ವಾತಾವರಣವನ್ನು ಸೃಷ್ಟಿಸುತ್ತದೆ.
ಕನ್ಯಾ
ಕಾರ್ಯ ಕ್ಷೇತ್ರದ ಸಮಸ್ಯೆಗಳನ್ನು ಮನೆಗೆ ತರವುದು ಸರಿಯಲ್ಲ. ಮಹನೀಯರ ಸಂದೇಶ ವಾಣಿಗಳ ಪಾಲನೆ ಮಾಡುವಿರಿ. ಕೃಷಿ ಉತ್ಪನ್ನಗಳ ಸ್ವಂತ ವ್ಯವಹಾರ ನಡೆಸಲು ಇಂದು ಉತ್ತಮವಾದ ಸಮಯವಾಗಿರುತ್ತದೆ.
ತುಲಾ
ಆಟಿಕೆಗಳ ಅಥವಾ ಕ್ರೀಡಾ ವಸ್ತುಗಳ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಲಾಭದಾಯಕ ಬೆಳವಣಿಗೆ ಉಂಟಾಗುತ್ತದೆ. ಆಂಜನೇಯನ ಅನುಗ್ರಹವನ್ನು ಪಡೆದಲ್ಲಿ ಮಾನಸಿಕ ಧೈರ್ಯ ಹೆಚ್ಚಾಗುವುದು. ಹೈನು ಉತ್ಪನ್ನಗಳಿಂದ ಉತ್ತಮ ಆದಾಯ ಪಡೆಯುವಿರಿ.
ವೃಶ್ಚಿಕ
ಜಮೀನು ಖರೀದಿ ಅಥವಾ ಜಮೀನಿನ ಗುತ್ತಿಗೆಯಂತಹ ವ್ಯವಹಾರಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಪರಿಶ್ರಮ ವಹಿಸುವುದು
ಅಗತ್ಯವಾಗುತ್ತದೆ.
ಧನು
ಮನೆಯಲ್ಲಿ ಗುರು-ಹಿರಿಯರ ಶುಭ ಆಶೀರ್ವಾದದಿಂದ ಮಂಗಳ ಕೆಲಸ ನೆಡೆಯಲಿದೆ. ಹೊಸ ಮನೆಯನ್ನು ಕೊಳ್ಳುವ ಬಗ್ಗೆ ದಲ್ಲಾಳಿಗಳೊಂದಿಗೆ ಮಾತುಕತೆ ನಡೆಸಬಹುದು. ವ್ಯವಹಾರದಲ್ಲಿ ಸ್ವಲ್ಪ ಜಾಣತನವನ್ನು ಪ್ರದರ್ಶಿಸಿ.
ಮಕರ
ಈ ದಿನ ತಾಯಿಯ ಅಥವಾ ಬಾಳ ಸಂಗಾತಿಯ ಮಾತನ್ನು ಮೀರದಿರುವುದು ಲೇಸು. ಉದ್ಯೋಗದಲ್ಲಿ ಎದುರಾಗುವ ಆಯ್ಕೆಯಂಥಹ ಸಮಸ್ಯೆಗೆ ಈ ದಿನ ಉತ್ತರ ಕಂಡುಕೊಳ್ಳುವುದು ಸ್ವಲ್ಪ ಕಷ್ಟಕರವೆನಿಸುವುದು.
ಕುಂಭ
ಆರ್ಥಿಕವಾಗಿ ಬಲಿಷ್ಟರಾಗುವಿರಿ. ಕೃಷಿಯ ಮೇಲೆ ಹೆಚ್ಚು ಬಂಡವಾಳ ಹೂಡುವಿಕೆ ಲಾಭದಾಯಕವಾದದ್ದು. ಎಷ್ಟೆ
ಕಷ್ಟಬಂದರೂ ಸಹ ನೀವು ನಿಮ್ಮ ಗುರಿಯನ್ನು ಸಾಧಿಸಿಯೇ ತೀರುತ್ತೀರಿ ಎಂಬ ಹಠದಿಂದ ಕಾರ್ಯಪ್ರವೃತ್ತರಾಗಿರಿ.
ಮೀನ
ವಿವಾಹದ ಅಥವಾ ದಾಂಪತ್ಯದ ವಿಚಾರದಲ್ಲಿ ಅಂತಿಮವಾಗಿ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ. ಮನೆಯಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿಬಂದು ಅಶಾಂತಿಯ ವಾತಾವರಣ ಕಂಡುಬರಲಿದೆ.