ADVERTISEMENT

ದಿನ ಭವಿಷ್ಯ: ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಜನವರಿ 2026, 0:44 IST
Last Updated 2 ಜನವರಿ 2026, 0:44 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅಸಾಧ್ಯ ಕಾರ್ಯಗಳನ್ನೂಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ. ಇಷ್ಟಮಿತ್ರರಿಂದ ಸಕಾಲದಲ್ಲಿ ಸಹಕಾರ ಒದಗಿ ಬರಲಿದೆ. ವರ್ತಕ ವರ್ಗಕ್ಕೆ ಬಿಡುವು ಸಿಕ್ಕೀತು. ದೇವತಾ ಕಾರ್ಯಗಳಿಗೆ ಪ್ರಯಾಣ ಮಾಡಲಿದ್ದೀರಿ.
  • ವೃಷಭ
  • ಉದ್ಯೋಗದಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆ ಮಾಡುವವರು ಜಾಗ್ರತರಾಗಿರಿ. ಬುದ್ಧಿವಂತಿಕೆಯ ಬಲದಿಂದ ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ.
  • ಮಿಥುನ
  • ನಾಟಕ ಹಾಗೂ ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು ಇದ್ದು ಪ್ರೋತ್ಸಾಹಗಳು ದೊರೆತು ಸಮಾಜದಲ್ಲಿ ಸ್ಥಾನಮಾನಗಳಿಂದ ಉನ್ನತ ಸ್ಥಿತಿಗೆ ಬರುವಿರಿ. ಕಾರ್ಮಿಕ ವರ್ಗದವರ ಬೇಡಿಕೆಗಳು ಈಡೇರಲಿವೆ.
  • ಕರ್ಕಾಟಕ
  • ಕ್ರಮಿಸಿ ಬಂದ ದಾರಿಯನ್ನು ಅವಲೋಕಿಸಿದಲ್ಲಿ ತಲುಪಬೇಕೆಂದಿರುವ ಗುರಿ ದೂರವಿಲ್ಲವೆಂಬ ವಿಚಾರದಿಂದ ಉತ್ಸಾಹ ಹೊಂದುವಿರಿ. ಸ್ವಶಕ್ತಿಯಿಂದ ಜೀವನದಲ್ಲಿ ಮುಂಬರುವ ದಾರಿಯನ್ನು ಆರಿಸಿಕೊಳ್ಳಿ.
  • ಸಿಂಹ
  • ಪ್ರೀತಿಸುವವರ ಮಾರ್ಗದರ್ಶನದಿಂದ ಜೀವನದಲ್ಲಿನ ನಿರುತ್ಸಾಹವು ದೂರಾಗಲಿದೆ. ವೈಯಕ್ತಿಕ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುವ ಸಂಭವವಿದೆ. ಪ್ರಾಧ್ಯಾಪಕರಿಗೆ ಮತ್ತು ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಶುಭದಿನ.
  • ಕನ್ಯಾ
  • ಗೃಹ ನಿರ್ಮಾಣ ಕಾರ್ಯವು ಆಮೆಯ ವೇಗದಲ್ಲಿ ಸಾಗುವುದರಿಂದ ಮನಸ್ಸಿಗೆ ತುಸು ತಳವಳ, ಹೆದರಿಕೆ, ಆತಂಕ ಮೂಡಲಿವೆ. ಸಾಧು ಸಂತರ ಅಥವಾ ಪೀಠಾಧಿಪತಿಗಳ ದರ್ಶನ ಆಕಸ್ಮಿಕವಾಗಿ ಸಿಗಲಿದೆ.
  • ತುಲಾ
  • ಉತ್ತಮ ಸಂಸ್ಕೃತಿಯನ್ನು ಪಡೆದಿರುವ ಕೆಲಸ ಕಾರ್ಯಗಳಲ್ಲಿ ಖಂಡಿತವಾಗಿ ಜಯ ಸಿಗುವುದು. ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ಶ್ರೀ ಲಲಿತಾ ಸಹಸ್ರಮಾನ ಸ್ತೋತ್ರ ಪಠಣೆ ಶ್ರೇಯಸ್ಕರ .
  • ವೃಶ್ಚಿಕ
  • ಅಸಹಾಯಕ ಪರಿಸ್ಥಿತಿಯಲ್ಲಿರುವ ಪರಿಣತರ ಸಲಹೆಗಳೊಂದಿಗೆ ಗಣಪತಿಯ ಆರಾಧನೆಯಿಂದ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ. ಕೋರ್ಟು ವ್ಯವಹಾರಗಳನ್ನು ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳುವಿರಿ.
  • ಧನು
  • ಕಾರ್ಯಕ್ಷೇತ್ರದಲ್ಲಿ ಎಚ್ಚರ ವಹಿಸದೆ ಅತಿ ವಿಶ್ವಾಸದಿಂದ ಮುಂದುವರಿದರೆ ಮೇಲಧಿಕಾರಿಗಳಿಂದ ಮುಖಭಂಗವಾಗಬಹುದು. ಮನೆಯವರಿಗೆ ನಿರ್ಧಾರವನ್ನು ಸ್ಪಷ್ಟ ಹಾಗೂ ಮೃದು ಮಾತುಗಳಲ್ಲಿ ತಿಳಿಸಿ.
  • ಮಕರ
  • ಮಹಿಳೆಯರಿಗೆ ತವರಿನವರ ಆಗಮನವು ಅತೀವ ಸಂತೋಷಕ್ಕೆ ಕಾರಣವಾಗುವುದು. ಶತ್ರುಗಳ ಬಣ್ಣ ಬಯಲಾಗುವುದು. ಅಡಿಕೆ ಬೆಳೆಗಾರರು ದಾಸ್ತಾನು ಬೆಳೆಯಿಂದ ಲಾಭವನ್ನು ಹೊಂದುವಿರಿ. ಹಲ್ಲಿನ ಆರೋಗ್ಯ ಗಮನಿಸಿ.
  • ಕುಂಭ
  • ಸಾಂಸಾರಿಕ ಸಮಸ್ಯೆಗಳಿಂದ ವೃತ್ತಿಯಲ್ಲಿ ಬಿಡುವು ಮಾಡಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಮಗನ ಮುಂದಿನ ಓದಿನ ವಿಷಯ ಕುಟುಂಬದಲ್ಲಿ ಚರ್ಚೆಗೆ ಬರುವುದು. ಅವಿವಾಹಿತರಿಗೆ ಕಂಕಣ ಭಾಗ್ಯ ಇದೆ.
  • ಮೀನ
  • ರಾಜಕಾರಣಿಗಳು ಸಮಯವನ್ನು ಸಾಮಾಜಿಕ ಹಿತಾಸಕ್ತಿಗಾಗಿ ಕಳೆಯಬೇಕಾಗುವುದು. ಅನ್ನದಾನ ಮಾಡುವ ಯೋಚನೆಗಳು ಬರಲಿವೆ. ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.