ADVERTISEMENT

ದಿನ ಭವಿಷ್ಯ: ದೂರ ಸಂಚಾರದಲ್ಲಿ ಕಾರ್ಯಾನುಕೂಲ ತೋರಿಬಂದು ಮಾನಸಿಕ ನೆಮ್ಮದಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ನವೆಂಬರ್ 2025, 22:40 IST
Last Updated 6 ನವೆಂಬರ್ 2025, 22:40 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನೀತಿ ನಿಯಮಗಳಿಗೆ ಬದ್ಧರಾದರೆ, ಉದ್ಯೋಗದಲ್ಲಿ ಹೆದರುವ ಅವಶ್ಯಕತೆ ಕಂಡುಬಾರದು. ಜೀವನದ ಕೆಲವು ಪ್ರಮುಖ ಸಮಾರಂಭಕ್ಕೆ ಕ್ಷಣಗಣನೆ ಮಾಡುವಂಥರಾಗುವಿರಿ. ಧಾರ್ಮಿಕ ವ್ಯಕ್ತಿಗಳಿಗೆ ಶುಭ.
  • ವೃಷಭ
  • ಸಾರ್ವಜನಿಕರಿಂದ ನೇರವಾಗಿ ಕೆಲಸಗಳ ಬಗೆಗಿನ ಪ್ರತಿಕ್ರಿಯೆ ಪಡೆಯುವುದರಿಂದ ಗುಣಮಟ್ಟ ವೃದ್ಧಿ. ತಾಯಿಯ ಮೂಲಕ ಬರಬೇಕಾದ ಪಿತ್ರಾರ್ಜಿತ ಆಸ್ತಿಗೆ ಪ್ರಯತ್ನ ಬೇಕಾಗುತ್ತದೆ.
  • ಮಿಥುನ
  • ಹವ್ಯಾಸಿ ಛಾಯಾಗ್ರಾಹಕರಿಗೆ ಪ್ರಶಸ್ತಿ ಲಭಿಸುವುದು. ದೂರ ಸಂಚಾರದಲ್ಲಿ ಕಾರ್ಯಾನುಕೂಲ ತೋರಿಬಂದು ಮಾನಸಿಕ ನೆಮ್ಮದಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಸಹಾಯ ಪಡೆಯಿರಿ.
  • ಕರ್ಕಾಟಕ
  • ಯಶಸ್ಸು, ಹೆಸರು ಪ್ರಯತ್ನ ಬೇಕಾದಷ್ಟೇ ಇದ್ದರೂ ಒಲಿದು ಬರುವುದು ಕಷ್ಟಕರ ಸಂಗತಿ. ಕುಟುಂಬ ಸ್ಥಾನದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಎಲ್ಲದರಲ್ಲೂ ಜಾಗ್ರತೆ ವಹಿಸಿರಿ.
  • ಸಿಂಹ
  • ಇತರರನ್ನು ಗೌರವಿಸುವುದು ಮತ್ತು ಇತರರ ಮಾತನ್ನು ಪರಾಮರ್ಶಿಸುವುದರ ಜತೆಗೆ ಮನ್ನಣೆ ಇರಲಿ. ಗಂಭೀರ ಚಿತ್ತ ಹಾಗೂ ದೃಢ ಮನಸ್ಸಿನಿಂದ ಕೈಗೊಂಡ ಕೆಲಸಗಳು ಕಾರ್ಯಗತವಾಗಲಿವೆ.
  • ಕನ್ಯಾ
  • ಲೋಕದಲ್ಲಿ ಸರ್ವೇಸಾಮಾನ್ಯವಾಗಿರುವ ಬದುಕಿನ ಪರಿಭಾಷೆಯಂತಲ್ಲದೆ ವಿಭಿನ್ನವಾಗಿ ಬದುಕಿ ತೋರಿಸುತ್ತೇವೆಂಬ ಕಲ್ಪನೆ ಹುಸಿಯಾಗುತ್ತದೆ. ಅನವಶ್ಯಕವಾದ ಖರ್ಚು ಹೆಚ್ಚಾಗಲಿದೆ.
  • ತುಲಾ
  • ದ್ರವಾಹಾರದ ಸೇವನೆ ಕಡಿಮೆ ಆಗಿ ಚರ್ಮದಲ್ಲಿ ಶುಷ್ಕತೆ ಉಂಟಾಗುತ್ತದೆ. ಸ್ಥಿರ ಆಸ್ತಿಯನ್ನು ಉಳಿಸಿಕೊಳ್ಳಲು ಕೋರ್ಟು ಕಚೇರಿಯನ್ನು ಪ್ರತಿನಿತ್ಯವೂ ಅಲೆಯುವಂತೆ ಆಗುತ್ತದೆ.
  • ವೃಶ್ಚಿಕ
  • ಹಿರಿಯರ ಜತೆಯಲ್ಲಿ ತೀರ್ಥಯಾತ್ರೆಗೆ ಪಾಲ್ಗೊಂಡು ದೇವರ ದರ್ಶನ ಮಾಡುವುದರಿಂದ ದಿವ್ಯ ಅನುಭೂತಿಯೊಂದಿಗೆ ಮನಸ್ಸಿಗೆ ನೆಮ್ಮದಿ ಸಿಗುವುದು. ವಾಹನ ಖರೀದಿ ವಿಚಾರದಲ್ಲಿ ತಟಸ್ಥರಾಗಿರಿ.
  • ಧನು
  • ಕೆಲಸ ಮತ್ತು ದುಡಿಮೆ ಸಮೃದ್ಧಿಯಾಗಿ ಇಲ್ಲವಾದರೂ ಕೌಟುಂಬಿಕ ನೆಮ್ಮದಿಗೆ ಕೊರತೆ ಕಾಣುವುದಿಲ್ಲ. ಹೊಸ ನೀರು ಬಂದಾಗ ಹಳೆಯ ನೀರು ಹೋಗುವುದು ಸಹಜ.
  • ಮಕರ
  • ಮನೆಯಲ್ಲಿ ಯುದ್ಧದ ವಾತಾವರಣವನ್ನು ಮನೆಯ ಯಜಮಾನತಿಯ ಸ್ಥಾನದಲ್ಲಿ ನಿಂತು ತಿಳಿಗೊಳಿಸಬೇಕಾದುದು ಅನಿವಾರ್ಯದ ಕರ್ತವ್ಯ. ಪ್ರೇಮಿಗಳ ಮನೋಕಾಮನೆಗಳು ಪೂರ್ಣಗೊಳ್ಳಲಿವೆ.
  • ಕುಂಭ
  • ಜೀವನ ರೂಪಿಸಿಕೊಳ್ಳಲು ನಿರ್ಧರಿಸಿದ ಪ್ರೇಮಿಗಳಿಗೆ ತಮ್ಮ ಸಹೋದರರಿಂದ ಸ್ಪಂದನೆ ಸಿಗುವ ಅವಕಾಶಗಳಿವೆ. ಸೃಜನಶೀಲತೆ, ಚಿಂತನಾ ಲಹರಿಗಳು, ಕಾರ್ಯವೈಖರಿಯು ವಿಭಿನ್ನವೆನಿಸುವುದು.
  • ಮೀನ
  • ಸಹವರ್ತಿಗಳು ಕೆಲವು ಸನ್ನಿವೇಶದಲ್ಲಿ ಪರವಾಗಿರುವಂತೆ ತೋರಿದರೂ ನಂಬಿಕೆಗೆ ಅರ್ಹರಾಗಿ ಇರುವುದಿಲ್ಲ. ಮಾತಿನ ಮೇಲೆ ಆತ್ಮವಿಶ್ವಾಸ ಮತ್ತು ಹಿಡಿತವಿರಲಿ. ಹಳೆಯ ಕಾರಿನ ಮಾರಾಟ ವಿಷಯ ಕೈಬಿಡಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.