ದಿನ ಭವಿಷ್ಯ: ಸಾಂಸಾರಿಕವಾಗಿ ತಪ್ಪು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿ..
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
ಮೇಷ
ಕೃಷಿ ಕ್ಷೇತ್ರದಲ್ಲಿನ ಪ್ರಯತ್ನವನ್ನು ನಿಲ್ಲಿಸದೆ ಜಾಗರೂಕತೆಯಿಂದ ಕೆಲಸ ಮುಂದುವರಿಸಿ. ಮೇಲಧಿಕಾರಿಗಳ ಸಲಹೆ ಸೂಚನೆಗಳನ್ನು ಪಾಲಿಸಿ, ಅವರು ನಿಮ್ಮನ್ನು ಒಪ್ಪಿಕೊಳ್ಳಲಿದ್ದಾರೆ.
ವೃಷಭ
ಶತ್ರುಗಳಿಗೂ ಶುಭ ಹಾರೈಸುವ ರೀತಿಯಲ್ಲಿ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ಶ್ರೇಯಸ್ಸು ಉಂಟಾಗುವುದು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮೊದಲು ಮಹಾಗಣಪತಿಯ ಸೇವೆ ಮಾಡಿರಿ.
ಮಿಥುನ
ಕೌಟುಂಬಿಕ ವಾದ ವಿವಾದಗಳು ನಡೆಯದಂತೆ, ಎಲ್ಲರಲ್ಲೂ ಹೊಂದಾಣಿಕೆ ಇರುವಂತೆ ನಡವಳಿಕೆ ಇರಲಿ. ನಾಯಕತ್ವದ ಗುಣವು ಸಹೋದ್ಯೋಗಿಗಳ ಸಹಕಾರದಿಂದ ಅಭಿವೃದ್ಧಿ.
ಕರ್ಕಾಟಕ
ಯಶೋದಾಯಕ ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸುವಲ್ಲಿ ಪತ್ನಿ ಸಲಹೆಯನ್ನು ಸ್ವೀಕರಿಸಿ. ಪ್ರತಿಷ್ಠಿತ ಅಧಿಕಾರಕ್ಕಾಗಿ ಸಮಬಲ ಹೋರಾಟ ನಡೆಸುವ ತೀರ್ಮಾನ ಮಾಡಬಹುದು.
ಸಿಂಹ
ಮಕ್ಕಳ ಮಾನಸಿಕ ಬೆಳವಣಿಗೆ ಮತ್ತು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ. ಏಕಾಗ್ರತೆಯನ್ನು ಕಾಯ್ದುಕೊಳ್ಳುವ ಮಾರ್ಗ ಕಂಡುಕೊಳ್ಳಿರಿ. ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆ, ರಿಪೇರಿ ಮಾಡುವವರಿಗೆ ಸುದಿನ.
ಕನ್ಯಾ
ಸಕಾರಾತ್ಮಕ ಮನೋಭಾವ ಕಳೆದು ಹೋದಂತಿದ್ದ ಕಲೆಯಲ್ಲಿನ ಆಸಕ್ತಿಯನ್ನು ಮತ್ತೆ ಮರುಕಳಿಸುವಂತೆ ಮಾಡುವುದು. ತಂದೆಯವರಿಗೆ ಇದ್ದ ಹೃದಯ ಸಂಬಂಧಿ ವ್ಯಾಧಿಯು ಉತ್ತಮ ರೀತಿಯಲ್ಲಿ ಸುಧಾರಿಸಲಿದೆ.
ತುಲಾ
ಪೊಲೀಸ್ ಹುದ್ದೆಯಲ್ಲಿ ಇರುವವರಿಗೆ ಕಾರ್ಯಾಚರಣೆಗೆ ಕುಟುಂಬ ದಿಂದ ದೂರ ಇರುವ ಪರಿಸ್ಥಿತಿ ಅಥವಾ ದೂರ ಸಂಚಾರ ಮಾಡಬೇಕಾಗಬಹುದು. ಸಾಂಸಾರಿಕವಾಗಿ ತಪ್ಪು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿ.
ವೃಶ್ಚಿಕ
ಸೋಮಾರಿತನ ಅಥವಾ ಬೇಜವಾಬ್ದಾರಿತನದಿಂದ ಮಾಡಿದ ತಪ್ಪುಗಳಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಪ್ರೀತಿಯ ವಿಷಯದಲ್ಲಿ ಮುಂದೇನು ಮಾಡಬೇಕೆಂಬ ಸೂಚನೆ ಲಭಿಸುವುದು. ಕಾರ್ಮಿಕರ ಬೇಡಿಕೆ ಪರಿಶೀಲಿಸುವಿರಿ.
ಧನು
ಅತಿಯಾದ ಆಲಸ್ಯ, ಅಹಂಕಾರ, ಉಚಿತವಲ್ಲದ ಮಾತುಗಾರಿಕೆ ಗೌರವವನ್ನು ಕಡಿಮೆ ಮಾಡುವುದು. ಷೇರು ಪೇಟೆಯ ವ್ಯವಹಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ. ಲಾಭಾಂಶ ಕಡಿಮೆ ಇರುವುದು
ಮಕರ
ಸ್ನೇಹಿತರ ವ್ಯವಹಾರದಲ್ಲಿ ಸಂಶಯ, ಅಪನಂಬಿಕೆ ಬಾರದಂತೆ ಕಾರ್ಯನಿರ್ವಹಿಸಿ. ಸಂಬಂಧ ಗಟ್ಟಿಯಾಗಿರುತ್ತದೆ. ರಾಜಕೀಯ ವಿಚಾರ ಚರ್ಚಿಸಲು ರಾಜಕೀಯ ಗುರುವಿನ ಸ್ಥಳಕ್ಕೆ ತೆರಳುವ ಸಂಭವ ಇರಲಿದೆ.
ಕುಂಭ
ಹೆಜ್ಜೆ ಬಿರುಸಾಗಿ ಮತ್ತು ಕೇವಲ ನಿಮಗಲ್ಲದೇ ಸಂಸ್ಥೆಗೂ ಲಾಭದಾಯಕವಾಗಲಿದೆ. ಬುದ್ಧಿಯು ಮಂದಗತಿಯಲ್ಲಿ ಸಾಗುವುದು. ಚೋರ ಕೃತ್ಯಗಳಿಗೆ ಪರಿಹಾರವಾಗಿ ವ್ಯವಹಾರ ಕ್ಷೇತ್ರದ ರಕ್ಷಣಾ ದೇವತೆಯನ್ನು ಆರಾಧಿಸಿ.
ಮೀನ
ವ್ಯವಹಾರದಲ್ಲಿ ಆದಾಯ ಕಡಿಮೆ ಎಂದು ಅನಿಸಿದರೂ ಹೆದರುವ ಅಥವಾ ಬದಲು ಮಾಡುವ ಅವಶ್ಯಕತೆ ಇರುವುದಿಲ್ಲ. ಪ್ರೀತಿ ಪಾತ್ರರಲ್ಲಿನ ಅಭಿಪ್ರಾಯ ವಿನಿಮಯಗಳಿಂದ ಮನಸ್ಸಿಗೆ ಆನಂದ, ನೆಮ್ಮದಿ ಮೂಡುವುದು.