ADVERTISEMENT

Horoscope Today | ದಿನ ಭವಿಷ್ಯ: ಈ ರಾಶಿಯವರ ನಡವಳಿಕೆಯು ಮನೆಯಲ್ಲಿ ಸಂತಸ ಮೂಡಿಸುತ್ತದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
   
ಮೇಷ
  • ಆಟಿಕೆಗಳ ಮಾರಾಟದವರಿಗೆ ಉತ್ತಮ ಮಾರಾಟ ಹಾಗೂ ಲಾಭ ಸಿದ್ಧಿಸುತ್ತದೆ. ಮದುವೆ ಕೆಲಸಗಳಿಂದಾಗಿ ಓಡಾಟ ಹೆಚ್ಚುವುದು. ಕಾರ್ಮಿಕರ ಬೇಜವಾಬ್ದಾರಿತನದಿಂದಾಗಿ ಲಾಭಕ್ಕೆ ತೊಂದರೆ ಉಂಟಾಗಬಹುದು.
  • ವೃಷಭ
  • ಸೋಮಾರಿತನ, ಅತಿಯಾದ ನಿದ್ದೆ ಕಾರ್ಯಕ್ಕೆ ಭಂಗವನ್ನು ತರಲಿದೆ. ಪರಿಸರದ ಸನ್ನಿವೇಶವೂ ಇದಕ್ಕೆ ಪೂರಕವಾಗಿರುವುದು. ರಕ್ಷಣಾ ವೃತ್ತಿಗೆ ಸಂಬಂಧಿಸಿದವರು ಎಚ್ಚರದಿಂದ ಕಾರ್ಯ ನಿರ್ವಹಿಸಿ.
  • ಮಿಥುನ
  • ತಾಯಿಯ ದೇಹದಲ್ಲಿ ವಾಯು ಪ್ರಕೋಪದಿಂದಾಗಿ ಹಲವು ಸಮಸ್ಯೆಗಳು ಕಾಡಬಹುದು. ಅವರ ಆರೋಗ್ಯ ಸುಧಾರಿಸಲು ಧಾರ್ಮಿಕ ಕಾರ್ಯ ಮಾಡಿ. ಪ್ರೇಮಿಗಳ ಪಾಲಿಗೆ ಮಹತ್ತರ ಬೆಳವಣಿಗೆ ಕಂಡುಬರಲಿದೆ.
  • ಕರ್ಕಾಟಕ
  • ಬದುಕಿನಲ್ಲಿ ಸಕಾರಾತ್ಮಕವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿ. ಇಂದಿನ ದಿನದ ಕೆಲಸ, ಇಂದಿನ ದಿನವೇಮುಗಿಸುವುದನ್ನು ಕಾರ್ಯರೂಪಕ್ಕೆ ತಂದುಕೊಳ್ಳಿರಿ.ಶನೈಶ್ಚರನ ದರ್ಶನ ಮಾಡಿ ಕೃಪೆಗೆ ಪಾತ್ರರಾಗಿ.
  • ಸಿಂಹ
  • ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಮತ್ತು ಕಥೆ, ಕವನದ ಬರಹಗಾರರಿಗೆ ಅವಕಾಶ ಹೆಚ್ಚಲಿದೆ. ಪತ್ರಿಕಾರಂಗದವರಿಗೆ ಶುಭ ದಿನ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಮೂಡಲಿದೆ.
  • ಕನ್ಯಾ
  • ಯೋಜನೆಗಳು ಸ್ಥಗಿತಗೊಂಡಂತೆ ಆಗಬಹುದು. ಕೃಷಿ ಕಾರ್ಯಗಳು ಚುರುಕುಗೊಂಡು ರೈತಾಪಿ ವರ್ಗದವರಲ್ಲಿ ಸಂತಸ ಮೂಡಲಿದೆ. ಸಡಗರದಲ್ಲಿ ವಸ್ತ್ರಾಭರಣ ಖರೀದಿಗೆ ಹಣ ವಿನಿಯೋಗ ಮಾಡುವಿರಿ.
  • ತುಲಾ
  • ಆರನೆಯ ಇಂದ್ರಿಯದ ಸೂಚನೆಯ ಸಹಾಯ ಉಪಯುಕ್ತವಾಗಲಿದೆ. ವ್ಯಾಪಾರದಲ್ಲಿ ಅತೀವ ಆಸಕ್ತಿ ಮೂಡುತ್ತದೆ. ಅಧಿಕ ಲಾಭಂಶ ಹೊಂದುವಿರಿ. ಅಪೇಕ್ಷಿಗಳಿಗೆ ಸಂತಾನ ಭಾಗ್ಯ ದೊರೆಯುವುದು.
  • ವೃಶ್ಚಿಕ
  • ಆತಂಕ ತುಂಬಿದ ಕೆಲಸಕಾರ್ಯದಲ್ಲಿರುವವರ ಮನೆಯಲ್ಲಿ ನೆಮ್ಮದಿ ತುಂಬುವುದು. ಸುಂದರ ಸಂಜೆ ನಿಮ್ಮದಾಗುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಮತ್ತು ಪ್ರಯಾಣ ನಡೆಸುವಾಗ ನಯವಂಚಕರ ಬಗ್ಗೆ ಎಚ್ಚರವಹಿಸಿ.
  • ಧನು
  • ಹಿಂಜರಿಕೆಯ ಸ್ವಭಾವದಿಂದ ವೃತ್ತಿಯನ್ನು ಸಂಪಾದಿಸಲು ಕಷ್ಟವಾಗುತ್ತದೆ. ಈ ದಿನ ದೇವತಾನುಗ್ರಹದಿಂದ ಆರ್ಥಿಕ ಖರ್ಚು-ವೆಚ್ಚಗಳ ಸಮತೋಲನ, ಕುಟುಂಬದಲ್ಲೂ ತೃಪ್ತಿ, ಅರೋಗ್ಯದಿಂದ ಮಾನಸಿಕ ಶಾಂತಿ ಕಾಣುವಿರಿ.
  • ಮಕರ
  • ನಡವಳಿಕೆಯು ಮನೆಯವರಲ್ಲಿ ಸಂತಸವನ್ನು ಮೂಡಿಸುತ್ತದೆ. ಹಾಲು, ಮೊಸರು, ತುಪ್ಪದಂತಹ ಗೋ ಉತ್ಪನ್ನ ವಸ್ತುಗಳ ಮಾರಾಟಗಾರರಿಗೆ ಲಾಭವಾಗಲಿದೆ. ಆಧ್ಯಾತ್ಮಿಕ ವಿಚಾರಗಳತ್ತ ಗಮನ ಹರಿಸುವಿರಿ.
  • ಕುಂಭ
  • ಮಕ್ಕಳ ಮದುವೆಯಂತಹ ವಿಚಾರವನ್ನು ತಿಳಿ ಮನಸ್ಸಿನಿಂದ ಆಲೋಚಿಸಿ, ಸಮಸ್ಯೆಗಳಿಗೆ ಉತ್ತರ ಸಿಗುವುದು. ಅನಿರೀಕ್ಷಿತ ಪ್ರಯಾಣ ಬದುಕಿನ ಹೊಸ ದಾರಿಗೆ ಕಾರಣವಾಗಲಿದೆ. ಧನವ್ಯಯದಲ್ಲಿ ಗಮನವಿರಲಿ .
  • ಮೀನ
  • ಬೆಂಕಿಯಿಂದ ಅಥವಾ ಸುಡುವ ಪದಾರ್ಥದಿಂದ ದೂರವಿರುವುದು ಉತ್ತಮ. ಪಿತ್ತಕೋಶಕ್ಕೆ ಸಂಬಂ ಧಿಸಿದಂತೆ ಅನಾರೋಗ್ಯಗಳು ಎದುರಾಗ ಬಹುದು. ತಾಯಿ ದುರ್ಗಾಪರಮೇಶ್ವರಿಯ ಆರಾಧನೆಯಿಂದ ಶುಭಪ್ರಾಪ್ತಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.