ದಿನ ಭವಿಷ್ಯ: ಮನೆಯಲ್ಲಿ ಶಾಂತ ವಾತಾವರಣವಿದ್ದು ಮನಸ್ಸಿಗೆ ತುಸು ನೆಮ್ಮದಿ ಬರುವುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಜುಲೈ 2024, 23:34 IST
Last Updated 25 ಜುಲೈ 2024, 23:34 IST
ದಿನ ಭವಿಷ್ಯ
ಮೇಷ
ಅಸಾಧಾರಣ ಸಾಧನೆಗಳಿಗಾಗಿ ಪ್ರಶಂಸೆಯ ನುಡಿ ಮತ್ತು ಸನ್ಮಾನಗಳನ್ನು ಪಡೆಯುವಿರಿ. ವ್ಯವಹಾರದಲ್ಲಿ ಕೊಂಚ ಹಿನ್ನಡೆ ಉಂಟಾಗುವ ಲಕ್ಷಣ ತೋರುವುದು. ಸಾಂಸಾರಿಕ ಸುಖ, ನೆಮ್ಮದಿ ಹೆಚ್ಚಾಗುವುದು.
ವೃಷಭ
ಚಂಚಲ ಮನೋಭಾವದಿಂದಾಗಿ ತೀರ್ಮಾನ ತೆಗೆದುಕೊಳ್ಳುವುದು ಕಷ್ಟಕರ ಎನಿಸುವುದು. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭ ಗಳಿಸಬಹುದು. ವ್ಯವಸಾಯದ ಕೆಲಸಗಳಿಗೆ ಶ್ರಮ ಪಡುವಂತಾಗಲಿದೆ.
ಮಿಥುನ
ಯಾವುದೇ ಹೊಸ ಉದ್ಯೋಗ ಒಪ್ಪಿಕೊಳ್ಳುವಾಗ ಅಥವಾ ಕರಾರಿಗೆ ಸಹಿ ಮಾಡುವಾಗ ಜಾಣತನದಿಂದ ಓದಿ ತಿಳಿದು ಒಪ್ಪಿಕೊಳ್ಳಿ. ಗುರಿಯನ್ನು ತಲುಪುವಲ್ಲಿ ಶ್ರಮವು ಸಾರ್ಥಕವೆನಿಸುವುದು.
ಕರ್ಕಾಟಕ
ಔದ್ಯೋಗಿಕ ವ್ಯವಹಾರದಲ್ಲಿ ನಿರೀಕ್ಷೆಗೆ ತಕ್ಕ ಅಥವಾ ಅದಕ್ಕೂ ಮಿಗಿಲಾದ ಫಲಗಳು ದೊರೆತು ನೆಮ್ಮದಿಯನ್ನು ಕಾಣುವಂತಾಗುವುದು. ಕಲ್ಲಿನ ಅಥವಾ ಟೈಲ್ಸ್ ಕೆಲಸ ಮಾಡುವವರು ಜಾಗ್ರತೆ ವಹಿಸಿ.
ಸಿಂಹ
ಯಾವ ಕೆಲಸಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಯೋಚಿಸಿ ನಂತರದಲ್ಲಿ ಕಾರ್ಯಶೀಲರಾಗುವುದು ಉತ್ತಮ. ಅಭಿವೃದ್ಧಿಯಲ್ಲಿ ಹಲವು ಅಡೆತಡೆಗಳು ಮತ್ತು ಆತಂಕಕಾರಿ ವಿಚಾರಗಳು ಎದುರಾಗುವುದು.
ಕನ್ಯಾ
ಬಹಳ ದಿನಗಳ ನಂತರದ ಸಹೋದರಿಯ ಗೃಹಾಗಮನ ತಂದೆ-ತಾಯಿಯ ಸಂತೋಷಕ್ಕೆ ಕಾರಣವಾಗುತ್ತದೆ. ಎಲೆಕ್ಟ್ರಿಕಲ್ ಕಂಟ್ರಾಕ್ಟ್ ಮಾಡುವವರಿಗೆ ಉತ್ತಮ ಉದ್ಯೋಗ ದೊರೆತು ಸಂತೋಷ ಸಿಗಲಿದೆ.
ತುಲಾ
ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನಗಳು ಲಭಿಸುತ್ತವೆ. ದಿನಗೂಲಿ ನೌಕರರಿಗೆ ಅನುಕೂಲ ವಾತಾವರಣ ಸಿಗಲಿದೆ. ಮನೆಯ ಕೆಲಸದಲ್ಲಿ ನೀವು ನಿರ್ಲರ್ಕ್ಷ್ಯ ವಹಿಸಬೇಡಿ.
ವೃಶ್ಚಿಕ
ನೂತನ ಸ್ನೇಹಿತನಿಂದ ಅಥವಾ ಅಪರಿಚಿತರ ವ್ಯಕ್ತಿಯ ಸಹಕಾರದಿಂದ ಕಾರ್ಯ ವ್ಯವಸ್ಥಿತವಾಗಿ ನಡೆಯಲಿದೆ. ಮನೆಯಲ್ಲಿ ಶಾಂತ ವಾತಾವರಣವಿದ್ದು ಮನಸ್ಸಿಗೆ ತುಸು ನೆಮ್ಮದಿ ಬರುವುದು.
ಧನು
ಉತ್ತಮ ಗುಣಗಳು ನಿಮ್ಮನ್ನು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಹಾಯ ಮಾಡುವುದು. ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶವನ್ನು ಸಿಗುವುದು. ಸರ್ಕಾರದ ಕೆಲಸಗಳಿಂದ ಅನುಕೂಲವಿದೆ.
ಮಕರ
ಪೂರ್ಣ ಪ್ರಮಾಣ ಶ್ರಮ ಪಟ್ಟರೆ ನೀವೇ ಎಲ್ಲದರಲ್ಲಿಜಯಗಳಿಸಬಹುದು. ಯಾರಿಗೂ ಸಹ ಜಾಮೀನುದಾರರಾಗುವುದು ಸರಿಯಲ್ಲ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವಿರಿ.
ಕುಂಭ
ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ, ಹೊಸತನದಲ್ಲಿ ಜಯ ಕಾಣುವಿರಿ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನ ವಹಿಸಬೇಕಾಗುವುದು. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರಲಿದೆ.
ಮೀನ
ಗಣಪತಿಯ ಅನುಗ್ರಹದಿಂದ ಗೊಂದಲಗಳು ಸರಳವಾಗಿ ನಿವಾರಣೆ ಗೊಂಡು ಮನಸ್ಸು ತಿಳಿಯಾಗುವುದು. ಮಗಳ ಮದುವೆ ವಿಚಾರವಾಗಿ ದೂರದ ಊರಿಗೆ ಪ್ರಯಾಣ ಬೆಳೆಸಬೇಕಾಗುವುದು. ವಾಹನ ಖರೀದಿ ಬೇಡ.