ADVERTISEMENT

ದಿನ ಭವಿಷ್ಯ | ಈ ರಾಶಿಯವರು ಚಿನ್ನ, ಬೆಳ್ಳಿ ಖರೀದಿಸುವ ಸಾಧ್ಯತೆಯಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಡಿಸೆಂಬರ್ 2025, 1:10 IST
Last Updated 8 ಡಿಸೆಂಬರ್ 2025, 1:10 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಹೊಸ ಕೆಲಸಗಳ ಜವಾಬ್ದಾರಿಯನ್ನು ನಿಮ್ಮದಾಗಿ ಮಾಡಿಕೊಳ್ಳುತ್ತಿರುವ ಕಾರಣ ಬಿಡುವಿಲ್ಲದ ದುಡಿಮೆಯ ದಿನಗಳು ನಿಮ್ಮದಾಗಲಿವೆ. ನಿಶ್ಚಿತ ಗುರಿ ಸಾಧಿಸಲು ಬಹಳ ಶ್ರಮಪಡಬೇಕಾಗಿಲ್ಲ.
  • ವೃಷಭ
  • ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದವರನ್ನು ಆ ಜಾಲದಿಂದ ಹೊರ ತರಲು ಪ್ರಯತ್ನ ನಡೆಸುವಿರಿ. ಸರ್ಕಾರಿ ನೌಕರರಿಗೆ ವರ್ಗಾವಣೆಯ ಯೋಗ. ಮಂಗಳಕಾರ್ಯಗಳು ಜರಗುವಾಗ ಅಸಾಂದರ್ಭಿಕ ಮಾತುಗಳನ್ನು ಆಡದಿರಿ.
  • ಮಿಥುನ
  • ಇಷ್ಟವೆಂದು ಅಧಿಕವಾಗಿ ಸೇವಿಸಿದ ಆಹಾರವು ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತದೆ. ಕೋಪವನ್ನು ಶಮನ ಮಾಡಿಕೊಳ್ಳಲು ಸಾಧ್ಯವಿಲ್ಲ. ವೃತ್ತಿಯಲ್ಲಿ ಪೈಪೋಟಿಯನ್ನು ಎದುರಿಸುವಿರಿ.
  • ಕರ್ಕಾಟಕ
  • ಮುಕ್ತ ಭಾವನೆಯಿಂದ ಆಡಿದ ಮಾತುಗಳು ಉಳಿದವರಿಗೆ ಅಧಿಕ ಪ್ರಸಂಗದಂತೆ ತೋರುವುದರಲ್ಲಿ ಸಂಶಯವಿಲ್ಲ. ಅತಿ ಖರ್ಚು ವೆಚ್ಚಗಳು ತಗ್ಗುವುದು. ಮುಂದಿನ ಓದಿನ ಬಗ್ಗೆ ಯೋಚಿಸುವಿರಿ.
  • ಸಿಂಹ
  • ಸಾಮರ್ಥ್ಯದ ಅರಿವಿಲ್ಲದೆ ಲಘುವಾಗಿ ಮಾತನಾಡಿದವರಿಗೆ ಸರಿಯಾದ ಪಾಠವನ್ನು ಕಲಿಸುವಿರಿ. ಕಾಗದಪತ್ರಗಳಿಗೆ ಓದಿಯೇ ಸಹಿ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಾಧು ಸಂತರ ದರ್ಶನ ಮಾಡುವಿರಿ.
  • ಕನ್ಯಾ
  • ಶಿಬಿರಗಳಲ್ಲಿ ಭಾಗವಹಿಸಿದ ಕಾರಣವಾಗಿ ಚಟುವಟಿಕೆಯಿಂದ ಇರುವ ಮಕ್ಕಳು ಮನಸ್ಸಂತೋಷಕ್ಕೆ ಕಾರಣವಾಗಿರುತ್ತಾರೆ. ಸ್ವಾರ್ಥದಿಂದ ವ್ಯವಹರಿಸಬೇಡಿ.
  • ತುಲಾ
  • ಸಂಸಾರದ ಘನತೆ ಹೆಚ್ಚಿಸಲು ಸಾಹಸ ಪಡುತ್ತಿರುವ ನಿಮಗೆ ಹೆಂಡತಿ ಮಕ್ಕಳು ನೆರವಾಗುವರು. ಕೇಶವಿನ್ಯಾಸಗಾರರು ಇತರರರೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಪ್ರಾರ್ಥನೆಯ ಪರಿಣಾಮ ವಧು ದೊರೆಯುವಳು.
  • ವೃಶ್ಚಿಕ
  • ಕಣ್ಣಿನ ಆರೋಗ್ಯದ ವಿಚಾರವಾಗಿ ಎಷ್ಟು ಕಾಳಜಿ ವಹಿಸಿದರೂ ವೈದ್ಯರ ಭೇಟಿ ನಿಯಮಿತವಾಗಿ ಮಾಡುವುದು ತಪ್ಪುವುದಿಲ್ಲ. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ಮಿತವಾದ ಆಹಾರ ಸೇವನೆ ಇರಲಿ.
  • ಧನು
  • ತಾಳಪತ್ರಗಳ ಅಧ್ಯಯನ ನಡೆಸಬೇಕೆಂದು ಇರುವವರಿಗೆ ಸರಿಯಾದ ಸ್ಥಳ ದೊರೆಯುತ್ತದೆ. ಹಳೆಯ ದಿನಚರಿಗೆ ಮರಳುವಿರಿ. ಸಾಕುಪ್ರಾಣಿಯ ಸಂಖ್ಯೆ ಹೆಚ್ಚಾಗುವುದು.
  • ಮಕರ
  • ದೃಢ ನಿಶ್ಚಯ ಮತ್ತು ಸಾಧಿಸಲೇಬೇಕೆಂಬ ಛಲದ ಮನೋಭಾವ ಯಶಸ್ಸಿಗೆ ಕಾರಣವೆನಿಸಲಿದೆ. ಕೆಲವು ವ್ಯಕ್ತಿಗಳ ದ್ವೇಷದ ಕೃತ್ಯಗಳ ಫಲವಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ. ಅನವಶ್ಯಕ ವಸ್ತುಗಳನ್ನು ಖರೀದಿಸದಿರಿ.
  • ಕುಂಭ
  • ಹಿರಿಯರ ಜೀವನಾನುಭವ ಸಲಹೆಗಳನ್ನು ಕೇಳಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ನಡೆಸಿಕೊಳ್ಳಿರಿ. ಚಿನ್ನಾಭರಣ ಅಥವ ಬೆಳ್ಳಿಯ ಸಾಮಗ್ರಿಗಳನ್ನು ಖರೀದಿಸುವ ಸಾಧ್ಯತೆ ಇದೆ.
  • ಮೀನ
  • ಹಲವು ದಿನಗಳ ಪ್ರತೀಕ್ಷೆಯ ಮನೋಭಿಲಾಷೆಯು ಪೂರ್ಣಗೊಳ್ಳುವ ದಿನ ಇದಾಗಲಿದೆ. ವಯಸ್ಸಿಗೆ ಮೀರಿದ ಗಾಂಭೀರ್ಯವನ್ನು ಹೊಗಳುವವರು ಕೆಲವರಾದರೆ ತೆಗಳುವವರು ಕೆಲವರಿರುತ್ತಾರೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.