ADVERTISEMENT

ದಿನ ಭವಿಷ್ಯ: ನಿರುದ್ಯೋಗಿಗಳಿಗೆ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ ಸಿಗಲಿದೆ

ದಿನ ಭವಿಷ್ಯ: ಮಂಗಳವಾರ, 30 ಡಿಸೆಂಬರ್, 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 29 ಡಿಸೆಂಬರ್ 2025, 23:28 IST
Last Updated 29 ಡಿಸೆಂಬರ್ 2025, 23:28 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕಲೆಯ ಪ್ರದರ್ಶನದಿಂದ ಪ್ರಶಂಸೆ ಮತ್ತು ಗೌರವಾದರಗಳಿಂದ ಮನೋಲ್ಲಾಸ ಉಂಟಾಗುವುದು. ಸಂಘ ಸಂಸ್ಥೆಗಳ ಹಣಕಾಸಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ.
  • ವೃಷಭ
  • ಪ್ರೀತಿ ಪಾತ್ರರೊಂದಿಗೆ ಉತ್ತಮ ಹೊಂದಾಣಿಕೆಯಿಂದ ಇರುವಂ ತಾಗಲಿದೆ. ದೇವರ ಸೇವೆಯಿಂದ ಕೌಟುಂಬಿಕ ಸಮಸ್ಯೆಗಳು ದೂರವಾಗಲಿವೆ. ಉದ್ಯಮಿಗಳಿಗೆ ಸರ್ಕಾರದಿಂದ ಅನುಕೂಲ ಉಂಟಾಗಲಿದೆ.
  • ಮಿಥುನ
  • ನಿವೃತ್ತಿ ಜೀವನದ ನಂತರದ ಕೆಲಸಗಳ ಬಗ್ಗೆ ಯೋಜನೆ ರೂಪಿಸಿಕೊಳ್ಳಿ. ನವದಂಪತಿಗೆ ಸಂತಾನದ ಶುಭ ಸುದ್ದಿ ಕೇಳಿ ಬರುವುದು. ಮಗಳಿಗೆ ಆತ್ಮೀಯರೊಬ್ಬರ ಸಹಾಯದಿಂದ ಉದ್ಯೋಗ ದೊರೆಯಲಿದೆ.
  • ಕರ್ಕಾಟಕ
  • ಮುಂಚೆಯೇ ನಿರ್ಧರಿಸಿದ್ದ ಪ್ರಯಾಣವನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡುವ ಅಥವಾ ಕೈಬಿಡುವ ಯೋಚನೆ ಮಾಡುವಿರಿ. ವದಂತಿಗಳಿಗೆ ಕಿವಿಗೊಡದೆ ಕೆಲಸ ಮುಂದುವರಿಸಿ.
  • ಸಿಂಹ
  • ಸೃಷ್ಟಿಯಾದ ಕೌಟುಂಬಿಕ ಕಲಹವನ್ನು ಬುದ್ಧಿವಂತಿಕೆ ಉಪಯೋಗಿಸಿ ತಿಳಿಗೊಳಿಸಿ. ರಾಜಕೀಯ ವಿಭಾಗದಲ್ಲಿ ಶ್ರಮಸಹಿತ ಜಯಸಾಧನೆ ಮನಸ್ಸಿಗೆ ತೃಪ್ತಿತರುವುದು.
  • ಕನ್ಯಾ
  • ಜವಾಬ್ದಾರಿಯುಕ್ತ ನಡೆ, ದಿಟ್ಟತನದ ಜತೆಗೆ ಸ್ವಲ್ಪ ತಂತ್ರಗಾರಿಕೆ ತೋರಿದರೆ ಅಧಿಕಾರಿಗಳ ಗಮನ ಸೆಳೆಯುವುದು ಕಷ್ಟ ಆಗುವುದಿಲ್ಲ. ಮಾರುಕಟ್ಟೆಯ ಬದಲಾವಣೆ ಅನುಕೂಲಕ್ಕೆ ತಕ್ಕಂತೆ ಇರುವುದು.
  • ತುಲಾ
  • ಕೃತಕ ಅಂಗಾಂಗಗಳ ಕಸಿ ಮಾಡಿಸಿಕೊಂಡಿರುವವರಿಗೆ ಅದರಿಂದಾಗಿ ಆರೋಗ್ಯ ತಪ್ಪುವ ಸಾಧ್ಯತೆ ಇದೆ. ಕೌಟುಂಬಿಕ ವಿವಾದಗಳು ರಾಜೀ ಮನೋಭಾವಗಳಿಂದ ಸಮಾಪ್ತಿ‌‌‌. ಹಣದ ದುಂದುವೆಚ್ಚವನ್ನು ನಿಲ್ಲಿಸಿ.
  • ವೃಶ್ಚಿಕ
  • ಮೇಧಾವಿ ಜನರೊಂದಿಗಿನ ಸಂಪರ್ಕ ಬೆಳೆಯುವುದರಿಂದ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ. ದೂರದ ಪ್ರಯಾಣಗಳು ಅನುಕೂಲಕರವಾಗಿರುವುದು. ಸಿವಿಲ್ ಎಂಜಿನಿಯರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ.
  • ಧನು
  • ಅಸಾಧ್ಯ ಕಾರ್ಯಗಳನ್ನೂ ಸಾಧಿಸಿ ತೋರಿಸುವಷ್ಟು ಮನೋಬಲ, ಛಲ ವೃದ್ಧಿಸಿಕೊಳ್ಳಿ. ಬಂಧುಗಳಲ್ಲಿನ ಮಾತಿನ ಚಕಮಕಿ ಮನಸ್ಸಿಗೆ ಗೊಂದಲ ತಂದೀತು. ಪೂರ್ವ ನಿಯಾಮಕವಾಗಿ ಕೆಲಸ ಮಾಡುವುದು ಮುಖ್ಯ.
  • ಮಕರ
  • ದೂರದ ಪ್ರಯಾಣದಲ್ಲಿ ಇದ್ದರೂ ಮಗಳ ಜವಾಬ್ದಾರಿಯುತ ನಡೆಯಿಂದಾಗಿ ಮನೆ ಮತ್ತು ಕುಟುಂಬದ ಚಿಂತೆ ಅಷ್ಟಾಗಿ ಕಾಡುವುದಿಲ್ಲ. ಧಾನ್ಯಗಳ ರಫ್ತು ಮಾರಾಟಗಾರರು ಅನುಕೂಲವನ್ನು ಪಡೆಯುವಿರಿ.
  • ಕುಂಭ
  • ನಿರುದ್ಯೋಗಿಗಳ ಅಲೆದಾಟ ತಪ್ಪಿ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ ಸಿಗಲಿದೆ. ವಿಶೇಷ ತೀರ್ಮಾನಗಳನ್ನು ಮಡದಿಯಲ್ಲಿ ಕೇಳಿ ತೀರ್ಮಾನಿಸಿ. ಕೆಲಸ ಸಾಧಿಸಲು ಹೊಸ ಮಾರ್ಗ ಆರಿಸಿಕೊಳ್ಳಬೇಕಾಗುವುದು.
  • ಮೀನ
  • ಜೆರಾಕ್ಸ್‌ ಅಥವಾ ಪ್ರಿಂಟಿಂಗ್ ಪ್ರೆಸ್‌ನವರಿಗೆ ಅತ್ಯಧಿಕ ಮಟ್ಟದ ಗ್ರಾಹಕರು ಬರುತ್ತಾರೆ. ಯಶಸ್ಸು ಹಿರಿಯರ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನು ತರುತ್ತದೆ. ವಿಶೇಷ ಪೂಜೆ ನಡೆಸಲು ತಯಾರಿ ಮಾಡುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.