ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಬಹಳ ದಿನಗಳ ನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಜನವರಿ 2026, 0:15 IST
Last Updated 13 ಜನವರಿ 2026, 0:15 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕುಟುಂಬದಲ್ಲಿ ಊಹೆಗೂ ನಿಲುಕದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಹಿರಿಯರಿಂದ ಹಿತವಾಕ್ಯಗಳು, ಮಾರ್ಗದರ್ಶನ ಸಿಗಲಿವೆ. ಆಯ್ಕೆ ಸರಿಯಾಗಿದ್ದು ಕೆಲಸಗಳನ್ನು ಮಾಡಿ ಮುಗಿಸುವಿರಿ.
  • ವೃಷಭ
  • ಆರ್ಥಿಕ ನಿರ್ವಹಣೆಗಾಗಿ ಕೆಲವು ಖರ್ಚುಗಳನ್ನು ನಿಲ್ಲಿಸುವಿರಿ. ಆದರೆ ಆರೋಗ್ಯದ ವಿಚಾರದಲ್ಲಿ ಖರ್ಚುವೆಚ್ಚದ ಲೆಕ್ಕಾಚಾರವನ್ನು ಮಾಡುವುದು ಸಮಂಜಸವಲ್ಲ. ಧೈರ್ಯ ಜತೆಗಿರಲಿದೆ.
  • ಮಿಥುನ
  • ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡು ಜೀವನ ನಡೆಸುವುದು ಸರಿಯಲ್ಲ. ಹೋಟೆಲ್ ಅಥವಾ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರದಿಂದಿರಿ. ಉಲ್ಲಾಸವಿರುವುದು.
  • ಕರ್ಕಾಟಕ
  • ಬಹಳ ದಿನಗಳಿಂದ ಕಾಡುತ್ತಿದ್ದ ಭೂಮಿಗೆ ಸಂಬಂಧಿಸಿದ ಸಮಸ್ಯೆಯೊಂದು ನಿರಾತಂಕವಾಗಿ  ಬಗೆಹರಿಯುವುದು. ಕುಟುಂಬದವರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಕಾಣುವಿರಿ.
  • ಸಿಂಹ
  • ಪಾಲಿಗೆ ಬಂದದ್ದನ್ನು ಸಂತೋಷದಿಂದ ಸ್ವೀಕರಿಸಿದಲ್ಲಿ ಅಸ್ತಿತ್ವ ಮತ್ತು ನೆಮ್ಮದಿ  ಉಳಿದುಕೊಳ್ಳುವುದು. ಉದ್ಯೋಗದಲ್ಲಿ ಸಿಗುವಂಥ ವರ್ಗಾವಣೆಯ ಅವಕಾಶಗಳನ್ನು ಬಿಟ್ಟುಕೊಳ್ಳಬೇಡಿ.
  • ಕನ್ಯಾ
  • ಕೋರ್ಟು ಕಚೇರಿ ದೂರುಗಳಂಥ ಗೊಡವೆಗಳಿಗೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ.   ಕಾಡುವ ಸಮಸ್ಯಾಸರಪಳಿ ಹೆಚ್ಚಿನ ಶ್ರಮವಿಲ್ಲದೆ ಪರಿಹಾರವಾಗುವುದು.
  • ತುಲಾ
  • ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿದ್ದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ. ಏಕಾಂಗಿಯಾಗಿರುವವರಿಗೆ ಸಂಗಾತಿ ಸಿಗುವ ಲಕ್ಷಣಗಳಿವೆ. ನವಚೈತನ್ಯ ಇರಲಿದೆ. 
  • ವೃಶ್ಚಿಕ
  • ಕೆಲಸ ಕಾರ್ಯದಲ್ಲಿ ಸಮಾನ ಮನಸ್ಕರು ಸಿಗುವುದರಿಂದ ವ್ಯವಸ್ಥಿತವಾಗಿ ಮಾತುಕತೆ ನಡೆದು ಕಾರ್ಯಭಾರ ಸುಗಮವಾಗುತ್ತದೆ. ಕೆಲಸಗಳನ್ನು ಮುಂದೂಡುವುದು ಒಳ್ಳೆಯದಲ್ಲ.
  • ಧನು
  • ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳ ಲಕ್ಷಣಗಳು ಗಮನಕ್ಕೆ ಬಂದಲ್ಲಿ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಸುತ್ತಮುತ್ತಲಲ್ಲಿ ನಡೆದ ಘಟನೆಗಳಿಂದ ಮನಸ್ಸು ಪರಿವರ್ತನೆಯಾಗಲಿದೆ.
  • ಮಕರ
  • ಸಾಕಷ್ಟು ಸಮಯ ದೊರಕುವಂತೆ ಯೋಜನೆಗಳನ್ನು ಹಾಕಿಕೊಳ್ಳುವುದು ಉತ್ತಮ. ಸಾಕುಪ್ರಾಣಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಪುಸ್ತಕ ಓದುವ ಹವ್ಯಾಸ ಹುಟ್ಟಲಿದೆ.
  • ಕುಂಭ
  • ಉತ್ಪಾದಿಸಿದ ವಸ್ತುಗಳಿಗೆ  ಪ್ರಾಂತ್ಯದಲ್ಲಿ ಬೇಡಿಕೆ ದೊರೆತು ಸಂತೋಷಕರ ವಾತಾವರಣ ನಿಮ್ಮದಾಗಲಿದೆ.  ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸಲು ಮುಂದಾಗುವಿರಿ.
  • ಮೀನ
  • ಹಲವು ಕಾರ್ಯದಲ್ಲಿ ದೇಹಾಯಾಸ ಮಾತ್ರ ಸಿಗುವುದು. ಕೆಲವು ದಿನಗಳ ಕಿರು ಪ್ರಯಾಣದ ನಂತರ ಮನೆಗೆ ಹಿಂತಿರುಗಿ ಬರುವಿರಿ. ಬಹಳ ದಿನಗಳ ನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.