ADVERTISEMENT

ದಿನ ಭವಿಷ್ಯ: ಮಾನಸಿಕ ಒತ್ತಡ ಕಡಿಮೆಯಾಗಲು ಜನರ ಜತೆ ಬೆರೆಯಿರಿ

2026ರ ಫೆಬ್ರುವರಿ 2, ಸೋಮವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಫೆಬ್ರುವರಿ 2026, 22:03 IST
Last Updated 1 ಫೆಬ್ರುವರಿ 2026, 22:03 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವೃತ್ತಿರಂಗದಲ್ಲಿ ಅನ್ಯರ ಮಾತಿಗೆ ಕಿವಿಗೊಡದೆ ನಿಮ್ಮಚ್ಛೆಯಂತೆ ನಡೆಯಿರಿ. ದೂರದ ಪ್ರಯಾಣ, ಹವಾಮಾನ ಬದಲಾವಣೆಯಿಂದ ಅನಾರೋಗ್ಯ ಉಂಟಾಗಬಹುದು. ಜಾಗ್ರತೆ ವಹಿಸಿ.
  • ವೃಷಭ
  • ನೆಂಟರಿಷ್ಟರ ಸಲಹೆ ಸೂಚನೆಗಳನ್ನು ಪಾಲಿಸಿ. ದೈವಬಲ ಒದಗಿ ಬಂದು ಅಭಿವೃದ್ಧಿಗೊಳ್ಳುವಿರಿ. ಮಾನಸಿಕ ಒತ್ತಡ ಕಡಿಮೆಯಾಗಲು ಜನರ ಜತೆ ಬೆರೆಯಿರಿ.
  • ಮಿಥುನ
  • ರೇಷ್ಮೆ ಬೆಳೆಗಾರರಿಗೆ ಆದಾಯದಿಂದ ಸಂತಸ. ಸಾಕುಪ್ರಾಣಿಗಳ ಜತೆ ಸಮಯ ಕಳೆಯುವಿರಿ. ಸಮಯಕ್ಕೆ ಸರಿಯಾಗಿ ವರ್ತಿಸಿ, ಬುದ್ಧಿವಂತಿಕೆಯನ್ನು ತೋರುವಿರಿ.
  • ಕರ್ಕಾಟಕ
  • ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವಿರಿ. ಮನೆಯಲ್ಲಿ ಇರುವವರೆಲ್ಲರನ್ನು ಕೇಳದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
  • ಸಿಂಹ
  • ನಿರ್ಧಾರಗಳನ್ನು ಎಲ್ಲರ ಮುಂದೆ ತಿಳಿಸುವ ಮುನ್ನಸಂಪೂರ್ಣವಾಗಿ ಯೋಚನೆ ಮಾಡಿ. ಪತ್ನಿಯ ಅವಶ್ಯಕತೆಗಳನ್ನು ಪೂರೈಸುವಲ್ಲಿ ಜಿಪುಣತನ ತೋರದಿರಿ. ಕೌಟುಂಬಿಕ ವಿವಾದಗಳು ಇತ್ಯರ್ಥಗೊಳ್ಳಲಿವೆ.
  • ಕನ್ಯಾ
  • ಸಂಸ್ಥೆಯ ಹೊಸ ಆರ್ಥಿಕ ನೀತಿಯಿಂದ ಹಣಕಾಸಿನ ವಿಷಯದಲ್ಲಿ ಲಾಭ ಇರಲಿದೆ. ತರಕಾರಿ ಬೆಳೆಗಾರರಿಗೆ ಮುಂಜಾಗ್ರತಾ ಕ್ರಮಗಳು ಇಲ್ಲದಿದ್ದಲ್ಲಿ ಅಧಿಕ ಹಾನಿ ಸಂಭವಿಸಬಹುದು.
  • ತುಲಾ
  • ಮಗಳ ಮಾತಿನಂತೆ ನಿತ್ಯ ಕೆಲಸದಲ್ಲಿ ಮಾಡಿಕೊಂಡ ಬದಲಾವಣೆಯಿಂದ ಆರೋಗ್ಯ ಸರಿಯಾಗುತ್ತದೆ. ಅಕ್ಕಪಕ್ಕದವರ ಕಷ್ಟ ಸುಖವನ್ನು ವಿಚಾರಿಸುವುದರಿಂದ ಪ್ರಯೋಜನ ದೊರೆಯುವುದು.
  • ವೃಶ್ಚಿಕ
  • ಸಣ್ಣ ವಯಸ್ಸಿನ ಮಕ್ಕಳ ಆಟೋಟಗಳನ್ನು ನೋಡಿ ಕಳೆದು ಹೋದ ದಿನಗಳನ್ನು ನೆನಪಿಸಿಕೊಳ್ಳುವಿರಿ. ನಿಮ್ಮ ಯೋಚನೆಯಷ್ಟು ಖರ್ಚು ಸಂಭವಿಸದ ಕಾರಣ ಹಣದ ಕೊರತೆ ಕಂಡು ಬರುವುದಿಲ್ಲ.
  • ಧನು
  • ಅನಗತ್ಯ ವಸ್ತುಗಳ ಮೇಲಿನ ದೊಡ್ಡ ಮೊತ್ತದ ಖರ್ಚಿನಿಂದ ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಉದ್ಯೋಗದಲ್ಲಿ ಒತ್ತಡ ಹೆಚ್ಚಿರುವ ಕಾರಣ ಮಾನಸಿಕವಾಗಿ ಈಗಲೇ ತಯಾರಾಗಿರುವುದು ಸೂಕ್ತ.
  • ಮಕರ
  • ಕೋಪವನ್ನು ಹೊಂದಿದ ಸಮಯದಲ್ಲಿ ಇತರರೊಂದಿಗೆ ಮಾತನಾಡು ವುದಾಗಲಿ ಅಥವಾ ಕೆಲಸ ಮಾಡುವುದನ್ನು ಮಾಡಬೇಡಿ. ದುಡುಕಿನ ಮಾತುಗಳು ಇತರರ ಮನಸ್ಸನ್ನು ನೋಯಿಸದಿರಲಿ.
  • ಕುಂಭ
  • ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಯುವ ಬರಹಗಾರರಿಗೆ ಹುರುಪು ಹೆಚ್ಚಿಸುವಂಥ ಜನರು ಸುತ್ತಲೂ ಸಿಗುತ್ತಾರೆ.
  • ಮೀನ
  • ಹೊಸಾ ವಿವಾಹ ಪ್ರಸ್ತಾಪಗಳು ಆಕರ್ಷಕವಾಗಿ ಕಂಡರೂ ಪರಾಮರ್ಶಿಸದೇ ಒಪ್ಪಿಕೊಳ್ಳಬೇಡಿ. ತಪ್ಪಿದ್ದಲ್ಲಿ ಅದನ್ನು ಒಪ್ಪಿಕೊಳ್ಳುವ ಮನೋಭಾವನ್ನು ಬೆಳೆಸಿಕೊಳ್ಳಿ. ಷೇರು ಖರೀದಿಸುವಾಗ ಎಚ್ಚರವಹಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.