ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಹೊಸ ಹುರುಪು ಮೂಡಲಿದೆ

2026ರ ಮಾರ್ಚ್ ‌02, ಸೋಮವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಮಾರ್ಚ್ 2026, 22:25 IST
Last Updated 1 ಮಾರ್ಚ್ 2026, 22:25 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೌಟುಂಬಿಕ ನೆಮ್ಮದಿ ಸಮೃದ್ಧಿಯಾಗಿರಲಿದ್ದು, ಅಣ್ಣ ತಮ್ಮಂದಿರ ನಡುವೆ ಸಣ್ಣ-ಪುಟ್ಟ ಮಾನಸಿಕ ಕಿರಿಕಿರಿಗಳೂ ತಪ್ಪುತ್ತವೆ. ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುವ ಹಲವು ಚಿಂತೆಗಳಿಗೆ ಈ ದಿನ ಉತ್ತರ ಸಿಗುವುದು.
  • ವೃಷಭ
  • ನಿಮ್ಮ ಸ್ನೇಹಿತರೊಂದಿಗೆ ಜಂಟಿಯಾಗಿ ವ್ಯವಹರಿಸಿದಲ್ಲಿ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳುವುದಕ್ಕೆ ಸಹಾಯವಾಗುವುದು. ಹೊಸ ಜನರನ್ನು ಭೇಟಿಯಾಗುವ ಮೂಲಕ ಉದ್ಯೋಗದಲ್ಲಿ ಹೊಸ ಹುರುಪು ಮೂಡಲಿದೆ.
  • ಮಿಥುನ
  • ಉದ್ಯೋಗದಲ್ಲಿ ಬದಲಾವಣೆಯ ಯೋಚನೆ ಮಾಡುವವರು ಸದ್ಯದ ಪರಿಸ್ಥಿತಿಯಲ್ಲಿ ಸಿಕ್ಕಿರುವ ಕೆಲಸದಲ್ಲೇ ತೃಪ್ತಿಪಡುವುದು ಒಳ್ಳೆಯದು. ಸರಕಾರಿ ಕಚೇರಿಗಳಿಗೆ ಅಲೆದಾಟವು ಹೆಚ್ಚಾಗಿ, ಹಣದ ಖರ್ಚಿಗೆ ಕಾರಣವಾದೀತು.
  • ಕರ್ಕಾಟಕ
  • ತಾಂತ್ರಿಕ ವಿದ್ಯಾಭ್ಯಾಸದ ಅಂತಿಮ ಹಂತ ತಲುಪಿದವರಿಗೆ ಹೆಸರುವಾಸಿ ಕಂಪನಿಯಲ್ಲಿ ಉದ್ಯೋಗ ದೊರಕುವುದು. ಕಂಟ್ರಾಕ್ಟರ್‌ಗಳು ಹಾಗು ಬಿಲ್ಡರ್‌ಗಳಿಗೆ ಈ ದಿನವು ಅನುಕೂಲಕರ ದಿನವಾಗುವುದು.
  • ಸಿಂಹ
  • ಮಹಿಳೆಯರಿಗೆ ಉಪಯೋಗಕ್ಕೆ ಬಾರದ ವಿಚಾರದ ಬಗೆಗಿನ ಚಿಂತನೆಯು ಆರೋಗ್ಯವನ್ನು ಹಾಳು ಮಾಡುತ್ತದೆ. ಪ್ರಾಮಾಣಿಕವಾಗಿ ನಡೆಯುವ ನಿಮಗೆ ವ್ಯವಹಾರದಲ್ಲಿ ಲಾಭ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ.
  • ಕನ್ಯಾ
  • ನೂತನವಾದ ಸ್ವತ್ತು ಖರೀದಿಯ ವ್ಯವಹಾರಗಳಲ್ಲಿ ಸಮರ್ಥನೀಯ ತೀರ್ಮಾನ ಕೈಗೊಳ್ಳುವುದು ಈ ದಿನದ ಅತೀ ಮುಖ್ಯ ಕೆಲಸವಾಗಿರುತ್ತದೆ. ವೃತ್ತಿ ಪರವಾಗಿ ಇರುವ ಸ್ಪರ್ಧೆಗಳಲ್ಲಿ ಹೆಚ್ಚಿನ ಮುನ್ನಡೆ ನಿಮ್ಮ ಪಾಲಿಗೆ ಇರುವುದು.
  • ತುಲಾ
  • ಗೃಹಾಲಂಕಾರ ವಸ್ತುಗಳು,ಪೀಠೋಪಕರಣಗಳ ವ್ಯಾಪಾರದಿಂದ ಅಧಿಕ ಲಾಭ ಹೊಂದುವಿರಿ. ಮಗನ ಮೇಲಿನ ನಂಬಿಕೆಯು ಕಡಿಮೆಯಾಗುವ ಪ್ರಸಂಗ ನೆಡೆಯಬಹುದು. ತಂದೆ ತಾಯಿ ಆರೋಗ್ಯ ಉತ್ತಮವಾಗಿರುವುದು.
  • ವೃಶ್ಚಿಕ
  • ಕುಟುಂಬದ ಸತ್ಕಾರ್ಯಗಳಲ್ಲಿ ಬಂಧುಗಳ ಸಕ್ರಿಯ ಪಾತ್ರವು ನಿಮ್ಮ ಜವಾಬ್ದಾರಿ ಕಡಿಮೆ ಮಾಡಲಿದೆ. ದುಬಾರಿ ಜೀವನ ಶೈಲಿಯನ್ನು ಇಷ್ಟ ಪಡುವ ನಿಮಗೆ ಅದಕ್ಕೆ ತಕ್ಕಂತಹ ಸರ್ವ ವಿಧದ ಸೌಕರ್ಯ ಸಿಗುವುದು.
  • ಧನು
  • ಪಾಲುಗಾರರಲ್ಲಿ ಮುಖಾಮುಖಿ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ಒಳ್ಳೆಯದು. ದಕ್ಷರಾಗಿಯೂ ದಾಕ್ಷಿಣ್ಯ ಸ್ವಭಾವದವರಾದ ನಿಮಗೆ ಅಗೌರವ, ನಷ್ಟದಂತಹ ಪರಿಸ್ಥಿತಿಯು ಎದುರಾಗಬಹುದು.
  • ಮಕರ
  • ವೈದ್ಯರ ಸಲಹೆಯಂತೆ ಮನಸ್ಸಿನ ಸಂಯಮಕ್ಕಾಗಿ ಯೋಗ, ಧ್ಯಾನದತ್ತ ಗಮನ ಹರಿಸಿ. ಆರೋಗ್ಯ ವೃದ್ಧಿಗಾಗಿ ದೈನಂದಿನ ಚಟುವಟಿಕೆಯಲ್ಲಿ ಸರಿಯಾದ ನಿಯಮ ಪಾಲಿಸುವುದು ಒಳ್ಳೆಯದು. ದ್ವಿ ಚಕ್ರ ವಾಹನ ಖರೀದಿ ಯೋಗವಿದೆ.
  • ಕುಂಭ
  • ನಿಮ್ಮ ದ್ವಿಸ್ವಭಾವದ ನಡವಳಿಕೆಯನ್ನು ಹಿಡಿತದಲ್ಲಿಟ್ಟುಕೊಂಡರೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವುದು ತಪ್ಪುವುದು. ಗುಪ್ತಚರ ಇಲಾಖೆ ಉದ್ಯೋಗಿಗಳಿಗೆ ಸರ್ಕಾರದಿಂದ ಪ್ರಶಸ್ತಿ ಮತ್ತು ಬಹುಮಾನ ದೊರೆಯಲಿದೆ.
  • ಮೀನ
  • ಸಮಸ್ಯೆಯಿಂದ ಹೊರಬರಲು ಯಾವುದೇ ರೀತಿಯ ಮುಚ್ಚುಮರೆ ಇಲ್ಲದೇ ಇರುವುದು ಒಂದೇ ದಾರಿ. ಯಂತ್ರೋಪಕರಣಗಳ ಖರೀದಿಯಿಂದಾಗಿ ಅಧಿಕ ಖರ್ಚು ಸಂಭವಿಸುವುದು. ಕಾಸ್ಮೆಟಿಕ್ ವ್ಯಾಪಾರಿಗಳಿಗೆ ಒಳ್ಳೆಯ ಲಾಭ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.