ADVERTISEMENT

ದಿನ ಭವಿಷ್ಯ: ವಿವಾಹ ಅಪೇಕ್ಷಿಗಳಿಗೆ ಶುಭವಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ನವೆಂಬರ್ 2025, 0:09 IST
Last Updated 19 ನವೆಂಬರ್ 2025, 0:09 IST
   
ಮೇಷ
  • ಸರ್ಕಾರಿ ಲೋಕೋಪಯೋಗಿ ಕೆಲಸದ ಗುತ್ತಿಗೆದಾರರು ಕಾಮಗಾರಿಗಳನ್ನು ನಿಮ್ಮೆಡೆಗೆ ಮಾಡಿಕೊಳ್ಳುವ ವಿಚಾರದಲ್ಲಿ ಎಡವಿ ಬೀಳುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗುವುದು.
  • ವೃಷಭ
  • ಮನೆಯ ಹತ್ತಿರದಲ್ಲಿನ ಅತಿ ಜನಸಂಖ್ಯೆ ಸೇರುವ ಕಾರ್ಯಕ್ರಮವು ಶಾಂತಚಿತ್ತಕ್ಕೆ ಭಂಗ ತರುವುದು. ಮದುವೆಯ ಪ್ರಯುಕ್ತ ವಿಲಾಸೀ ಸಾಮಗ್ರಿ ಗಳನ್ನು ಖರೀದಿಸುವಿರಿ. ವಿವಾಹ ಅಪೇಕ್ಷಿಗಳಿಗೆ ಶುಭವಿದೆ.
  • ಮಿಥುನ
  • ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿರ್ಧಾರವು ಬಹಳ ಅನುಕೂಲಕರವಾಗುವುದು. ಮನಸ್ಸಿನಲ್ಲಿ ನೋವಿದ್ದರೂ ಇತರರ ಎದುರು ನಗುಮೊಗದ ಮುಖವಾಡವನ್ನು ಧರಿಸಬೇಕಾದ ಪರಿಸ್ಥಿತಿ ಇರುತ್ತದೆ.
  • ಕರ್ಕಾಟಕ
  • ಜಮೀನು ಖರೀದಿ ಅಥವಾ ನಿವೇಶನಗಳ ಖರೀದಿಯ ವ್ಯವಹಾರಗಳಿಂದ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಸಂಗೀತಗಾರ ಕಂಠಸಿರಿಗೆ ಉತ್ತಮ ಪ್ರಶಂಸೆಗಳು ಕೇಳಿಬರುತ್ತವೆ.
  • ಸಿಂಹ
  • ಬಹುವಾಗಿ ಬೇಕಾದ ವ್ಯಕ್ತಿಗಳ ಅನುಪಸ್ಥಿತಿಯಿಂದ ಮಾಡುವ ಎಲ್ಲಾ ಕೆಲಸಗಳಲ್ಲೂ ಸಣ್ಣಪುಟ್ಟ ಗಡಿಬಿಡಿಗಳುಂಟಾಗಲಿವೆ. ಹತ್ತಿ ಬಟ್ಟೆಯ ತಯಾರಕರಿಗೆ ಹಾಗೂ ವ್ಯಾಪಾರಸ್ಥರಿಗೆ ಗ್ರಾಹಕರು ದೊರಕಲಿದ್ದಾರೆ.
  • ಕನ್ಯಾ
  • ತಾಂತ್ರಿಕ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪರಿಶ್ರಮ ಮತ್ತು ದೇವರ ಕೃಪಾಕಟಾಕ್ಷ ಪಡಬೇಕಾಗುವುದು. ಸಂತುಷ್ಟವಾಗಿ ಜೀವಿಸುತ್ತಿರುವ ನೀವು ಇತರರ ಬೇಡದ ಮಾತುಗಳಿಗೆ ಬೆಲೆ ಕೊಡದಿರಿ.
  • ತುಲಾ
  • ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕುವ ಸುದ್ದಿಯಿಂದ ತುಸು ಸಮಾಧಾನ ಸಿಗುವುದು. ಬಹಳ ದಿನಗಳಿಂದ ಅಪೇಕ್ಷಿಸಿದ ಯಾತ್ರೆಗೆ ಶುಭ ಮುಹೂರ್ತ ಸಿಗುವುದು. ನರಸಿಂಹ ದೇವರ ಸೇವೆಯಿಂದ ಉತ್ತಮ ಫಲ.
  • ವೃಶ್ಚಿಕ
  • ಗಣಪತಿಗೆ ಸಂಬಂಧಿಸಿದಂತೆ ಹರಕೆಯ ರೂಪದಲ್ಲಿರುವ ಅಥವಾ ಬಹಳ ದಿನಗಳಿಂದ ಅಂದುಕೊಂಡಿದ್ದ ದೇವರ ಕೆಲಸಗಳನ್ನು ಮುಗಿಸುವ ಪ್ರಯತ್ನಮಾಡಿ. ದಾಯಾದಿಗಳು ಅಭಿವೃದ್ಧಿಗೆ ಅಡ್ಡಗಾಲು ಹಾಕಬಹುದು.
  • ಧನು
  • ಭಾವನೆಯ ಕಲ್ಪನಾ ಲೋಕದ ಬದಲು ವಾಸ್ತವದತ್ತ ಗಮನ ಹರಿಸಲು ಸೂಕ್ತ ಸಮಯ . ಕೆಲವು ದಿನಗಳ ಬಿಡುವಿಲ್ಲದ ದಿನಚರಿಯ ನಂತರ ಸ್ವಲ್ಪ ಬಿಡುವಿನ ದಿನ ಇಂದಾಗುವುದು.
  • ಮಕರ
  • ಕೈಯಲ್ಲಿರುವ ಹಣವನ್ನು ಪೂರ್ಣ ಪ್ರಮಾಣದಲ್ಲಿ ಖಾಲಿ ಮಾಡಿಕೊಳ್ಳುವುದು ಸರಿಯಲ್ಲ. ಮನೆಯ ಖರ್ಚಿನ ಮೇಲೆಯೂ ಹಿಡಿತವಿರಲಿ. ಸಮಸ್ಯೆಗಳು ಸರಾಗವಾಗಿ ಪರಿಹಾರವಾಗುವುದು.
  • ಕುಂಭ
  • ಹುಕಾಲ ನೆನಪಿನಲ್ಲಿ ಉಳಿಯುವಂಥ ಮಧುರ ಘಟನೆ ನಡೆಯಲಿದೆ ಬಹುದಿನದ ನಿವೇಶನ ಕೊಳ್ಳುವ ಕನಸು ನನಸಾಗಲಿದೆ. ಹಣದ ವಿಷಯದಲ್ಲಿ ದಾಕ್ಷಿಣ್ಯದ ಮಾತುಗಳಿಗೆ ಮರುಳಾಗಬೇಡಿ.
  • ಮೀನ
  • ಮುಜುಗರ ಮೀರಿ ನಿಮ್ಮ ಭಾವಿ ಜೀವನ ಸಂಗಾತಿಯಲ್ಲಿ ಮನಸ್ಸಿನ ಮಾತನ್ನು ಆಡುವುದರಿಂದ ಜೀವನದ ಅಡಿಪಾಯ ನಿಮ್ಮದಾಗುವುದು. ಧಾರ್ಮಿಕ ಕ್ಷೇತ್ರದಲ್ಲಿ ದುಡಿಯುವವರಿಗೆ ದೇವರ ರಕ್ಷಣೆ ಸಿಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.