ADVERTISEMENT

ದಿನ ಭವಿಷ್ಯ: ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸಿ

ಗುರುವಾರ, 13 ನವೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ನವೆಂಬರ್ 2025, 23:30 IST
Last Updated 12 ನವೆಂಬರ್ 2025, 23:30 IST
   
ಮೇಷ
  • ಒಡಹುಟ್ಟಿದವರ ಸಹಕಾರದಿಂದ ಮಾನಸಿಕ ನೆಮ್ಮದಿ, ಸಂಸಾರದಲ್ಲಿ ಸಮತೋಲನ ಪಡೆಯುವಿರಿ. ಮಾತೃವರ್ಗದ ಸಂಬಂಧಿಗಳ ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಲಿವೆ.
  • ವೃಷಭ
  • ಜೀವನದ ಸಂಕ್ರಮಣ ಕಾಲದ ಗೊಂದಲಗಳಲ್ಲಿ ಸಂಗಾತಿ ಬೆನ್ನೆಲುಬು ಆಗಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಇನ್ನೊಂದು ಮೆಟ್ಟಿಲು ಹತ್ತುವಂತೆ ಆಗಲಿದೆ. ವೈಷಮ್ಯಗಳು ಅನುಭವಕ್ಕೆ ಬರಲಿವೆ.
  • ಮಿಥುನ
  • ಹೊರದೇಶದ ಉದ್ಯೋಗ ಅನ್ವೇಷಣೆ ಹಾಗೂ ಉನ್ನತ ವಿದ್ಯಾಭ್ಯಾಸಕ್ಕೆ ಬಯಸುವವರಿಗೆ ಒಳ್ಳೆಯ ದಿನ. ಬೇರೆಯವರಿಗೆ ಕೆಲಸ ಹೊರೆಸುವಂಥ ಮೂರ್ಖತನ ಮಾಡದಿರಿ.
  • ಕರ್ಕಾಟಕ
  • ದೈವಬಲದ ಕಾರಣ ಕೈಗೊಂಡ ಕೆಲಸ-ಕಾರ್ಯಗಳಲ್ಲಿ ಜಯ ಉಂಟಾಗಲಿದೆ. ಅನಿರೀಕ್ಷಿತ ಬಂಧುಗಳ ಆಗಮನ ದಿನಚರಿಯನ್ನು ಅದಲು ಬದಲು ಮಾಡುತ್ತದೆ.
  • ಸಿಂಹ
  • ಮನೆ ಜಾಗದ ಪಾಲುದಾರಿಕೆ ವಿಷಯದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಬರಲಿದೆ. ನಿರ್ಮಾಣಕಾರ್ಯದಲ್ಲಿ ತೊಡಗಿರುವವರಿಗೆ ಸಕಾಲ. ದೇವರ ಅನುಗ್ರಹಕ್ಕೆ ಪ್ರಾರ್ಥನೆ ಇರಲಿ.
  • ಕನ್ಯಾ
  • ದೈಹಿಕವಾದ ಶ್ರಮ ಕಡಿಮೆ ಇದ್ದರೂ ಆದಾಯವಿರುವುದರಿಂದ ಮನಸ್ಸಿಗೆ ಅಧಿಕ ಸಂತೋಷ ಆಗಲಿದೆ. ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸಿ.
  • ತುಲಾ
  • ಮುಕ್ತ ಮಾತುಕತೆಯಿಂದ ಮಾತ್ರ ಮನೋಭಿಲಾಷೆಯ ಸ್ಥಾನಮಾನ ದೊರೆಯುತ್ತದೆ. ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ. ಮನೆಯಲ್ಲಿಯೂ ನೆಮ್ಮದಿಯ ವಾತಾವರಣ ಇರಲಿದೆ.
  • ವೃಶ್ಚಿಕ
  • ಮೌಖಿಕವಾಗಿ ಬೆಳೆದ ಮಾತಿನಲ್ಲಿ ತರ್ಕಬದ್ಧ ಉತ್ತರಗಳಿಗೆ ಎಲ್ಲರೂ ಮಾರುಹೋಗುವರು. ಗೌರವಾನ್ವಿತ ವ್ಯಕ್ತಿಯೆಂದು ಅನಿಸಿಕೊಂಡ ನಿಮಗೆ ಸಮಾಜದಲ್ಲಿ ಅಪಮಾನವಾಗಬಹುದು.
  • ಧನು
  • ಉತ್ತಮ ಗುರುವಿನ ಪ್ರಾಪ್ತಿಯಿಂದಾಗಿ ಮನಸ್ಸಿನ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಬಂಧುಗಳ ಮೂಲಕ ಸಹಕಾರ ದೊರೆತು ವ್ಯಾಪಾರದಲ್ಲಿ ಅಧಿಕ ಧನಲಾಭ.
  • ಮಕರ
  • ಜೀವನದ ನಡೆ-ನುಡಿಗಳು ಕಿರಿಯರ ಜೀವನಕ್ಕೆ ಮಾರ್ಗದರ್ಶನದಂತೆ ಸಹಕಾರಿ. ಒಡಹುಟ್ಟಿದವರ ಸಮಸ್ಯೆಗೆ ನಿಮ್ಮಿಂದಾಗುವ ಉಪಕಾರವನ್ನು ಮಾಡುವ ಪ್ರಯತ್ನಮಾಡಿ.
  • ಕುಂಭ
  • ಧರ್ಮಕಾರ್ಯಗಳನ್ನು ಮಾಡುವಲ್ಲಿ ವಿಳಂಬ ಮಾಡದಿರಿ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಉಂಟಾಗಿ ಸಮಸ್ಯೆಗಳು ಎಲ್ಲವೂ ಬಗೆಹರಿಯುತ್ತವೆ. ಮಾನಸಿಕ ನೆಮ್ಮದಿ ಹೆಚ್ಚುವುದು.
  • ಮೀನ
  • ವಸಾಯದಲ್ಲಿ ವಿಪತ್ತನ್ನು ನಿಭಾಯಿಸಲು ಬೇಕಾದ ಸೂಕ್ತ ತಯಾರಿ ಮಾಡಿಟ್ಟುಕೊಳ್ಳಿರಿ. ಮೇಲಧಿಕಾರಿಗಳ ಜೊತೆಯಲ್ಲಿ ಮಿತ್ರತ್ವ ಕಾಪಾಡಿಕೊಳ್ಳುವುದು ಒಳಿತು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.