ADVERTISEMENT

ದಿನ ಭವಿಷ್ಯ: ವಿವಾಹದ ವಿಷಯದಲ್ಲಿ ಮೌನ ಮುರಿಯುವುದು ಅನಿವಾರ್ಯ ಆಗುವುದು...

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಜನವರಿ 2026, 23:30 IST
Last Updated 3 ಜನವರಿ 2026, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ದೇಹಕ್ಕೆ ಅತಿಯಾದ ಶ್ರಮವಾದರೂ ಇಷ್ಟ ಪ್ರಾಪ್ತಿಗಾಗಿ ಕಾರ್ಯವನ್ನು ಸಾಧಿಸಿದ ಸಂತೋಷ ಇರುವುದು. ತಾಯಿಯವರ ಆರೋಗ್ಯ ಸುಧಾರಿಸಿ ಆಸ್ಪತ್ರೆಯಿಂದ ಮನೆಗೆ ಬರುವಂತಾಗಲಿದೆ.
  • ವೃಷಭ
  • ಔದ್ಯೋಗಿಕ ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ. ಸತ್ಕಾರ್ಯಗಳಲ್ಲಿ ಆದಾಯವನ್ನು ಮೀರಿ ಖರ್ಚುಗಳಿದ್ದರೂ ಚಿಂತಿಸುವ ಅಗತ್ಯವಿಲ್ಲ.
  • ಮಿಥುನ
  • ಸಂಘದಲ್ಲಿ ನಾಯಕತ್ವವನ್ನು ವಹಿಸುತ್ತಿರುವುದರಿಂದ ತಪ್ಪುಗಳಿಗೆ ನೇರವಾಗಿ ಅಲ್ಲದಿದ್ದರೂ ಹೊಣೆಗಾರಿಕೆ ನಿಮ್ಮದೂ ಸಹ ಆಗಿರುತ್ತದೆ. ನಿಮ್ಮ ಪ್ರಯತ್ನಗಳಿಗೆ ವ್ಯಕ್ತಿಯೊಬ್ಬರ ಬೆಂಬಲ ದೊರೆತು ಯಶಸ್ವಿಯಾಗಿ ನೆರವೇರಲಿದೆ.
  • ಕರ್ಕಾಟಕ
  • ಇಂದಿನ ದಿನದ ಪರಿಸ್ಥಿತಿಗಳನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗಿ ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.
  • ಸಿಂಹ
  • ನಿಮ್ಮ ವ್ಯವಹಾರದ ಮೂಲ ವಿಚಾರವನ್ನು ನಿಮ್ಮ ಉತ್ತರಾಧಿಕಾರಿಗಳಿಗೆ ತಿಳಿಸುವ ಮನಸ್ಸಾಗಲಿದೆ. ನಿಮ್ಮ ಜೀವನದ ಶೈಲಿಯಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭಿಸುತ್ತದೆ. ಮುಖ್ಯ ಕೆಲಸಗಳಿಗೆ ಆಪ್ತರ ಸಲಹೆ ಅಗತ್ಯ.
  • ಕನ್ಯಾ
  • ರಾಜಕೀಯ ವ್ಯಕ್ತಿಗಳಿಗೆ ಸಾಮಾಜಿಕವಾಗಿ ಜನ ಬೆಂಬಲದ ಮತ್ತು ಆರ್ಥಿಕತೆಯ ಕೊರತೆ ಕಾಡಲಿದೆ. ದುಡ್ಡಿನ ವಿಷಯದಲ್ಲಿ ಮೋಸ ಹೋಗುವ ಸಂಭವವಿದೆ. ಹೆತ್ತವರೊಂದಿಗೆ ವಾಗ್ವಾದ ಅಶ್ರೇಯಸ್ಸಿಗೆ ಕಾರಣವಾಗುತ್ತದೆ.
  • ತುಲಾ
  • ಕುಟುಂಬದಲ್ಲಿ ಇರುವಂತಹ ಎಲ್ಲರ ಅಭಿಪ್ರಾಯವನ್ನೂ ಕೇಳಿ ತೀರ್ಮಾನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಈ ದಿನ ನಿಮಗೆ ಯಾವುದೇ ಸಮಸ್ಯಗೆ ಪರಿಹಾರ ಕಂಡುಹಿಡಿಯಲು ಕಷ್ಟವಾಗುವುದಿಲ್ಲ.
  • ವೃಶ್ಚಿಕ
  • ವಿವಾಹದ ವಿಷಯದಲ್ಲಿ ಮೌನ ಮುರಿಯುವುದು ಅನಿವಾರ್ಯ ಆಗುವುದು. ಹವಾ ಬದಲಾವಣೆಗಾಗಿ ಕಿರು ಪ್ರವಾಸದ ಸಾಧ್ಯತೆಗಳಿವೆ. ಪತ್ರಿಕೋದ್ಯಮಿಗಳಿಗೆ ಕ್ರಿಯಾತ್ಮಕ ಬರವಣಿಗೆಯಿಂದ ಏಳಿಗೆ ದೊರಕುವುದು.
  • ಧನು
  • ಗುರಿಯನ್ನು ಮುಟ್ಟುವತ್ತ ನಿಮ್ಮ ಹಾದಿಯನ್ನು ಮತ್ತೊಮ್ಮೆ ಪರಿಶೀಲಿಸಿ ಕೊಂಡಲ್ಲಿ ನಿಮ್ಮ ಯೋಜನೆಗಳು ನೀವು ಆಲೋಚಿಸಿದಕ್ಕಿಂತಲೂ ಹೆಚ್ಚು ಪ್ರಾಯೋಗಿಕವಾಗಿ ನೆರವೇರುವುದು. ವೃತ್ತಿರಂಗದಲ್ಲಿ ಎಚ್ಚರವಿರಲಿ.
  • ಮಕರ
  • ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸಿಗಾಗಿ ಅದರಲ್ಲೂ ವಿಶೇಷವಾಗಿ ವಿಜ್ಞಾನ ವಿಷಯದಲ್ಲಿ ಪರಿಶ್ರಮವನ್ನು ಪಡಬೇಕಾಗುತ್ತದೆ. ಹಿರಿಯರು ನಡೆಸಿಕೊಂಡು ಬಂದ ಧಾರ್ಮಿಕ ವಿಧಿವಿಧಾನವನ್ನು ಆಚರಿಸುವ ಬಗ್ಗೆ ತೀರ್ಮಾನಿಸಿ.
  • ಕುಂಭ
  • ನಿರುದ್ಯೋಗಿಗಳಿಗೆ ಪ್ರತಿಷ್ಠಿತರ ಪರಿಚಯದಿಂದ ಗೌರವಾನ್ವಿತ ಜಾಗದಲ್ಲಿ ಉದ್ಯೋಗ ಸಿಗಲಿದೆ. ಹೆಂಡತಿ ಮಕ್ಕಳೊಂದಿಗೆ ಕೈಗೊಂಡ ಪ್ರವಾಸ ಸುಖದಾಯಕವಾಗಿರುವುದು. ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿದೆ.
  • ಮೀನ
  • ನಿಮ್ಮ ಆಲೋಚನೆಯಲ್ಲಿ ಸಹೋದ್ಯೋಗಿಗಳ ಯಾವುದೇ ತರಹದ ಒತ್ತಡಕ್ಕೆ ಮಣಿಯದೆ ಕೆಲಸದಲ್ಲಿ ಮುನ್ನುಗ್ಗಿ. ಕಚ್ಚಾ ತೈಲದ ವ್ಯವಹಾರದಲ್ಲಿರು ವವರಿಗೆ ಅಧಿಕ ಲಾಭ ಸಿಗಲಿದೆ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ತೋರದಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.