ADVERTISEMENT

ದಿನ ಭವಿಷ್ಯ: ಅವಿವಾಹಿತ ಹೆಣ್ಣು ಮಕ್ಕಳಿಗೆ ಸಂಬಂಧ ಕೂಡಿ ಬರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಫೆಬ್ರುವರಿ 2026, 22:30 IST
Last Updated 18 ಫೆಬ್ರುವರಿ 2026, 22:30 IST
   
ಮೇಷ
  • ಔಷಧಿಗಳು ಅಡ್ಡ ಪರಿಣಾಮ ಬೀರುವಂತಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸಬೇಡಿ. ಸಮಸ್ಯೆ, ದುಃಖವು ಎಲ್ಲರ ಜೀವನದಲ್ಲೂ ಇರುತ್ತದೆ. ಅದಕ್ಕಾಗಿ ಚಿಂತಿಸಬೇಡಿ. 
  • ವೃಷಭ
  • ಕೌಟುಂಬಿಕ ಸಮಸ್ಯೆಗಳಿಗೆ ಎದುರುತ್ತರ ನೀಡದಿರುವುದು ಅತ್ಯುನ್ನತ ಪರಿಹಾರವೆಂದು ಅನುಭವಕ್ಕೆ ಬರುತ್ತದೆ. ಆರ್ಥಿಕವಾಗಿ ಸಾಕಷ್ಟು ಸಂಪಾದನೆಯಾಗುವುದರಿಂದ ಅನಿವಾರ್ಯದ ಖರ್ಚಿಗೇನೂ ಯೋಚನೆ ಇರುವುದಿಲ್ಲ.
  • ಮಿಥುನ
  • ದಿನಸಿ ವರ್ತಕರು ಆರ್ಥಿಕತೆಯಲ್ಲಿ ದುರ್ಬಲವಾಗಬಹುದು. ಎಚ್ಚರವಹಿಸಿ. ವಕೀಲೀ ವೃತ್ತಿಯನ್ನು ಅಭ್ಯಾಸಿಸುವವರಿಗೆ ಪಾಪ-ಪ್ರಜ್ಞೆ ಕಾಡಲಿದೆ. ಅವಿವಾಹಿತ ಹೆಣ್ಣು ಮಕ್ಕಳಿಗೆ ಸಂಬಂಧವೊಂದು ಕೂಡಿ ಬರಲಿದೆ.
  • ಕರ್ಕಾಟಕ
  • ಸಮೀಪವರ್ತಿಗಳ ಸಲಹೆ ಸಹಕಾರದಿಂದ ವ್ಯಾಪಾರ ವಹಿವಾಟು ಗಳಲ್ಲಿನ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಸಣ್ಣ ಪುಟ್ಟ ಅಡಚಣೆಗಳು  ಕೆಲಸ ಕಾರ್ಯಗಳಿಗೆ ಅಡ್ಡಿಯಾಗಲಾರದು.
  • ಸಿಂಹ
  • ಪುಣ್ಯಸಂಪಾದನೆಗಾಗಿ ತಾಯಿಯೊಂದಿಗೆ ತೀರ್ಥಯಾತ್ರೆ ಕೈಗೊಳ್ಳುವ ಆಸೆ ಈಡೇರುವ ಲಕ್ಷಣಗಳು ಕಂಡುಬರಲಿವೆ.  ಕಾರ್ಯ ಸಾಧನೆಗೆ ತೋರಿ ಬರುವ ಅಡ್ಡಿ ಆತಂಕಗಳು ನಿವಾರಣೆಯಾಗಲಿವೆ.
  • ಕನ್ಯಾ
  • ಆತ್ಮೀಯರಂತೆ ಮುಖವಾಡ ಹೊಂದಿರುವ   ಅಕ್ಕ-ಪಕ್ಕದ ಹಿತಶತ್ರುಗಳ ಬಣ್ಣ ನಿಮ್ಮೆದುರು ಬಯಲಾಗಲಿದೆ. ನಿಮ್ಮ ಕಾರ್ಯರಂಗದಲ್ಲಿ ಹೊಸತನಕ್ಕೆ ಯೋಜನೆಯನ್ನು ರೂಪಿಸಬಹುದು.
  • ತುಲಾ
  • ಮುಂದಿನ ಕೆಲಸ ಹಾಗೂ ವೃತ್ತಿ ಜೀವನದ ಬಗ್ಗೆ ಗಂಭೀರ ಆಲೋಚನೆ ಮಾಡುವುದು ಮುಖ್ಯ. ಸಮಸ್ಯೆ ಬಗೆಹರಿಸಲು ಜಾಣತನ ತೋರುವಿರಿ. ಕೆಲವರಿಗೆ ಹಿರಿಯರ ಮಾರ್ಗದರ್ಶನ ಬೇಕೆನಿಸಲಿದೆ.
  • ವೃಶ್ಚಿಕ
  • ವಿಭಿನ್ನ ರೀತಿಯ ಮತ್ತು ಅತಿ ಕ್ಲಿಷ್ಟಕರ ಕೆಲಸವೊಂದನ್ನು ಸ್ನೇಹಿತರೊಬ್ಬರು ನಿಮಗೊಪ್ಪಿಸಲಿದ್ದಾರೆ. ಈ ಕೆಲಸ ಮಾಡುವುದರಿಂದ ಸಾಕಷ್ಟು ಗೌರವವನ್ನು, ಹೆಸರನ್ನು ತರಲಿದೆ.
  • ಧನು
  • ತಾಂತ್ರಿಕ ವರ್ಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅಧಿಕ ಒತ್ತಡದ ಜೊತೆಯಲ್ಲಿ ಅಧಿಕ ಲಾಭ ದೊರಕಲಿದೆ. ಗುರುವಿನ ಮಾರ್ಗದರ್ಶನದಂತೆ ನಡೆಯುವ  ಕೆಲಸದಲ್ಲಿ ಸರ್ವತೋಮುಖವಾದ ಅಭಿವೃದ್ಧಿ ಹೊಂದುವಿರಿ.
  • ಮಕರ
  • ವಸ್ತ್ರ  ವಿನ್ಯಾಸಗಾರರಿಗೆ, ಚಿತ್ರಕಲೆ, ಕಥೆ-ಕವನಗಳನ್ನು ಬರೆಯುವವರಿಗೆ ನಿಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಎಲ್ಲರೊಂದಿಗೆ ವಿಷಯ ವಿನಿಮಯದಿಂದ  ಗೊಂದಲಗಳಿಗೆ ಉತ್ತರ ಸಿಗಲಿದೆ.
  • ಕುಂಭ
  • ಸೋದರರೊಡನೆ ಆಥವಾ ದಾಯಾದಿಗಳೊಡನೆ ಇದ್ದ ಕಲಹಗಳು ನಿರ್ಮೂಲವಾಗಿ ಶುಭವಾಗಲಿದೆ. ಮುದ್ರಣ ವೃತ್ತಿಯವರು ತಪ್ಪಿಲ್ಲದೇ ಕಾರ್ಯ ನಿರ್ವಹಿಸುವುದರಿಂದ ಉತ್ತಮ ಲಾಭ ಬರುವುದು.
  • ಮೀನ
  • ಉನ್ನತ ಶಿಕ್ಷಣ ಮುಂದುವರಿಸಲು ಬಂಧುಗಳ ಸಹಾಯ ಹಸ್ತ ಅಥವಾ ವಾಸ್ತವ್ಯದ ವ್ಯವಸ್ಥೆ ಅಪೇಕ್ಷಿಸಬಹುದು. ವ್ಯವಹಾರಿಕವಾದ ಸುಖ ಸಂಪತ್ತು ಅಧಿಕ ಮಟ್ಟದಲ್ಲಿ ಇದ್ದರೂ ಭವಿಷ್ಯದ ಚಿಂತೆಯು ನಿದ್ದೆಗೆಡಿಸುತ್ತದೆ.