ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಪಾಠದ ರೂಪದಲ್ಲಿ ಮಗನಿಗೆ ಹೇಳುವ ಅನಿವಾರ್ಯತೆಯ ಸನ್ನಿವೇಶ ಎದುರಾಗುವುದು. ಮಾಡಿದ ಕೆಲಸದಿಂದ ನೈತಿಕ ಧೈರ್ಯ ಹೆಚ್ಚುವುದು.
ವೃಷಭ
ನಿರ್ದಿಷ್ಟ ಕೆಲಸಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾಡಿ ಮುಗಿಸಿಕೊಳ್ಳುವಿರಿ. ವೈದ್ಯಕೀಯ ವೃತ್ತಿಯನ್ನು ಅನುಸರಿಸುವವರಿಗೆ ಆಯ-ವ್ಯಯ ಸಮತೋಲನದಲ್ಲಿದ್ದರೂ ಅಪವಾದದ ಭೀತಿ ಎದುರಾಗುವುದು.
ಮಿಥುನ
ಉದ್ಯೋಗದಲ್ಲಿ ಬದಲಾವಣೆಯ ಆಲೋಚನೆಯನ್ನು ಹೊಂದಿದವರು ಆ ಯೋಚನೆಯನ್ನು ಮರೆಯುವುದು ಒಳ್ಳೆಯದು. ಕೈಗಾರಿಕೆಯನ್ನು ನಡೆಸುವವರಿಗೆ ಅಧಿಕ ಖರ್ಚು ಸಂಭವಿಸಲಿದೆ.
ಕರ್ಕಾಟಕ
ಬಾಲ್ಯದ ಮುಗ್ಧತೆಯಿಂದ ತಪ್ಪಿಸಿಕೊಂಡ ಹಲವು ಅವಕಾಶಗಳನ್ನು ನೆನೆದು ಮರುಗುವಿರಿ. ಇಷ್ಟರ ತನಕ ಬಾರದೆ ಇದ್ದ ಸಂಬಂಧಿಕರ ಆಗಮನವು ಆಶ್ಚರ್ಯದ ಜತೆ ಸಂತಸವನ್ನು ತರುತ್ತದೆ. ಓದಿನಲ್ಲಿ ಏಕಾಗ್ರತೆ ಹೆಚ್ಚುವುದು.
ಸಿಂಹ
ಬದಲಾಗದೆ ಇರುವ ಕೆಲವೊಂದು ಮೊಂಡು ತೀರ್ಮಾನಗಳ ಬಗ್ಗೆ ಕುಟುಂಬದವರ ಅಸಮಾಧಾನ ವ್ಯಕ್ತವಾಗಬಹುದು. ನಿಮ್ಮ ಸಂತತಿಯವರೆ ವಿರೋಧಿಸುತ್ತಾರೆ. ಉದ್ಯೋಗದ ಗೌಪ್ಯತೆ ಬಿಟ್ಟುಕೊಡುವುದು ಸರಿಯಲ್ಲ.
ಕನ್ಯಾ
ಕೆಲಸದ ಗಡಿಬಿಡಿಯಿಂದಾಗಿ ಹಲವು ಬಾರಿ ಕೈಕಾಲುಗಳನ್ನು ಪೆಟ್ಟು ಮಾಡಿಕೊಳ್ಳುವ ಸಂಭವವಿದೆ. ಒಡನಾಡಿಗಳ ಪ್ರೀತಿ, ವಿಶ್ವಾಸ ಸಹಕಾರದಿಂದ ಕಾರ್ಯವನ್ನು ಸುಲಭದಲ್ಲಿ ಸಾಧಿಸುವಿರಿ.
ತುಲಾ
ಶಿಕ್ಷಕ ವೃತ್ತಿಯನ್ನು ಮಾಡುವವರಿಗೆ ಬೋಧನಾ ಕೆಲಸಕ್ಕಿಂತ ಮುಖ್ಯವಾಗಿ ದಾಖಲೆಯ ನಿರ್ವಹಣೆ ತಲೆಬಿಸಿ ಎನಿಸಲಿದೆ. ಸಣ್ಣ ವಿಚಾರದಲ್ಲಿ ಅಶಾಂತಿ ತೋರಿಬಂದು ದಾಂಪತ್ಯದಲ್ಲಿ ಕಿರಿಕಿರಿ ಎನಿಸುವುದು.
ವೃಶ್ಚಿಕ
ಹಲವಾರು ಕೆಲಸಗಳಲ್ಲಿ ಅಡೆತಡೆ ಉಂಟಾಗುತ್ತಿರುವುದು ದೇವರ ಹರಕೆಯನ್ನು ತೀರಿಸದ ಪ್ರಭಾವ ಇದ್ದಿರಬಹುದು. ಲಾಭದಾಯಕವೆನಿಸುವ ವ್ಯಕ್ತಿಗಳೊಂದಿಗೆ ಮಾತ್ರ ಮಾತನಾಡುವುದು ಸರಿಯಲ್ಲ.
ಧನು
ವೈದ್ಯರ ಸಲಹೆಯಂತೆ ದೇಹಾರೋಗ್ಯಕ್ಕಾಗಿ ಆಹಾರ ಸೇವನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಆಗು-ಹೋಗುಗಳನ್ನು ಪೂರ್ಣಗೊಳಿಸಲು ಹಣಕಾಸಿನ ಕೊರತೆ ಅಷ್ಟಾಗಿ ಕಾಡದು.
ಮಕರ
ಮುತ್ತು–ರತ್ನಗಳ ಆಭರಣದ ಖರೀದಿ ಮಾಡುವ ಸಂದರ್ಭದಲ್ಲಿ ಸ್ನೇಹಿತೆಯ ಅಭಿರುಚಿ ಸರಿ ಎನ್ನಿಸಬಹುದು. ನೆರೆಯವರ ಸಂಬಂಧಗಳು ಸುಧಾರಿಸುವುದು. ವನವಿಹಾರದಿಂದ ಮನಸ್ಸನ್ನು ತಿಳಿಗೊಳಿಸಬಹುದು.
ಕುಂಭ
ಸೋದರ ಮಾವನ ಸಹಾಯದಿಂದಾಗಿ ಕಟ್ಟಡ ನಿರ್ಮಾಣಕ್ಕೆ ಸಹಾಯವಾಗಬಹುದು. ದಿನಚರಿಯಲ್ಲಿ ಕೋಪ ಹಾಗೂ ಆಕ್ರಮಣಶೀಲತೆ ಎಲ್ಲರಿಗೂ ಗೋಚರವಾಗಬಹುದು. ಕೈತಪ್ಪಿ ಹೋದ ಹಣ ಪುನಃ ಕೈ ಸೇರುವುದು.
ಮೀನ
ಆರೋಗ್ಯದ ವಿಷಯದಲ್ಲಿ ಗೋಚರಕ್ಕೆ ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಅದನ್ನು ಪರಿಹರಿಸುವ ಬಗೆಯನ್ನು ಕಂಡುಹಿಡಿದರೆ ಉತ್ತಮ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಿ.