ADVERTISEMENT

ದಿನ ಭವಿಷ್ಯ: ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದು ಇಂದು ದೂರಾಗುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಡಿಸೆಂಬರ್ 2025, 22:35 IST
Last Updated 31 ಡಿಸೆಂಬರ್ 2025, 22:35 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅಧಿಕಾರಿಗಳ ಭೇಟಿಯಿಂದ ಕಾರ್ಯ ಸಾಧನೆಗೆ ಅನುವು. ಮನೆಯಲ್ಲಿ ಎಲ್ಲರ ಆರೋಗ್ಯ ಚೆನ್ನಾಗಿದ್ದು, ಮನಸ್ಸಿಗೆ ನೆಮ್ಮದಿ ಇರುವುದು. ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕಾಗುವುದು. ವ್ಯಾಪಾರದಲ್ಲಿ ಚತುರ ನಡೆ ಇರಲಿ.
  • ವೃಷಭ
  • ಮುಕ್ತಾಯ ಹಂತದ ಯೋಜನೆಗಳು ನಿಮ್ಮ ಗಡಿಬಿಡಿಯಿಂದಾಗಿ ವ್ಯತ್ಯಾಸವಾಗಬಹುದು. ನೂತನವಾಗಿ ಹೂಡಿಕೆ ಸದ್ಯಕ್ಕೆ ಉತ್ತಮವಲ್ಲ. ನ್ಯಾಯಾಂಗ ಇಲಾಖೆಯವರಿಗೆ ಬಡ್ತಿ ಅಥವಾ ವರ್ಗಾವಣೆ ಉಂಟಾಗುವುದು.
  • ಮಿಥುನ
  • ಈ ದಿನ ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಹೆಂಡತಿಯ ಬಳಗದಲ್ಲಿ ಆದಷ್ಟು ಮೌನವಾಗಿರಲು ನಿಶ್ಚಯಿಸಿ. ಬಹಳ ದಿನಗಳಿಂದ ಕಾಡುತ್ತಿದ್ದ ನಿಮ್ಮ ಸಮಸ್ಯೆಯೊಂದು ಇಂದು ದೂರಾಗುವುದು.
  • ಕರ್ಕಾಟಕ
  • ನಿಮ್ಮಲ್ಲಿರುವ ಮಾತಿನ ಚತುರತೆಯಿಂದ ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ನೆರವೇರುವುದು. ದೇಹದಲ್ಲಿ ವಾಯು ಪೀಡೆ ಹೆಚ್ಚಾಗುವುದ ರಿಂದ ಕಿರಿಕಿರಿ ಎನಿಸಲಿದೆ. ರಸಗೊಬ್ಬರದ ವ್ಯಾಪಾರ ಮಾಡುವವರಿಗೆ ಲಾಭ.
  • ಸಿಂಹ
  • ಅಣ್ಣ ತಮ್ಮಂದಿರ ನಡುವಿನ ವಿಚಾರದಲ್ಲಿ ನೀವು ಈಗ ತೆಗೆದುಕೊಂಡಿದ್ದ ನಿರ್ಧಾರಗಳು ಸರಿಯಾಗಿದೆಯೇ ಎಂದು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ. ಮನೆ ಬದಲಾಯಿಸುವ ಯೋಚನೆ ಮಾಡಬೇಕಾಗಲಿದೆ.
  • ಕನ್ಯಾ
  • ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲ್ಯಗಳನ್ನು ಹೊರ ತೆಗೆಯಲು ಶಿಕ್ಷಕಿಯೊಬ್ಬರು ಸಹಾಯ ಮಾಡುವರು. ವಿದೇಶ ವ್ಯವಹಾರಗಳಿಂದ ಆದಾಯ ಕೈಗೂಡಲಿದೆ. ನಿವೃತ್ತ ಶಿಕ್ಷಕರಿಗೆ ಗೌರವಯುತ ಸ್ಥಾನಮಾನ ಸಿಗಲಿದೆ.
  • ತುಲಾ
  • ಗಣಿತಶಾಸ್ತ್ರಜ್ಞರಿಗೆ, ಆಧ್ಯಾತ್ಮ ಚಿಂತಕರಿಗೆ ಈ ದಿನ ಅತ್ಯಂತ ವಿಶೇಷವಾದ ದಿನವೆನಿಸಲಿದೆ. ಸತ್ಕಾರ್ಯಗಳಲ್ಲಿ ಬಂಧುಗಳುಸಹಕರಿಸುವರು. ಕನಸುಗಳು ಕೈಗೂಡುವ ದಿನ ಇದಾಗಿದೆ.
  • ವೃಶ್ಚಿಕ
  • ಯಾವುದೇ ಸಂಕೋಚವಿಲ್ಲದೆ ನೂತನ ಕಾರ್ಯಭಾರವನ್ನು ಹೆಗಲಿಗೇರಿಸಿಕೊಳ್ಳಿ. ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ದೊರಕುವುದು. ಕೃಷಿಯಲ್ಲಿ ಬೇಸಾಯದ ಕೆಲಸಗಳಿಂದಾಗಿ ಹೆಚ್ಚು ಖರ್ಚು
  • ಧನು
  • ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸದ ಸಮಯ ಅಥವಾ ವಿಸ್ತೀರ್ಣವೂ ಹೆಚ್ಚುವುದು. ಆಹಾರದಲ್ಲಿ ಗುಣಮಟ್ಟ ಮತ್ತು ಶುಚಿತ್ವವನ್ನು ಕಾಪಾಡಿ. ಅನಗತ್ಯವಾಗಿ ನೀವು ಸಮಯವನ್ನು ವ್ಯರ್ಥ ಮಾಡದಿರಿ.
  • ಮಕರ
  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹಾಗು ತಂದೆ-ತಾಯಿಯ ಆರೋಗ್ಯದ ಬಗ್ಗೆ ಗಮನವಹಿಸುವುದು ಅಗತ್ಯ. ಕುಟುಂಬದಲ್ಲಿ ನಿಮ್ಮ ಮೇಲಿನ ತಪ್ಪು ಕಲ್ಪನೆ ಹೋಗಲಾಡಿಸಿಕೊಳ್ಳುವಿರಿ. ಮಹಿಳೆಯರಿಗೆ ಉದ್ಯೋಗದಲ್ಲಿ ಲಾಭವಿರುತ್ತದೆ
  • ಕುಂಭ
  • ಶಿಕ್ಷಕ ವೃತ್ತಿಯವರಿಗೆ ಮಕ್ಕಳ ಅಸಾಮಾನ್ಯ ಬುದ್ಧಿವಂತಿಕೆಯಿಂದಾಗಿ ತರಬೇತಿಯ ಅಗತ್ಯ ಕಾಣುವುದು. ಅಲಂಕಾರಿಕ ವಸ್ತುಗಳ ಮಾರಾಟ ಲಾಭವನ್ನು ತರುವುದು. ವೈಯಕ್ತಿಕ ಕೆಲಸಗಳಿಗೆ ಅಡಚಣೆ ಇರುವುದಿಲ್ಲ.
  • ಮೀನ
  • ದೂರದ ಸಂಚಾರ ತೋರಿಬಂದರೂ, ಅದನ್ನು ಮುಂದೂಡುವುದು ಅನಿವಾರ್ಯವಾಗುತ್ತದೆ. ಮನೆಗೆ ಬಂಧು ಮಿತ್ರರ ಆಗಮನ ನವ ಉಲ್ಲಾಸವನ್ನು ತರಲಿದೆ. ಇತರರ ಸಲಹೆಯನ್ನು ವಿಮರ್ಶಿಸದೇ ಒಪ್ಪಿಕೊಳ್ಳಬೇಡಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.