ದಿನ ಭವಿಷ್ಯ: ಈ ರಾಶಿಯವರಿಗೆ ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಅಕ್ಟೋಬರ್ 2025, 0:20 IST
Last Updated 13 ಅಕ್ಟೋಬರ್ 2025, 0:20 IST
ದಿನ ಭವಿಷ್ಯ
ಮೇಷ
ವಾಸಸ್ಥಾನದ ಬದಲಾವಣೆ ಬಯಸಿದ ನಿಮಗೆ ಹರ್ಷದ ಸಮಯವಾಗಿದೆ.ಇಷ್ಟದ ದೇವಾಲಯ ಅಥವಾ ಮನೆದೇವರ ಸ್ಥಾನಗಳಿಗೆ ಭೇಟಿ ಕೊಡುವ ಯೋಗವಿದೆ. ತವರಿನ ಸೆಳೆತ ಹೆಚ್ಚಾಗುತ್ತದೆ.
ವೃಷಭ
ನಿಮ್ಮ ಪಾತ್ರವನ್ನು ಬಹಳವಾಗಿ ಪ್ರಶಂಸಿಸಿ ಜನರು ಮಾತನಾಡುವರು. ಹೊಸ ಹಿಂಬಾಲಕರನ್ನು ಸಂಪಾದಿಸುವಿರಿ. ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪಾಠ ಕಲಿಯುವಿರಿ.
ಮಿಥುನ
ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡಿಕೊಂಡು ಪರಿಹಾರವನ್ನು ಕ್ಲಿಷ್ಟಕರವನ್ನಾಗಿ ಮಾಡಿಕೊಳ್ಳದಿರಿ. ಸಾಕಿದ ಜಾನುವಾರು ಆರೋಗ್ಯ ನಿರ್ವಹಣೆಗೋಸ್ಕರ ಹಣವನ್ನು ವಿನಿಯೋಗ ಮಾಡುವಿರಿ.
ಕರ್ಕಾಟಕ
ಅರಣ್ಯ ಚಾರಣಿಗರಿಗೆ ಬಯಸಿದ ಸ್ಥಾನಕ್ಕೆ ತೆರಳುವ ಅವಕಾಶವು ಸಿಗದೆ ಬಹಳ ಬೇಸರವಾಗುತ್ತದೆ. ಅವಘಡವನ್ನು ಸರಿಪಡಿಸಿಕೊಂಡು ಮರೆಯಲು ಹೆಚ್ಚಿನ ಸಮಯ ಹಿಡಿಯಬಹುದು.
ಸಿಂಹ
ಆತ್ಮೀಯರ ಅಗಲಿಕೆಯಿಂದಾಗಿ ಕ್ಷಣವು ಸಹ ಯುಗಗಳನ್ನು ಕಳೆದ ಅನುಭವವಾಗಬಹುದು. ಭೂಮಿ ಖರೀದಿ ವಿಚಾರ ಮುಂದಕ್ಕೆ ಹಾಕುವ ಪರಿಸ್ಥಿತಿ ಕಂಡುಬಂದೀತು. ದಿನನಿತ್ಯದ ಹಣಕಾಸಿನ ಕೊರತೆ ಇರುವುದಿಲ್ಲ.
ಕನ್ಯಾ
ಶೈಕ್ಷಣಿಕ ಹಾಗೂ ಸಾಂಸಾರಿಕ ಪರೀಕ್ಷೆಗಳೆರಡರಲ್ಲೂ ಫಲಿತಾಂಶವನ್ನು ಪಡೆಯಲು ಪ್ರಯತ್ನ ಈಗಿನದ್ದಕ್ಕಿಂತ ಹೆಚ್ಚು ಅಗತ್ಯವಿದೆ. ಮಾಡಿದ ಪ್ರಯಾಣದ ಪರಿಣಾಮವಾಗಿ ದೇಹಾಯಾಸ ಹಾಗೂ ನೋವನ್ನು ಅನುಭವಿಸುವಿರಿ.
ತುಲಾ
ಗೆಲುವು ಅತ್ಯಂತ ಸಮೀಪ ಇರುವುದು, ದೂರ ಇದ್ದಂತೆ ಭಾಸವಾಗಿ ಬೇಸರಗೊಂಡು ಕೈಬಿಡದಿರಿ. ಕೆಲಸಗಾರರ ಸಮಸ್ಯೆಗಳಿಗೆ ಸ್ಪಂದಿಸುವುದು ಅನಿವಾರ್ಯ. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭವಿರುವುದು.
ವೃಶ್ಚಿಕ
ತಪ್ಪುಗಳನ್ನು ತಿದ್ದಿಹೇಳುವಲ್ಲಿ ಹಿರಿಯ ಅಧಿಕಾರಿಗಳು ನೆರವಿಗೆ ನಿಲ್ಲುವರು. ಮನಸ್ಸಿಗೆ ಕಡಿವಾಣ ಹಾಕುವುದು ಉತ್ತಮ. ಭಾರತಿದೇವಿಯ ಸದ್ಪರಂಪರೆಯಲ್ಲಿ ಇರುವುದಕ್ಕೆ ಹೆಮ್ಮೆ ಪಡುವಂತೆ ಆಗುತ್ತದೆ.
ಧನು
ಇಂಪಾದ ವಾದ್ಯ ಸಂಗೀತ ಕದಡಿದ ನಿಮ್ಮ ಮನಸ್ಸನ್ನು ತಿಳಿಗೊಳಿಸುವಲ್ಲಿ ಸಹಕಾರಿ. ವ್ಯವಹಾರದ ಪಾರದರ್ಶಕತೆ ಶುಭವನ್ನುಂಟು ಮಾಡುತ್ತದೆ. ಹೆಚ್ಚು ಜ್ಞಾನ ಪಡೆಯುವ ಮನಸ್ಸಿನಿಂದ ಪರ ಊರಿಗೆ ತೆರಳುವ ಸಾಧ್ಯತೆ ಇದೆ.
ಮಕರ
ಕುಟುಂಬದ ವ್ಯಕ್ತಿಗಳ ನಿರೀಕ್ಷೆಗಳನ್ನು ಸೂಕ್ಷ್ಮವಾಗಿ ತಿಳಿದು ಅದರಂತೆ ಬದುಕುವುದು ಸರ್ವಕ್ಷೇಮ. ಮಕ್ಕಳ ಆಟಿಕೆ ಸಾಮಾನು ಮಾರಾಟಗಾರರಿಗೆ ಲಾಭ. ವಿವಿಧ ಹೊಸ ಮೂಲಗಳಿಂದ ಧನಾಗಮವಾಗುವುದು.
ಕುಂಭ
ವೃತ್ತಿಯಲ್ಲಿ ರಾತ್ರಿ ಪಾಳಿ ತಪ್ಪುವಂಥ ಘಟನೆ ನಡೆದ ಕಾರಣದಿಂದಾಗಿ ಮನಸ್ಸಿಗೆ ಸಮಾಧಾನವಾಗುವುದು. ಉತ್ತರ ತಿಳಿಯದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿನಲ್ಲಿ ವಾಸ್ತವವನ್ನು ಮರೆಯದಿರಿ.
ಮೀನ
ಸಸ್ಯಶಾಸ್ತ್ರಜ್ಞರು ಶಿಲೀಂಧ್ರಗಳ ಅಧ್ಯಯನ ನಡೆಸುವುದಿದ್ದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಸೂಕ್ತ. ಮನೆಯ ದುರಸ್ತಿ ಕಾರ್ಯಗಳು ಅಥವಾ ನೂತನ ಮನೆಯ ನಿರ್ಮಾಣವನ್ನು ಬೇಗ ಮುಗಿಸುವುದು ಸೂಕ್ತ.