ADVERTISEMENT

ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯವಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ನವೆಂಬರ್ 2025, 23:24 IST
Last Updated 7 ನವೆಂಬರ್ 2025, 23:24 IST
   
ಮೇಷ
  • ಕುಟುಂಬ ನಿರ್ವಹಣೆಗಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾದರೂ ಆದಾಯಕ್ಕೇನೂ ಕೊರತೆ ಇರುವುದಿಲ್ಲ. ಸಂತಸದ ವಿಚಾರವನ್ನು ಸ್ವೀಕರಿಸಲು ಕಷ್ಟವಾಗುವುದು.
  • ವೃಷಭ
  • ಸ್ವಲ್ಪ ದಿನದ ಹಿಂದೆ ಪರಿಹಾರ ಕಾಣದೆ ಕಾಡುತ್ತಿದ್ದ ಒಂದು ಸಮಸ್ಯೆ ಹಿಮದಂತೆ ಕರಗಿಹೋಗುತ್ತದೆ. ಸಹಾಯಕ ವರ್ಗದವರ ಕಷ್ಟಗಳಿಗೆ ನೆರವಾಗುವ ಗುಣಗಳನ್ನು ರೂಢಿಸಿಕೊಳ್ಳಿ.
  • ಮಿಥುನ
  • ಸ್ವಂತ ಉದ್ಯೋಗ ನಡೆಸುವವರು ಒಳ್ಳೆಯ ಆಭಿವೃದ್ಧಿ ಎದುರು ನೋಡಬಹುದು. ರಾಜಕೀಯ ವಲಯದ ಕಾರ್ಯಕರ್ತರಿಗೆ ಅರಿವಿಗೆ ಬರದಂತೆ ಮುನ್ನಡೆಯುವ ಅವಕಾಶಗಳು ಕೈ ತಪ್ಪಲಿವೆ.
  • ಕರ್ಕಾಟಕ
  • ಮಕ್ಕಳ ವಿಚಾರದಲ್ಲಿ ಭವಿಷ್ಯದ ದೃಷ್ಟಿಯಿಂದ ದೊಡ್ಡದು ಸಣ್ಣದು ಎಂಬ ಬೇಧ ಮಾಡದೇ ತಕ್ಷಣ ಕಾರ್ಯೋನ್ಮುಖರಾಗಿ. ಆಶ್ವಾಸನೀಯ ವರ್ತನೆಯಿಂದ ಸಂತಸ ಉಂಟಾಗುವುದು.
  • ಸಿಂಹ
  • ರಾಜಕೀಯ ವರ್ಗದವರು ರಾಜಕಾರಣದ ತಂತ್ರಗಾರಿಕೆ ನಡೆಸುವುದು ಅಗತ್ಯ. ಹಣಕಾಸಿನ ವ್ಯಾಮೋಹ ತೊಂದರೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಮಧ್ಯಸ್ಥಿಕೆಯಿಂದ ಸಮಸ್ಯೆಗೆ ಪರಿಹಾರ.
  • ಕನ್ಯಾ
  • ತಿಂಗಳ ಕೊನೆಯಲ್ಲಿ ಅನುಭವಿಸಿದ ಹಣದ ಕಷ್ಟವನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳುವಿರಿ. ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ಅಧಿಕಾರ, ಅನುಭವದಿಂದ ಆತ್ಮಾಭಿಮಾನ ವೃದ್ಧಿ .
  • ತುಲಾ
  • ಎದ್ದ ಸಮಯದಲ್ಲಿ ಅಶುಭದ ಸಂಕೇತವೆಂದು ಕಂಡ ವಿಷಯಗಳ ಬಗ್ಗೆ ಚಿಂತಿಸದಿರಿ. ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭ ಬರಲಿದೆ.
  • ವೃಶ್ಚಿಕ
  • ಹೊಸ ಒಪ್ಪಂದವೊಂದನ್ನು ಒಪ್ಪಿಕೊಳ್ಳುವ ಮುನ್ನ ತುಸು ಯೋಚಿಸುವುದು ಉತ್ತಮ ಎಂಬ ಭಾವನೆ ಮನಸ್ಸಿಗೆ ಬರಲಿದೆ. ಅದು ಸರಿಯಾದದ್ದು. ಅವಿವಾಹಿತರಿಗೆ ಕಂಕಣ ಭಾಗ್ಯವಿದೆ.
  • ಧನು
  • ಸಾಕುಪ್ರಾಣಿಯ ತೀವ್ರ ಅನಾರೋಗ್ಯವು ದುಃಖಕರವನ್ನಾಗಿ ಮಾಡಬಹುದು. ಸ್ನೇಹಿತರೊಡನೆ ಸುಂದರ ಸಂಜೆಯನ್ನು ಕಳೆಯುವ ಅವಕಾಶಗಳನ್ನು ತಪ್ಪಿಸಿಕೊಳ್ಳುವ ಯೋಚನೆಯನ್ನು ಮಾಡದಿರಿ.
  • ಮಕರ
  • ವಿದ್ಯಾಭ್ಯಾಸ, ವೃತ್ತಿಯ ಬಗ್ಗೆ ಆತುರ ನಿರ್ಧಾರ ತೆಗೆದುಕೊಳ್ಳಬೇಡಿ. ಕಾಲು ನೋವು ಅಥವಾ ಬೆನ್ನು ನೋವು ಕಾಣಿಸಿದವರಿಗೆ ವೈದ್ಯರ ದರ್ಶನ ಅಗತ್ಯವೆನಿಸಲಿದೆ.
  • ಕುಂಭ
  • ಆಹಾರದ ವ್ಯತ್ಯಾಸದಿಂದಾಗಿ ಚರ್ಮದಲ್ಲಿ ದಡಾರಗಳು ಅಥವಾ ತುರಿಕೆ ಕಾಣಿಸಿಕೊಳ್ಳಬಹುದು. ಅನಿರೀಕ್ಷಿತವಾದರೂ ಬದುಕಿನಲ್ಲಿ ಒಳ್ಳೆಯ ಬೆಳವಣಿಗೆಗಳಾಗುವ ಲಕ್ಷಣಗಳು ಕಾಣುತ್ತಿವೆ.
  • ಮೀನ
  • ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು. ನೂತನ ದಂಪತಿ ಸಂತಾನದ ಶುಭ ಸುದ್ದಿಯನ್ನು ಕೇಳುವಿರಿ. ಪಾಲುದಾರರು ಒಪ್ಪಿಗೆ ನೀಡುತ್ತಾರೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.