ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರಗಳಲ್ಲಿ ಲಾಭ ಸಿಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಅಕ್ಟೋಬರ್ 2025, 22:30 IST
Last Updated 2 ಅಕ್ಟೋಬರ್ 2025, 22:30 IST
   
ಮೇಷ
  • ವೈಯಕ್ತಿಕ ಕಾರ್ಯದೊತ್ತಡದ ನಡುವೆ  ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು, ರಾಜಕೀಯ ಸೇರಲು ಆಹ್ವಾನ ಬರಲಿದೆ. ಅದರ ಪರಿಣಾಮವಾಗಿ  ಮುಂದಿನ ಹಾದಿಯು ಗೊಂದಲಕ್ಕೆ ಒಳಗಾಗುವುದು.
  • ವೃಷಭ
  • ಆಫೀಸಿನಲ್ಲಿ ಧನಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲು ಉತ್ತಮ ಸಮಯ. ಹೊಸ ಜನರ ಭೇಟಿಯಾಗುವುದು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಬಹಳಷ್ಟು ಜಾಣತನ ತೋರಬೇಕಾಗುವುದು.
  • ಮಿಥುನ
  • ಸಂಬಂಧಗಳಲ್ಲಿ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯ.  ಆರ್ಥಿಕ ಪರಿಸ್ಥಿತಿಗೆ  ಕಾರ್ಯಗಳನ್ನು ಕೈಗೊಳ್ಳುವುದು ಒಳ್ಳೆಯದು. ಆದಾಯ ಹೆಚ್ಚಲು ವಾಮಮಾರ್ಗ ಹಿಡಿಯುವುದು ಭವಿಷ್ಯಕ್ಕೆ ಅಪಾಯ.
  • ಕರ್ಕಾಟಕ
  • ವ್ಯವಸಾಯಗಾರರು ಇಲಾಖೆಯವರಿಂದ ಸಹಾಯ ಪಡೆದುಕೊಳ್ಳುವುದು ಅನಿವಾರ್ಯ. ನಿರ್ದಿಷ್ಟ ಕೆಲಸಗಳಿಗೆ  ಗಮನ ಕೊಡುವುದು ಒಳ್ಳೆಯದು. ಆಟೊಮೊಬೈಲ್ ಎಂಜಿನಿಯರ್‌ಗಳಿಗೆ ವಿಶೇಷ ಲಾಭ ಪ್ರಾಪ್ತಿ.
  • ಸಿಂಹ
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿಯಿಂದ ಯಶಸ್ಸು ಪಡೆಯುವಿರಿ. ವೃತ್ತಿ ಜೀವನ ಹಾಗೂ ದಿನಚರಿಯು ಎಂದಿನಂತೆ  ವ್ಯವಸ್ಥಿತವಾಗಿರುವುದು. ರಾಜಕೀಯ ವ್ಯಕ್ತಿಗಳು ಹೊಸ ಹುರುಪು ಕಾಣಲಿದ್ದೀರಿ.
  • ಕನ್ಯಾ
  • ಕೆಲಸ ಕಾರ್ಯಗಳಲ್ಲಿ ಕಷ್ಟ-ನಷ್ಟಗಳು ಎದುರಾಗಬಹುದು. ಕರ್ತವ್ಯವನ್ನು ನಿರ್ಲಕ್ಷಿಸಬೇಡಿ. ಹಿಮ್ಮುಖ ಚಲನೆಯೂ ಸರಿಯಲ್ಲ.  ಬದುಕನ್ನು ಒಂದು ವ್ಯವಸ್ಥೆಗೆ ತರಲು ಮಾರ್ಗದರ್ಶಕರ ಸಲಹೆಯನ್ನು ಪಡೆಯಿರಿ.
  • ತುಲಾ
  • ವೈದ್ಯರ ಸಲಹೆಯಂತೆ ದೇಹಾರೋಗ್ಯಕ್ಕಾಗಿ ಆಹಾರ ಸೇವನೆಯಲ್ಲಿ ಕೆಲವು ನಿರ್ಬಂಧಗಳನ್ನು, ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು. ಅವಿವಾಹಿತರಿಗೆ ವಿವಾಹಯೋಗ ಕೂಡಿ ಬರುವುದು.
  • ವೃಶ್ಚಿಕ
  • ನೇರ, ದಿಟ್ಟ ಮಾತುಗಳು ಇತರರ ಮನಸ್ಸಿಗೆ ನೋವು ಆಗದಿರುವ ರೀತಿಯಲ್ಲಿ ಇರಲಿ. ಮಕ್ಕಳ ಹಿತಾಸಕ್ತಿಯ ಕುರಿತು ಹೆಚ್ಚಿನ ಗಮನವಿರಲಿ. ಸ್ನೇಹಿತರಿಬ್ಬರ ವಾದ-ವಿವಾದದಲ್ಲಿ ಮೌನ ಕಾಯ್ದುಕೊಳ್ಳುವುದೇ ಒಳಿತು.
  • ಧನು
  • ರಾಜಕೀಯ ವಲಯದಲ್ಲಿ ಗೌಪ್ಯತೆ ಮುಖ್ಯ ಮಾತುಕತೆ ನಡೆಸಬೇಕಾಗುವುದು. ಕಲಾವಿದರಿಗೆ ಮುಂಬರುವ ಸ್ಪರ್ಧೆಗಳಿಗೆ ತಯಾರಿ ಮಾಡಿಕೊಳ್ಳಲು ಶುಭದಿನ. ಷೇರು ವ್ಯವಹಾರಗಳಿಂದ ಲಾಭಾಂಶ ಪಡೆದುಕೊಳ್ಳುವಿರಿ.
  • ಮಕರ
  • ವಿಪರೀತ ಕೆಲಸಗಳಿಂದ ದೇಹಾಲಸ್ಯ ತೋರಿ ವಿಶ್ರಾಂತಿ ಬಯಸುವಿರಿ. ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ ಬರಬಹುದು. ದೇಹದಲ್ಲಿ ಕಫ ಅಧಿಕ್ಯವಾಗಿರುವುದರಿಂದ ಅನಾರೋಗ್ಯ ಉಂಟಾಗಬಹುದು.
  • ಕುಂಭ
  • ಹಲವು ದಿನಗಳಿಂದ ಅನುಭವಿಸುತ್ತಿರುವ ಅನಾರೋಗ್ಯ ಸಮಸ್ಯೆ ಉಪಶಮನವಾಗುವುದು. ಸಾಂಸಾರಿಕವಾಗಿ ಪತಿ–ಪತ್ನಿಯ ಅನ್ಯೋನ್ಯತೆ  ಕನಸು ನನಸಾಗಲಿದೆ. ಕಾಫಿ ಬೆಳೆಗಾರರಿಗೆ ಲಾಭ ಇರಲಿದೆ.
  • ಮೀನ
  • ಅನ್ಯರನ್ನು ಉದಾಹರಣೆಯಾಗಿ ತೆಗೆದುಕೊಂಡು ನೈಜತೆ  ಬದಲು ಮಾಡಿಕೊಳ್ಳುವುದು ಸರಿಯಲ್ಲ. ಆಹಾರದಲ್ಲಿ ಹಿತ-ಮಿತವಿರಲಿ. ಅಜೀರ್ಣದ ಸಮಸ್ಯೆ ಕಾಡಬಹುದು. ಸಮಯ ವ್ಯರ್ಥ ಮಾಡಿದರೆ ಧನ ನಷ್ಟವಾಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.