ದಿನ ಭವಿಷ್ಯ: ವೆಂಕಟೇಶ ಸ್ವಾಮಿಯ ಕೃಪೆಯಿಂದ ಕಷ್ಟಗಳು ಪರಿಹಾರವಾಗಲಿವೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಡಿಸೆಂಬರ್ 2025, 0:30 IST
Last Updated 31 ಡಿಸೆಂಬರ್ 2025, 0:30 IST
ದಿನ ಭವಿಷ್ಯ
ಮೇಷ
ಕಾನೂನು ವಿಷಯದಲ್ಲಿ ನಂಬಿಕಸ್ಥ ಹಾಗು ತಿಳಿವಳಿಕೆಯುಳ್ಳ ವ್ಯಕ್ತಿಯಿಂದ ಸಲಹೆ ಪಡೆದುಕೊಳ್ಳುವಿರಿ. ಕೆಲಸದ ಹೊರೆ ಹೆಚ್ಚಾಗಿ ಮಡದಿ ಮಕ್ಕಳಿಂದ ಸಹಕಾರ ಯಾಚಿಸಬೇಕಾಗುವುದು.
ವೃಷಭ
ಕೌಟುಂಬಿಕವಾಗಿ ನಡೆದುಕೊಂಡು ಬಂದಂಥ ದೇವತಾ ಅಥವಾ ದೈವ ಕಾರ್ಯವನ್ನು ಹಮ್ಮಿಕೊಳ್ಳುವ ತೀರ್ಮಾನ ಆಗುವುದು. ಸಹೋದ್ಯೋಗಿಯ ನೆರವಿನಿಂದ ಕಾರ್ಯಗಳು ಶೀಘ್ರ ಸಂಪನ್ನಗೊಳ್ಳಲಿವೆ.
ಮಿಥುನ
ಸೃಜನಶೀಲ ಬರವಣಿಗೆಗಳಿಂದ ಖ್ಯಾತಿ, ಹಣವನ್ನು ಗಳಿಸುವಿರಿ. ಧ್ಯಾನ ಮತ್ತು ಯೋಗದತ್ತ ಗಮನ ಹರಿಸುವಿರಿ. ಸಾಹಿತ್ಯ ವಿದ್ವಾಂಸರು ಅನವಶ್ಯಕ ಮಾತುಗಳಿಂದ ದೂರವಿರುವುದು ಒಳಿತು.
ಕರ್ಕಾಟಕ
ಮನೆತನದ ವೃತ್ತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿರುವವರಿಗೆ ಹಿರಿಯರಿಂದ ಪಡೆದ ಸಲಹೆಯು ಜೀವನಕ್ಕೆ ಹೊಸ ಬುನಾದಿಯಾಗಲಿದೆ. ಆದಾಯ ವೆಚ್ಚಗಳನ್ನು ಸರಿದೂಗಿಸಿಕೊಳ್ಳುವಿರಿ.
ಸಿಂಹ
ಧರ್ಮ-ಕರ್ಮಗಳಲ್ಲಿ ಆಸಕ್ತಿ ತೋರಿದರೆ, ಕಾರ್ಯ ಕ್ಷೇತ್ರ ಹಾಗೂ ಜೀವನದಲ್ಲಿ ಅಭೀಷ್ಟ ಪಡೆಯಬಹುದು. ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೆ ಸೌಲಭ್ಯ ಸಿಗಲಿದೆ. ಶಾರೀರಿಕ ಆರೋಗ್ಯ ಉತ್ತಮವಾಗುವುದು.
ಕನ್ಯಾ
ನಿರೀಕ್ಷಿಸಿದ ಕಾರ್ಯಗಳು ಅವಿಘ್ನವಾಗಿ ನೆರವೇರಿ ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ. ಕೆಲವೊಂದು ಪ್ರತಿಕೂಲ ಫಲಗಳೇ ಕಾರ್ಯಕ್ಷೇತ್ರದಲ್ಲಿದ್ದರೂ ಚಿಂತಿಸುವ ಅವಶ್ಯಕತೆ ಇಲ್ಲ. ಭಾವನೆಗಳನ್ನು ಹೊರ ಹಾಕುವಂತಾಗಲಿದೆ.
ತುಲಾ
ಪಿತ್ರಾರ್ಜಿತ ಆಸ್ತಿಗಳ ವಿಚಾರದಲ್ಲಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಿಬರಲಿದೆ. ಅಂತಿಮ ಕ್ಷಣಗಳಲ್ಲಿ ಪಶ್ಚ್ತಾತ್ತಾಪ ಪಡುವ ಬದಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ. ತೀರ್ಮಾನ ಬಹುಮಟ್ಟಿಗೆ ಸರಿಯಾಗಿರುವುದು.
ವೃಶ್ಚಿಕ
ಆದಾಯದಲ್ಲಿ ಸಣ್ಣ ಹೊಡೆತವನ್ನು ಎದುರಿಸುವಂತಾಗಬಹುದು. ಕಾರಣವನ್ನು ಹುಡುಕಿ ಪಾಠದ ರೀತಿಯಲ್ಲಿ ತೆಗೆದುಕೊಳ್ಳುವುದು ಉತ್ತಮ. ಮನೆಯಲ್ಲಿ ನವ ಶಿಶುವಿನ ಆಗಮನದಿಂದ ಸಂಭ್ರಮ ಉಂಟಾಗುವುದು.
ಧನು
ಗಂಡನ ಹಣಕಾಸಿನ ಪರಿಸ್ಥಿತಿಗೆ ಶ್ರಮಿಸಿ ಸಹಕರಿಸಬೇಕಾದಂತೆ ಆಗುವುದು. ಸುತ್ತಲಿನ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ. ತಂದೆ ತಾಯಿಯು ನಿಮ್ಮ ಕಷ್ಟಕಾರ್ಪಣ್ಯಗಳಿಗೆ ನೆರವಾಗಲಿದ್ದಾರೆ.
ಮಕರ
ಕಾರ್ಯಗಳ ಬಗ್ಗೆ ಹೆಚ್ಚಿನ ನಿಗಾವನ್ನು ಕೊಡುವಂತೆ ಅಧಿಕಾರಿಗಳಿಂದ ತೀಕ್ಷ್ಣವಾದ ಸಂದೇಶ ಬರಲಿದೆ. ವೈದ್ಯರಿಗೆ ವೃತ್ತಿಯಲ್ಲಿ ಸವಾಲೆನಿಸುವ ವಿಷಯಗಳಲ್ಲಿ ಯಶಸ್ಸು ಕಂಡುಬರಲಿದೆ. ದೇಹಕ್ಕೆ ಶೀತ ಬಾಧೆ ಬರಲಿದೆ.
ಕುಂಭ
ವೃತ್ತಿರಂಗದಲ್ಲಿ ಅನವಶ್ಯಕವಾಗಿ ಇತರರ ಕೋಪಕ್ಕೆ ಗುರಿಯಾಗುವುದನ್ನು ಸ್ನೇಹಿತರು ಅಥವಾ ಸಹೋದ್ಯೋಗಿಗಳು ತಪ್ಪಿಸುವರು. ಸಹೋದ್ಯೋಗಿಗಳೊಡನೆ ಅನವಶ್ಯಕವಾದ ವಾದ-ವಿವಾದಗಳು ನಡೆಯದಂತೆ ವರ್ತಿಸಿ.
ಮೀನ
ರಸಗೊಬ್ಬರ ಮತ್ತು ಕೀಟನಾಶಕ ವ್ಯಾಪಾರಿಗಳಿಗೆ ಲಾಭದ ಜೊತೆ ಆಯಾಸವೂ ಕಾಡಲಿದೆ. ಅನವಶ್ಯಕವಾಗಿ ದೂರದ ಪ್ರಯಾಣದ ಸಾಧ್ಯತೆ ಇದೆ. ವೆಂಕಟೇಶ ಸ್ವಾಮಿಯ ಕೃಪೆಯಿಂದ ಕಷ್ಟಗಳು ಪರಿಹಾರವಾಗಲಿವೆ.