ADVERTISEMENT

ದಿನ ಭವಿಷ್ಯ: ಈ ರಾಶಿಯವರು ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ ಇದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಫೆಬ್ರುವರಿ 2026, 22:30 IST
Last Updated 17 ಫೆಬ್ರುವರಿ 2026, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಬಹಳ ದಿನಗಳಿಂದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಔಷಧಿ  ಪ್ರತಿಕ್ರಿಯಿಸಿ ಚೇತರಿಕೆಯ ಹಂತಕ್ಕೆ ಹೋಗುವಿರಿ. ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆಯಿದೆ ಜಾಗ್ರತರಾಗಿರಿ. ದಂತ ವೈದ್ಯರಿಗೆ ಲಾಭದಾಯಕ ದಿನ.
  • ವೃಷಭ
  • ವಿರೋಧಿಗಳು ಇಂದು ರಾಜಿಯಾಗಲು ಬರುವಂಥ ಸನ್ನಿವೇಶಗಳು ನಡೆಯಲಿವೆ. ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಹಾಕುವ ಯೋಚನೆ ಸರಿಯಾದ ಮಾರ್ಗವಾಗಿರುತ್ತದೆ.
  • ಮಿಥುನ
  • ಗೆಳೆಯರ ಗುಂಪಿನಲ್ಲಿ ಮಿತ್ರತ್ವ ಹಾಗು ಶತ್ರುತ್ವ ಹೊಂದಿದವರು ಇರುತ್ತಾರೆಂಬುದನ್ನು ಮರೆಯದಿರಿ. ಷೇರು ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತಾಗಲಿದೆ. ಕ್ರೀಡೆ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೆಚ್ಚಲಿದೆ.
  • ಕರ್ಕಾಟಕ
  • ತೆರೆ ಮರೆಯಲ್ಲಿ ನಡೆಯುತ್ತಿರುವ ಸಂಚನ್ನು, ರಾಜಕೀಯ ಚಟುವಟಿಕೆಗಳನ್ನು ಆಪ್ತರೊಬ್ಬರ ಮೂಲಕವಾಗಿ ತಿಳಿದುಕೊಳ್ಳುವಿರಿ. ದೃಷ್ಟಿಕೋನ ವಿಶಾಲವಾಗಿರುವುದರಿಂದ ವ್ಯವಹಾರ ಸುಗಮವಾಗಿ ನಡೆಯುವುದು.
  • ಸಿಂಹ
  • ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿ ವರ್ಗದವರಲ್ಲಿ ದಿನವಿಡೀ ಚರ್ಚಿಸಿದರೂ ತೀರ್ಮಾನಕ್ಕೆ ಬರುವುದು ಕಷ್ಟಕರ. ತಂದೆಯವರ ಆರೋಗ್ಯ ತಪಾಸಣೆ ನಡೆಸಿ.
  • ಕನ್ಯಾ
  • ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ವಿಮಾ ಯೋಜನೆಗಳಿಂದ  ಲಾಭ ಪಡೆದುಕೊಳ್ಳುವಿರಿ. ಅನುಭವದಿಂದ ಆತ್ಮಾಭಿಮಾನ ವೃದ್ಧಿಯಾಗಲಿದೆ.
  • ತುಲಾ
  • ಯೋಜನೆಗಳು ಅರ್ಧದಲ್ಲಿಯೇ ನಿಂತಿರುವುದರಿಂದ ಆಗಿದ್ದ ನಿರಾಸೆಯು ಆತ್ಮವಿಶ್ವಾಸದಿಂದ ಪುನಃ ಸಕಾರಾತ್ಮಕ ತಿರುವು ಪಡೆದುಕೊಳ್ಳಲಿದೆ. ಗ್ರಂಥ ಪಾಲಕರ ಹುದ್ದೆಗೆ ಅಭ್ಯರ್ಥಿಯಾಗುವುದರಿಂದ ಶುಭವಾಗುವುದು.
  • ವೃಶ್ಚಿಕ
  • ಗುತ್ತಿಗೆಯನ್ನು ನೀಡುವ ಮೊದಲು ಎಲ್ಲ ದಾಖಲೆ ಪತ್ರಗಳಲ್ಲಿ ಸೂಕ್ತ ಸಹಿ ಪಡೆದುಕೊಳ್ಳಲು ಮರೆಯದಿರಿ. ಆಲಸ್ಯದಿಂದಾಗಿ  ಕೆಲಸಗಳನ್ನು  ಮುಂದೂಡದೆ ಪೂರ್ಣಗೊಳಿಸಲು ಪ್ರಯತ್ನಿಸಿ.
  • ಧನು
  • ಆಶ್ಚರ್ಯ ಮೂಡುವಂಥ ಘಟನೆ  ಬದುಕಲ್ಲಿ ಈ ದಿನ ನಡೆಯಲಿದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಬಹಳ ಮುಖ್ಯ.
  • ಮಕರ
  • ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡು ಸಂಸಾರದ ಜವಾಬ್ದಾರಿಯನ್ನು ಉತ್ತಮವಾಗಿ ನೋಡಿಕೊಳ್ಳುವ ಬಗ್ಗೆ ಗಮನವಿರಲಿ. ಕಲಹವನ್ನು ಉಂಟುಮಾಡುವ ವಿಚಾರಗಳನ್ನು ನಿಯಂತ್ರಿಸುವ ಜಾಣ್ಮೆ ನಿಮ್ಮಲ್ಲಿರಲಿ.
  • ಕುಂಭ
  • ಸೋಮಾರಿತನ ಇಲ್ಲದೆ ದುಡಿಯಿರಿ, ಆದರೆ ಸಂಪಾದನೆಯ ಮಾರ್ಗ ದೇವರು ಮೆಚ್ಚುವ ರೀತಿಯಲ್ಲಿ ಸತ್ಯವಾಗಿರಲಿ.ಸಣ್ಣ ಪುಟ್ಟ ಸಮಸ್ಯೆಯನ್ನು ಹೊರತುಪಡಿಸಿ ಆರೋಗ್ಯ, ಮಾನಸಿಕ ನೆಮ್ಮದಿ ಉತ್ತಮವಾಗಿರುತ್ತದೆ.
  • ಮೀನ
  • ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ, ಇರುವ ಅವಕಾಶಗಳನ್ನು ಮುಂದುವರಿಸಿ.   ಬುದ್ಧಿವಂತಿಕೆ  ಪ್ರದರ್ಶಿಸಿ.  ದಿನಚರಿಯಲ್ಲಿ ಸಂತೋಷ, ಉಲ್ಲಾಸ ಅತಿಯಾಗಿ ಇರುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.