ADVERTISEMENT

ದಿನ ಭವಿಷ್ಯ | ಸದ್ಯಕ್ಕೆ ವೃತ್ತಿಯ ಬದಲಾವಣೆಯ ಯೋಚನೆ ಸರಿಯಲ್ಲ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಜುಲೈ 2025, 18:30 IST
Last Updated 15 ಜುಲೈ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಇಂದು ನಿಮ್ಮ ಎಣಿಕೆಯಂತೆ ಕಾರ್ಯಗಳು ಸಿದ್ಧಿಸುವುದು. ನಿಮ್ಮ ಆರೋಗ್ಯವು ದಿನದಿಂದ ದಿನಕ್ಕೆ ಸುಧಾರಿಸುತ್ತದೆ. ವೃತ್ತಿ ಜೀವನದಲ್ಲಿರುವ ಮಾನಸಿಕ ಒತ್ತಡ ಸ್ವಲ್ಪ ಕಡಿಮೆಯಾಗಲಿದೆ.
  • ವೃಷಭ
  • ವಿದೇಶ ಅಥವಾ ದೂರ ಸಂಚಾರದ ಯೋಗವಿದೆ. ಬಂಧುಗಳ ಸಹಾಯದಿಂದ ಪುತ್ರನಿಗೆ ಕಾರ್ಯಾನುಕೂಲವಾಗುವುದು. ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು.
  • ಮಿಥುನ
  • ಕೌಟುಂಬಿಕ ಶಾಂತಿಗೋಸ್ಕರವಾಗಿ ಸದಾ ತಾಳ್ಮೆಯಿಂದ ವ್ಯವಹರಿಸಿ. ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ರಸಗೊಬ್ಬರ ವ್ಯಾಪಾರ ಮಾಡುವವರಿಗೆ ಲಾಭದ ಜೊತೆ ಆಯಾಸವೂ ಕಾಡಲಿದೆ.
  • ಕರ್ಕಾಟಕ
  • ಕೌಟುಂಬಿಕ ಶಾಂತಿಗೋಸ್ಕರವಾಗಿ ಸದಾ ತಾಳ್ಮೆಯಿಂದ ವ್ಯವಹರಿಸಿ. ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ರಸಗೊಬ್ಬರ ವ್ಯಾಪಾರ ಮಾಡುವವರಿಗೆ ಲಾಭದ ಜೊತೆ ಆಯಾಸವೂ ಕಾಡಲಿದೆ.
  • ಸಿಂಹ
  • ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ನಿಮ್ಮೆದುರು ಹಲವಾರು ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ಆಂಜನೇಯನ ಸೇವೆ ಮಾಡುವುದರಿಂದ ಗೊಂದಲ ನಿವಾರಣೆಯಾಗುತ್ತದೆ.
  • ಕನ್ಯಾ
  • ಆರ್ಥಿಕವಾಗಿ ಲಾಭಕ್ಕಾಗಿ ಹೋರಾಟ ನಡೆಸಬೇಕಿದೆ. ಕಾರ್ಯವನ್ನು ಜಯಿಸುವ ಹಂಬಲದಲ್ಲಿ ಆರೋಗ್ಯವನ್ನು ಕಳೆದುಕೊಳ್ಳಬೇಡಿ. ಎತ್ತರದಲ್ಲಿ ಹತ್ತಿ ಕೆಲಸ ಮಾಡುವವರು, ಸಾಹಸ ಪ್ರವೃತ್ತಿಯವರು ಜಾಗೃತರಾಗಿರಿ.
  • ತುಲಾ
  • ಸಮಸ್ಯೆಗಳು ಮತ್ತು ದುಃಖಗಳೆರಡೂ ತನ್ನ ಇರುವಿಕೆಯನ್ನು ತಿಳಿಸಲಿವೆ. ನಿಜ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಹೆಚ್ಚಿನ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ಉನ್ನತ ವ್ಯಾಸಂಗದವರಿಗೆ ನೇರ ಆಯ್ಕೆಗೊಳ್ಳುವ ಸಂಭವವಿದೆ.
  • ವೃಶ್ಚಿಕ
  • ಬಹುದಿನಗಳ ನಿರೀಕ್ಷೆಯ ವಿಚಾರಗಳು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಿದಲ್ಲಿ ಲಾಭ ಕಾಣುವಿರಿ. ನವದಂಪತಿಗಳಿಗೆ ಸಂತಾನ ಭಾಗ್ಯದ ಫಲ ದೊರೆಯಲಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುವುದು.
  • ಧನು
  • ಜೀವನದಲ್ಲಿ ಕೆಲವು ವಿಚಾರಗಳಲ್ಲಿ ಆತಂಕ ಮೂಡಿ ಮನೋಧೈರ್ಯವನ್ನು ಕಟ್ಟಿಹಾಕಿಕೊಳ್ಳುತ್ತದೆ. ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣಲಿದ್ದೀರಿ. ಚಿನ್ನ–ಬೆಳ್ಳಿ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಅಪಕೀರ್ತಿ ಉಂಟಾಗುವ ಸಾಧ್ಯತೆ ಇದೆ.
  • ಮಕರ
  • ನಿಮ್ಮ ಯೋಜನೆಗಳು ಕಾರ್ಯಗತಗೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಬೇಕಾಗುವುದು. ಮಹಾ ಗಣಪತಿಯ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ದಿನಾಂತ್ಯದಲ್ಲಿ ಶಿರೋವೇದನೆ ಎದುರಾಗಬಹುದು.
  • ಕುಂಭ
  • ಆಗು-ಹೋಗುಗಳನ್ನು ಅರಿತು ವ್ಯವಹಾರದಲ್ಲಿ ಮುಂದುವರೆಯಿರಿ. ಮಹತ್ವದ ನಿರ್ಧಾರ ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸುವುದು ಸೂಕ್ತ. ಸದ್ಯಕ್ಕೆ ವೃತ್ತಿಯ ಬದಲಾವಣೆಯ ಯೋಚನೆ ಸರಿಯಲ್ಲ.
  • ಮೀನ
  • ಪ್ರಮುಖ ವಿಚಾರಗಳಲ್ಲಿ ಮುಂದಿನ ಹೆಜ್ಜೆಯಿಡಲು ಸೂಕ್ತ ಸಮಯವಲ್ಲ. ಸಂಬಂಧಗಳನ್ನು ಉಳಿಸಿ ಕಾಪಾಡುವುದರಲ್ಲಿ ಜಯವಿರುತ್ತದೆ. ಹನುಮ ಸಮೇತನಾದ ಶ್ರೀರಾಮನ ಪರಿವಾರವನ್ನು ಆರಾಧಿಸಿ ಶ್ರೇಯೋವಂತರಾಗಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.