ADVERTISEMENT

ದಿನ ಭವಿಷ್ಯ: ಮನಸ್ಸು ಉಲ್ಲಾಸಿತವಾಗಿರುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಅಕ್ಟೋಬರ್ 2024, 18:30 IST
Last Updated 21 ಅಕ್ಟೋಬರ್ 2024, 18:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಐ.ಟಿ.ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಆದಾಯ ಕಂಡುಬರಲಿದೆ. ಮನೆಯ ಒಳಗೆ ಹಾಗೂ ಹೊರಗೆ ಹೇಗೆ ವರ್ತಿಸುವಿರಿ ಎಂಬುದು ಉತ್ತಮ ಬದುಕಿಗೆ ಕಾರಣವಾಗುತ್ತದೆ.
  • ವೃಷಭ
  • ಸರಿಯಾಗಿ ಆಲೋಚಿಸಿದ ಬಳಿಕವಷ್ಟೇ ಯಾವುದೇ ಕೆಲಸವನ್ನು ಆರಂಭಿಸುವುದು ಒಳ್ಳೆಯದು. ಹೊಸ ಜವಾಬ್ದಾರಿಯೊಂದನ್ನು ನಿಭಾಯಿಸಬೇಕಾಗುವುದು. ದೂರ ಪ್ರಯಾಣವನ್ನು ರಾಹುಕಾಲದ ನಂತರದ ಆರಂಭಿಸಿ.
  • ಮಿಥುನ
  • ನಿಮ್ಮ ಕೈಕೆಳಗಿನ ನೌಕರರ ನೆರವು ಅಗತ್ಯವೆನಿಸಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮನಸ್ಸು ಉಲ್ಲಾಸಿತವಾಗಿರುವುದು. ದೇಹದ ಉಷ್ಣಾಂಶ ಹೆಚ್ಚಳವಾಗುವ ಲಕ್ಷಣಗಳಿವೆ.
  • ಕರ್ಕಾಟಕ
  • ಸಮಸ್ಯೆಗಳ ಪರಿಹಾರಕ್ಕಾಗಿ ಹಿತ ಚಿಂತಕರೊಡನೆ ಚರ್ಚಿಸುವುದು ಒಳ್ಳೆಯದು. ಲೇವಾದೇವಿ ವ್ಯವಹಾರಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಕೆಲಸಗಳಲ್ಲಿ ಯಶಸನ್ನು ಪಡೆಯುವಿರಿ.
  • ಸಿಂಹ
  • ನಿವೃತ್ತಿ ಬಳಿಕ ಜೀವನದಲ್ಲಿ ನೆಲೆ ಕಂಡ ಸಂತೃಪ್ತಿ ಭಾವ ಮೂಡಲಿದೆ. ಸಹೋದ್ಯೋಗಿಗಳ ಮಾತಿಗೆ ಗೌರವ ಕೊಡುವುದು ಉತ್ತಮ. ಸಂಜೆಯೊಳಗೆ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ.
  • ಕನ್ಯಾ
  • ಸಹೋದ್ಯೋಗಿಗಳಿಂದ ಹೆಚ್ಚಿನ ಸಹಕಾರ ನಿರೀಕ್ಷಿಸಬೇಡಿ. ಕೋರ್ಟ್ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ಸಮಯ. ಮದುವೆ ವಿಚಾರವಾಗಿ ನಿಮ್ಮ ನಿರ್ಧಾರವನ್ನು ಹಿರಿಯರಿಗೆ ಸ್ಪಷ್ಟವಾಗಿ ತಿಳಿಸಿರಿ.
  • ತುಲಾ
  • ವೈದ್ಯಕೀಯ ಖರ್ಚಿನ ಹಣವನ್ನು ವಿಮಾ ಸಂಸ್ಥೆಯಿಂದ ಪಡೆದುಕೊಳ್ಳುವಂತಾಗುವುದು. ಕೌಟುಂಬಿಕ ಕಲಹದಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಕಚೇರಿಯಲ್ಲಿ ಸಹೋದ್ಯೋಗಿಗಳು ಕಿರುಕುಳ ನೀಡಬಹುದು.
  • ವೃಶ್ಚಿಕ
  • ಸತ್ಯನಾರಾಯಣ ಸ್ವಾಮಿಯ ಆರಾಧನೆಯಿಂದ ಜಟಿಲ ಸಮಸ್ಯೆಗಳು ಕೂಡ ಸುಲಭವಾಗಿ ಬಗೆಹರಿಯಲಿವೆ. ದುರಾಲೋಚನೆಗಳನ್ನು ಬದಲಿಸಿಕೊಳ್ಳಲು ಸೂಕ್ತ ಸಮಯ ಇದಾಗಿದೆ. ಹಣದ ಹರಿವು ಸರಾಗವಾಗಿರಲಿದೆ.
  • ಧನು
  • ಹೊಸ ಕಾರ್ಯ ಆರಂಭಿಸುವ ಮುನ್ನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದು ಒಳಿತು. ಇನ್ನೊಬ್ಬರಿಗೆ ಮೋಸ ಮಾಡುವ ಮನಸ್ಥಿತಿಯಿಂದ ಹೊರಬನ್ನಿ.
  • ಮಕರ
  • ನಿರೀಕ್ಷಿತ ಸ್ಥಾನಮಾನಗಳು ಪ್ರಾಪ್ತಿಯಾಗಲಿವೆ. ಸಂಸಾರದಲ್ಲಿ ಸುಖ ಕಂಡುಬರಲಿದೆ. ದೀರ್ಘ ಪ್ರಯಾಣದಿಂದ ದೇಹಾಯಾಸ ಆಗುವುದು. ಬಂಗಾರ ವ್ಯಾಪಾರಿಗಳು ತಾಳ್ಮೆಯನ್ನು ಕಳೆದುಕೊಳ್ಳಬೇಡಿ.
  • ಕುಂಭ
  • ಕೆಲಸ ಆರಂಭಕ್ಕೆ ಮುನ್ನ ಆಳವಾಗಿ ಯೋಚಿಸದೇ ಮುಂದುವರೆಯುವುದು ಸರಿಯಲ್ಲ. ಸಂತಾನ ಅಪೇಕ್ಷಿಗಳಿಗೆ ಶುಭ ಸಮಾಚಾರ ಕೇಳಿಬರಲಿದೆ. ಗೃಹೋಪಕರಣಗಳ ಖರೀದಿಗೆ ಶುಭದಿನ.
  • ಮೀನ
  • ಮಕ್ಕಳ ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಿ ನೆಮ್ಮದಿ ಉಂಟಾಗಲಿದೆ. ಬರಬೇಕಾದ ಹಣ ಕೈ ಸೇರಲು ಹೆಚ್ಚಿನ ಪ್ರಯತ್ನ ಅಗತ್ಯ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕಂತಹ ಫಲ ಸಿಗದಿರಬಹುದು. ಗಣಪತಿಯನ್ನು ಆರಾಧಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.