ದಿನ ಭವಿಷ್ಯ: ಈ ರಾಶಿಯವರಿಗೆ ದಾನ-ಧರ್ಮ ಪ್ರವೃತ್ತಿಯಿಂದ ಶುಭ ಫಲಗಳು ಸಿಗಲಿವೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಅಕ್ಟೋಬರ್ 2024, 23:30 IST
Last Updated 12 ಅಕ್ಟೋಬರ್ 2024, 23:30 IST
ದಿನ ಭವಿಷ್ಯ
ಮೇಷ
ಗಂಭೀರ ಸಮಸ್ಯೆಯೊಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೆರವಿನಿಂದ ಬಗೆಹರಿಯಲಿದೆ. ಸಂಘ ಸಂಸ್ಥೆಯಲ್ಲಿ ಉನ್ನತ ಸ್ಥಾನಮಾನ ಲಭ್ಯವಾಗುವುದು. ಪ್ರಯಾಣ ಸುಖಕರವಾಗಿರಲಿದೆ.
ವೃಷಭ
ವ್ಯವಹಾರದಲ್ಲಿ ಆದಾಯ ಕಡಿಮೆ ಎಂದೆನಿಸಿದರೂ ಹೆದರುವ ಅಗತ್ಯವಿಲ್ಲ. ನಿಮ್ಮ ಸಮಸ್ಯೆಗಳನ್ನು ನೀವೇ ನಿವಾರಿಸಿಕೊಳ್ಳುವ ರೀತಿಯಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ.
ಮಿಥುನ
ವಿಚಾರಗಳನ್ನು ನಾನಾ ದೃಷ್ಟಿಕೋನಗಳಿಂದ ಅವಲೋಕಿಸಿದಲ್ಲಿ, ಸರಿ ತಪ್ಪಿನ ಅರಿವಾಗಲಿದೆ. ಕುಟುಂಬದ ಹಲವಾರು ತೊಂದರೆಗಳು ಆರ್ಥಿಕ ಸುಧಾರಣೆಯಿಂದಾಗಿ ನಿವಾರಣೆಯಾಗಲಿವೆ.
ಕರ್ಕಾಟಕ
ಗುರಿ ಮುಟ್ಟುವ ಹಾದಿಯನ್ನು ಮಾರ್ಗದರ್ಶಕರ ಸಲಹೆಯಂತೆ ಬದಲಿಸಿಕೊಂಡಲ್ಲಿ, ಯೋಜನೆಗಳು ನೀವು ಆಲೋಚಿಸಿದಕ್ಕಿಂತಲೂ ಶೀಘ್ರವಾಗಿ ನೆರವೇರುವವು. ಆಭರಣ ತಯಾರಕರಿಗೆ ವಿಶೇಷ ದಿನ.
ಸಿಂಹ
ಅನುವಂಶೀಯ ಖಾಯಿಲೆ ಹೊಂದಿದವರು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಕಾರ್ಯಗಳು ದೈವಾನುಗ್ರಹದಿಂದ ಕೈಗೂಡಿ, ನಿರೀಕ್ಷಿತ ಫಲ ಲಭಿಸಲಿದೆ. ಔಷಧಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ.
ಕನ್ಯಾ
ಪ್ರೀತಿಯ ವಿಷಯದಲ್ಲಿ ಮುಂದೇನು ಮಾಡಬೇಕೆಂಬುದರ ಬಗ್ಗೆ ಸೂಚನೆ ಲಭಿಸಲಿದೆ. ಕೌಟುಂಬಿಕ ಸಂಘರ್ಷಗಳು ನಡೆಯದಂತೆ ಹಾಗೂ ಎಲ್ಲರ ನಡುವೆ ಹೊಂದಾಣಿಕೆ ಇರುವಂತೆ ನಡವಳಿಕೆ ಅಳವಡಿಸಿಕೊಳ್ಳಿ.
ತುಲಾ
ಪೌಷ್ಠಿಕಾಂಶ ಆಹಾರ ಸೇವನೆ ಹಾಗೂ ಅಗತ್ಯ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಆರೋಗ್ಯ ಸುಧಾರಿಸಲಿದೆ. ವೃತ್ತಿ ಸ್ಥಳದಲ್ಲಾಗುವ ಬದಲಾವಣೆಯು ಉತ್ಸಾಹ ಹೆಚ್ಚಿಸಲಿದೆ.
ವೃಶ್ಚಿಕ
ಇನ್ನೊಬ್ಬರಿಗೆ ಕೊಡಬೇಕಾದ ವಸ್ತುಗಳನ್ನು ಅವರಿಗೆ ತಲುಪಿಸುವ ಜವಾಬ್ದಾರಿಯನ್ನು ಮರೆಯದಿರಿ. ಸಾಂಕ್ರಾಮಿಕ ರೋಗ ಬಾಧಿಸುವ ಸಾಧ್ಯತೆ ಇದೆ. ನಾಸ್ತಿಕರಿಗೆ ಸವಾಲಿನ ಸನ್ನಿವೇಶಗಳು ಎದುರಾಗಲಿವೆ.
ಧನು
ಧಾರ್ಮಿಕ ನಾಯಕರಿಗೆ ಮರೆಯಲಾಗದ ಘಟನೆಯೊಂದು ಈ ದಿನ ಜರುಗಲಿದೆ. ಸಿನಿಮಾ ಕಲಾವಿದರಿಗೆ ಅಪೇಕ್ಷೆ ಪಟ್ಟಂತೆಯೇ ಅವಕಾಶಗಳು ಸಿಗಲಿವೆ. ಅಪೇಕ್ಷಿತರಿಗೆ ಸಂತಾನ ಪ್ರಾಪ್ತಿಯಾಗಲಿದೆ.
ಮಕರ
ಅತಿ ಆಲಸ್ಯ, ಅಹಂಕಾರ, ಸಂದರ್ಭಕ್ಕೆ ತಕ್ಕುದಲ್ಲದ ಮಾತುಗಾರಿಕೆ ಗೌರವವನ್ನು ಕಡಿಮೆ ಮಾಡುವುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಗಳ ಮಾತನ್ನು ನಿರ್ಲಕ್ಷಿಸುವುದು ಉತ್ತಮ.
ಕುಂಭ
ಕುಟುಂಬ ಹಾಗೂ ವ್ಯವಹಾರದಲ್ಲಿ ಅನಗತ್ಯ ವಿಷಯಗಳತ್ತ ಗಮನಹರಿಸದೆ ಇರುವುದು ಒಳಿತು. ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆ ಅಥವಾ ರಿಪೇರಿ ಮಾಡುವವರಿಗೆ ಸುದಿನ.
ಮೀನ
ದಾನ-ಧರ್ಮ ಪ್ರವೃತ್ತಿಯಿಂದ ಶುಭ ಫಲಗಳು ಸಿಗಲಿವೆ. ನೂತನ ಸಂಬಂಧ ಸಾಂಸಾರಿಕವಾಗಿ ಹೆಚ್ಚು ಫಲ ಕೊಟ್ಟೀತು. ಮಾತೃವರ್ಗದವರ ನೆರವಿನಿಂದ ಆರ್ಥಿಕ ವೃದ್ಧಿಯಾಗಲಿದೆ.