ದಿನ ಭವಿಷ್ಯ: ಈ ರಾಶಿಯವರಿಗೆ ವ್ಯವಹಾರದಲ್ಲಿ ನಷ್ಟವಾಗಬಹುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಅಕ್ಟೋಬರ್ 2025, 0:22 IST
Last Updated 12 ಅಕ್ಟೋಬರ್ 2025, 0:22 IST
ದಿನ ಭವಿಷ್ಯ
ಮೇಷ
ಸಕಾರಾತ್ಮಕವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ನೇಕಾರರಿಗೆ ಉತ್ತಮ ಆದಾಯ ಇರಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಬಂಧುಗಳ ಸಹಾಯ ದೊರಕುವುದು. ಕುಲದೇವರ ಆರಾಧನೆಯಿಂದ ಶುಭವಾಗುವುದು.
ವೃಷಭ
ನೀವು ಈ ದಿನ ಮಾಡುವ ಬುದ್ಧಿವಂತಿಕೆಯ ಕೆಲಸದಿಂದಾಗಿ ಗುಂಪಿನಲ್ಲಿ ಗುರುತಿಸುವಂಥ ವ್ಯಕ್ತಿಯಾಗುವ ಲಕ್ಷಣ ಕಾಣುತ್ತಿದೆ.
ಮಿಥುನ
ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ನಿಮ್ಮ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಹವಾಮಾನದಲ್ಲಿ ಆಗುವ ಬದಲಾವಣೆಯು ನಿಮ್ಮ ಆರೋಗ್ಯದ ಮೇಲೆ ಸಂಪೂರ್ಣ ಪ್ರಭಾವ ಬೀರಲಿದೆ. ಜಾಗ್ರತೆವಹಿಸಿರಿ.
ಕರ್ಕಾಟಕ
ನಿಮ್ಮ ಶೀಘ್ರವಾದ ಕಲಿಕಾ ಸಾಮರ್ಥ್ಯವು ಇತರರು ಹುಬ್ಬೇರುವಂತೆ ಮಾಡುತ್ತದೆ. ಪೌಷ್ಠಿಕ ಆಹಾರ, ಬೇಳೆ ಕಾಳುಗಳನ್ನು ಹೆಚ್ಚಾಗಿ ಸೇವಿಸುವುದರ ಮೂಲಕ ನಿಮಗೆ ಉಂಟಾಗಿರುವ ನಿಶ್ಶಕ್ತಿಯನ್ನು ನಿವಾರಿಸಿಕೊಳ್ಳಬಹುದು.
ಸಿಂಹ
ಹಠಮಾರಿತನದಿಂದ ಮಕ್ಕಳ ಪ್ರತಿಯೊಂದು ಹೆಜ್ಜೆಗೂ ಸಹ ವಿವಿಧ ಕಾರಣಗಳನ್ನು ನೀಡಿ ಅವರನ್ನು ಅಸಮಾಧಾನಪಡಿಸಲು ಹೋಗಬೇಡಿ.
ಕನ್ಯಾ
ಇತ್ತೀಚಿಗಷ್ಟೆ ವೈವಾಹಿಕ ಜೀವನ ಆರಂಭಿಸಿರುವವರು ಧೈರ್ಯದಿಂದ ಎಲ್ಲ ಕಷ್ಟವನ್ನು ಎದುರಿಸುವ ಮನಸ್ಥಿತಿಯನ್ನು ಬೇಗ ಹೊಂದಬೇಕು. ಸಂಗೀತ ಹಾಗೂ ಭರತನಾಟ್ಯದಂತಹ ಇತರೆ ಚಟುವಟಿಕೆಯಲ್ಲಿ ಆಸಕ್ತಿ ಹೆಚ್ಚಾಗಬಹುದು.
ತುಲಾ
ಭವಿಷ್ಯವನ್ನು ಗ್ರಹಿಸುವ ನಿಮ್ಮ ವಿಶೇಷ ಗುಣವನ್ನು ಮಿತ್ರರೆದುರು ಪ್ರದರ್ಶಿಸಿದಾಗ ಅವರು ಅವಕ್ಕಾಗುವ ಸಂಭವವಿದೆ. ನಿಮ್ಮ ನಿಲುವಿನಲ್ಲಿ ಆದಷ್ಟು ಸ್ಥಿರವಾಗಿರುವಂತಹ ಯೋಚನೆಯು ಜೀವನದಲ್ಲಿ ದಡ ಸೇರಲು ಸಹಾಯ ಮಾಡುತ್ತದೆ.
ವೃಶ್ಚಿಕ
ಭಾವನಾತ್ಮಕವಾಗಿ ವರ್ತಿಸಿದಾಗ ಪರಿಹಾರವಾಗದ ಸಂಗತಿಯು, ತಾಳ್ಮೆಯಿಂದ ಕಾದರೆ ಸರಿಹೋಗುತ್ತದೆ. ಉತ್ತಮವಾದ ಮಾತಿನ ಕಲೆಯು ನಿಮ್ಮ ಬೆಂಬಲಕ್ಕೆ ಸದಾ ಇದ್ದೇ ಇರುತ್ತದೆ. ಗಣಪತಿಯ ಆರಾಧನೆ ಶುಭಪ್ರದ.
ಧನು
ನಿಮ್ಮ ವಿಶಿಷ್ಟ ರೀತಿಯ ವೃತ್ತಿ ಕೌಶಲ್ಯದ ಸೂಕ್ಷ್ಮ ವಿಚಾರಗಳನ್ನು ತಿಳಿಯಲು ಸಹೋದ್ಯೋಗಿಯೊಬ್ಬರು ಅಪೇಕ್ಷಿಸುವರು. ಸಕುಟುಂಬ ಸಮೇತರಾಗಿ ಯಾವುದಾದರು ಶಕ್ತಿಪೀಠಕ್ಕೆ ಭೇಟಿ ನೀಡುವಂತಹ ಯೋಚನೆ ಮಾಡಿ.
ಮಕರ
ಊರಿನ ಅಭಿವೃದ್ಧಿಗೆ ನಿಮ್ಮಿಂದ ಅಡಿಪಾಯ ಹಾಕುವಂತಹ ಕೆಲಸ ಕಾರ್ಯಗಳು ಜರುಗುವುದು. ಓದಿನಲ್ಲಿ ಹೆಚ್ಚಿನ ಆಸಕ್ತಿ ಮೂಡುವುದು.
ಕುಂಭ
ಅಭಿಪ್ರಾಯ ವಿನಿಮಯಗಳಿಂದ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ಸಿಗುವುದು. ಅದರಿಂದಾಗಿ ಮನಸ್ಸಿಗೆ ನೆಮ್ಮದಿ ಮೂಡುವುದು. ಹಣ್ಣು-ತರಕಾರಿಗಳ ವ್ಯಾಪಾರಿಗಳಿಗೆ ಲಾಭಾಂಶ ವೃದ್ಧಿಯಾಗುತ್ತದೆ.
ಮೀನ
ಮನೆಯ ಅಲಂಕಾರಿಕ ವಸ್ತುಗಳ ಖರೀದಿಗಾಗಿ ಅಧಿಕ ಖರ್ಚು ಬಂದೀತು. ಸಗಟು ವ್ಯಾಪಾರಿಗಳಿಗೆ ಖರ್ಚು-ವೆಚ್ಚಗಳು ಆದಾಯದ ಮಿತಿಯೊಳಗಿರುವುದು. ವ್ಯವಹಾರದಲ್ಲಿ ನಷ್ಟವಾಗಬಹುದು, ಜಾಗ್ರತೆ ವಹಿಸಿರಿ.