ADVERTISEMENT

ದಿನ ಭವಿಷ್ಯ: ಸಣ್ಣ ಕೈಗಾರಿಕೆ ಉದ್ಯಮಿಗಳಿಗೆ ಅಧಿಕ ಲಾಭವಿದೆ

ಬುಧವಾರ, 24 ಏಪ್ರಿಲ್ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಏಪ್ರಿಲ್ 2024, 18:55 IST
Last Updated 23 ಏಪ್ರಿಲ್ 2024, 18:55 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಜೀವನದ ಕಷ್ಟ ಸುಖಗಳು ತಿರುಗುವ ಚಕ್ರದಂತಿರುವುದರಿಂದ ನಿಮ್ಮ ಜೀವನದಲ್ಲೂ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾ ಭಾವನೆ ಮರೆಯದಿರಿ. ಮನೆಯಲ್ಲಿ ಮಕ್ಕಳ ಒಡನಾಟದಿಂದ ಮನಸ್ಸು ಉಲ್ಲಸಿತವಾಗುವುದು.
  • ವೃಷಭ
  • ಮನೆ ನಿರ್ಮಾಣ ಅಥವಾ ನವೀಕರಿಸುವಂತಹ ಆಲೋಚನೆಯಲ್ಲಿ ತೊಡಗುವಿರಿ. ನಿಮ್ಮ ಅಂತರಾತ್ಮದ ಮಾತು ಕೇಳುವುದರಿಂದ ಶ್ರೇಯಸ್ಸು ಉಂಟಾಗುತ್ತದೆ. ಸಣ್ಣ ಕೈಗಾರಿಕೆ ಉದ್ಯಮಿಗಳಿಗೆ ಅಧಿಕ ಲಾಭವಿದೆ.
  • ಮಿಥುನ
  • ಅಡಿಕೆ ಮಾರಾಟಗಾರರು ನಷ್ಟದಿಂದ ಪಾರಾಗಲು ಪರ್ಯಾಯ ಬೆಳೆ ಬೆಳೆಯುವುದು ಸೂಕ್ತ ಎಂಬ ಯೋಚನೆ ಬರಬಹುದು. ನಿಮ್ಮ ಇತಿ ಮಿತಿಯ ಬಗ್ಗೆ ಮೇಲಿನ ಅಧಿಕಾರಿಗಳು ಅರಿವು ಮೂಡಿಸಲಿದ್ದಾರೆ.
  • ಕರ್ಕಾಟಕ
  • ನಿಮ್ಮ ಕೆಲವೊಂದು ಯೋಜನೆಗಳು ಇಂದು ನಿಮ್ಮನ್ನು ಹೊರತುಪಡಿಸಿ ಬೇರೆಯವರಿಗೂ ಸಹಾಯಕವಾಗಿರುತ್ತವೆ. ನಿಮ್ಮ ವಾಕ್ಚಾತುರ್ಯವು ಇಂದು ಸರಿಯಾದ ಸಮಯಕ್ಕೆ ನಿಮ್ಮ ಸಹಾಯಕ್ಕೆ ಬರಲಿದೆ.
  • ಸಿಂಹ
  • ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ನೀವು ಮತ್ತೊಮ್ಮೆ ಮರುಪರಿಶೀಲಿಸಲು ಹೋಗಿ ದಾರಿ ತಪ್ಪಬೇಡಿ. ಖರ್ಚು ಕಡಿಮೆ ಗಳಿಕೆ ಹೆಚ್ಚಿರುವುದರಿಂದ ನಿಮ್ಮ ಸಂಪಾದನೆಯಲ್ಲಿ ಹೆಚ್ಚಿನ ಪಾಲು ಉಳಿಸಬಹುದು.
  • ಕನ್ಯಾ
  • ಮನೆಯಲ್ಲಿ ಸಣ್ಣ ಕಲಹಕ್ಕೆ ನೀವು ಕಾರಣರಾದಿರಿ ಎಂದು ದುಃಖಿಸುವಂತಾಗಲಿದೆ. ನಿಮ್ಮನ್ನು ನೀವೇ ವಿಮರ್ಶಿಕೊಳ್ಳಬೇಕಾದ ಸ್ಥಿತಿ ಬರಲಿದೆ. ಅನಿರೀಕ್ಷಿತವಾಗಿ ಎದುರಾಗುವ ಅಡ್ಡಿ-ಆತಂಕಗಳಿಗೆ ಧ್ಯೆರ್ಯಗೆಡದಿರಿ.
  • ತುಲಾ
  • ಮನುಷ್ಯ ಪ್ರಯತ್ನದ ಜೊತೆ ದೇವರ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ಎದುರಾಳಿಗಳು ಮರುಪ್ರಶ್ನೆ ಮಾಡಲಾಗದಂಥ ಮಾತನ್ನು ನೀವು ಆಡಿದಲ್ಲಿ ಉದ್ಯೋಗದ ಗೆಲುವು ನಿಮ್ಮದೆ ಆಗಿರುತ್ತದೆ.
  • ವೃಶ್ಚಿಕ
  • ರಾಜಕಾರಣಿಗಳು ಎಲ್ಲರೊಂದಿಗೆ ಸಹಕಾರ ಮನೋಭಾವನೆ ಮತ್ತು ಸರಳತೆಯಿಂದ ಮುಂದುವರಿದಲ್ಲಿ ಯಶಸ್ಸು ಇನ್ನೂ ಹೆಚ್ಚಿನ ರೀತಿಯಲ್ಲಿ ಕಂಡುಬರುತ್ತದೆ. ಸ್ಟೀಲ್ ವ್ಯಾಪಾರಿಗಳಿಗೆ ಲಾಭವಾಗಲಿದೆ.
  • ಧನು
  • ಚಂಚಲ ಸ್ವಭಾವದ ನೀವು ಇಂದು ಅಚಲ ನಿರ್ಧಾರ ಕೈಗೊಳ್ಳುವುದು ಒಳಿತು. ಧಾರ್ಮಿಕ ಕೆಲಸದಲ್ಲಿ ಶ್ರದ್ಧೆ ತೋರಿದಷ್ಟೂ, ಅಭಿವೃದ್ಧಿಯ ದಾರಿ ಕಾಣಬಹುದು. ಗಣಪತಿಯ ಆರಾಧನೆ ವಿಘ್ನ ನಿವಾರಣೆ ಆಗಲಿದೆ.
  • ಮಕರ
  • ಉತ್ಪತ್ತಿಯನ್ನು ಲೆಕ್ಕಿಸಿ ಅರಸಿ ಬಂದ ಉದ್ಯೋಗ ದೂರಮಾಡುವುದು ನಿಮ್ಮ ಮೂರ್ಖತನವಾಗಲಿದೆ. ಸಂಜೆ ಕಾಲದ ವೇಳೆ ಆತ್ಮೀಯರ ಮನೆಯಲ್ಲಿನ ಸಮಾರಂಭಗಳಲ್ಲಿ ಭಾಗವಹಿಸಲಿದ್ದೀರಿ.
  • ಕುಂಭ
  • ರಾಜಕೀಯ ಸಂಬಂಧ ಹೊಂದಿರುವ ವ್ಯಕ್ತಿಗಳು ಇಂದು ನಿಮ್ಮ ಬಳಿ ದೇಹಿ ಎಂದು ಬರಲಿದ್ದು, ಅವರನ್ನು ನೀವು ಗೌರವಿಸುವಿರಿ. ನಿಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಇತರರ ಜತೆ ಸಂವಾದದಲ್ಲಿ ಉತ್ತಮ ಭಾಷೆ ಬಳಸಿ.
  • ಮೀನ
  • ದಿನ ನಿತ್ಯದ ವಸ್ತುಗಳ ಖರೀದಿಯಿಂದ ಕುಟುಂಬ ಸದಸ್ಯರಿಂದ ದೂಷಣೆಗೆ ಒಳಗಾಗುವ ಸಾಧ್ಯತೆ ಇದೆ. ಮನೆಯ ಸಮೀಪ ನಡೆಯುವ ಸಾರ್ವಜನಿಕ ಕಾರ್ಯಕ್ರಮದಿಂದ ನಿಮಗೆ ಕಿರಿಕಿರಿಯಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.