ADVERTISEMENT

ದಿನಭವಿಷ್ಯ: ಈ ರಾಶಿಯವರಿಗೆ ಆಹಾರದ ವ್ಯತ್ಯಾಸದಿಂದಾಗಿ ಆರೋಗ್ಯ ಸಮಸ್ಯೆ ಕಾಣಿಸಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಫೆಬ್ರುವರಿ 2024, 22:30 IST
Last Updated 25 ಫೆಬ್ರುವರಿ 2024, 22:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಮೇಷ: ಯಾರನ್ನು ಹಿತೈಷಿಗಳು ಎಂದು ತಿಳಿದಿರುವಿರೋ ಅವರೇ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಾರೆ. ವಿದೇಶಕ್ಕೆ ತೆರಳಲು ತಯಾರಿ ನಡೆಸುತ್ತಿರುವವರು ಆಘಾತಕಾರಿ ಸುದ್ದಿ ಕೇಳಬಹುದು.
  • ವೃಷಭ
  • ವೃಷಭ: ಮದುವೆ ತಯಾರಿ ನಡೆಸುತ್ತಿರುವವರು ಶೀಘ್ರವಾಗಿ ಕೆಲಸಗಳನ್ನು ಮುಗಿಸುವಿರಿ. ಮನೆಯಲ್ಲಿನ ವೃದ್ಧರ ಆರೋಗ್ಯದಲ್ಲಿ ಏರುಪೇರಾಗುವ ಸಂದರ್ಭ ವಿರುವುದರಿಂದ ಜಾಗ್ರತರಾಗಿರಿ.
  • ಮಿಥುನ
  • ಮಿಥುನ: ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದು ಬಯಸುತ್ತಿರುವ ಗೃಹಿಣಿಯರಿಗೆ ಸರಿಯಾದ ಮಾರ್ಗವೊಂದು ಪ್ರಾಪ್ತಿಯಾಗಲಿದೆ. ಮಧ್ಯಮವರ್ಗದವರಿಗೆ ವಿವಿಧ ಕೆಲಸಗಳಿಗೆ ಹಣ ಹೊಂದಿಸುವ ಚಿಂತೆಯಾಗಲಿದೆ.
  • ಕರ್ಕಾಟಕ
  • ಮಿಥುನ: ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದು ಬಯಸುತ್ತಿರುವ ಗೃಹಿಣಿಯರಿಗೆ ಸರಿಯಾದ ಮಾರ್ಗವೊಂದು ಪ್ರಾಪ್ತಿಯಾಗಲಿದೆ. ಮಧ್ಯಮವರ್ಗದವರಿಗೆ ವಿವಿಧ ಕೆಲಸಗಳಿಗೆ ಹಣ ಹೊಂದಿಸುವ ಚಿಂತೆಯಾಗಲಿದೆ.
  • ಸಿಂಹ
  • ಸಿಂಹ: ಉತ್ಸವಾದಿ ಬೃಹತ್ ಕಾರ್ಯಕ್ರಮದ ಉಸ್ತುವಾರಿಯನ್ನು ನೋಡಿ ಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆ ಇರುವುದು ಆಯಾಸಕ್ಕೆ ಕಾರಣವಾಗಿದೆ. ಮಕ್ಕಳ ಬಗ್ಗೆ ಅತಿಯಾಗಿ ಚಿಂತೆ ಮಾಡುವುದನ್ನು ಕಡಿಮೆ ಮಾಡಿ.
  • ಕನ್ಯಾ
  • ಕನ್ಯಾ: ಮರಳಿ ಯತ್ನವ ಮಾಡು ಮನುಜ ಎಂದು ಹಿರಿಯರು ಹೇಳುವಂತೆ ವ್ಯವಹಾರದಲ್ಲಿ ಒಮ್ಮೆ ಸೋಲನ್ನು ಅನುಭವಿಸಿದ ಮಾತ್ರಕ್ಕೆ ಹಿಂದೆ ಸರಿಯಬೇಡಿ. ಹೂವುಗುಚ್ಛ ವ್ಯಾಪಾರಿಗಳಿಗೆ ಉತ್ತಮ ದಿನ.
  • ತುಲಾ
  • ತುಲಾ: ಕೇಶ ವಿನ್ಯಾಸಕಾರರು ಮತ್ತು ಬ್ಯೂಟಿ ಪಾರ್ಲರ್‌ನವರಿಗೆ ವೈಯಕ್ತಿಕ ಜೀವನದ ಬಗ್ಗೆ ಗಮನಹರಿಸಲು ಸಮಯಾವಕಾಶ ದೊರೆಯುತ್ತದೆ. ಗೃಹಿಣಿಯರಿಗೆ ಕೆಲವು ಕೆಲಸಗಳಲ್ಲಿ ಏರುಪೇರು ಉಂಟಾಗಬಹುದು.
  • ವೃಶ್ಚಿಕ
  • ವೃಶ್ಚಿಕ: ಸರಕುಗಳನ್ನು ರಫ್ತು ಹಾಗು ಆಮದನ್ನು ಮಾಡಿಕೊಳ್ಳುವವರು ಕೆಲಸಗಾರರ ಮೇಲೆ ಕಣ್ಣಿಡಿ. ಸಿಹಿ ತಿಂಡಿಗಳ ತಯಾರಕರು ಹಾಗೂ ಮಾರಾಟಗಾರರು ಲಾಭವನ್ನು ಎದುರುನೋಡಬಹುದು
  • ಧನು
  • ಧನು: ವಿವಾಹ ಯೋಗ್ಯ ವಯಸ್ಕರು ಜೀವನ ಸಂಗಾತಿಯ ಮೇಲೆ ಇರುವ ನಿರೀಕ್ಷೆಗಳನ್ನು ಸ್ವಲ್ಪ ಕಡಿಮೆಗೊಳಿಸಿಕೊಳ್ಳುವುದು ಒಳ್ಳೆಯದು. ಸಣ್ಣ ಗುಡಿಕೈಗಾರಿಕೆ ಅವರಿಗೆ ಉತ್ತಮ ವೇದಿಕೆ ಸಿಗಲಿದೆ.
  • ಮಕರ
  • ಮಕರ: ಕಾಲೇಜು ವಿದ್ಯಾರ್ಥಿಗಳು ರಜಾದಿನದಲ್ಲಿ ಮಾಡಿದ ಮೋಜುಮಸ್ತಿಯ ಅಡ್ಡಪರಿಣಾಮ ಇಂದು ಗೊತ್ತಾಗಲಿದೆ. ಮೊದಲ ಮಗಳ ಉತ್ತಮ ನಡತೆಯಿಂದ ಗೌರವವನ್ನು ಕೊಡಲಿದ್ದಾರೆ.
  • ಕುಂಭ
  • ಕುಂಭ: ಕೆಲಸ ಬದಲಾವಣೆಗಾಗಿ ಪ್ರಯತ್ನಪಡುತ್ತಿದ್ದರೆ ಸೋದರಮಾವನ ಸಹಾಯ ಪಡೆದುಕೊಂಡಲ್ಲಿ ಶೀಘ್ರವಾಗಿ ನಡೆಯುವುದು. ಕುಟುಂಬದಲ್ಲಿ ಎಲ್ಲರ ಸಹಕಾರ ದೊರೆಯುವ ಅದೃಷ್ಟವಂತರಾಗಿರುತ್ತೀರಿ.
  • ಮೀನ
  • ಮೀನ: ಆಹಾರದ ವ್ಯತ್ಯಾಸದಿಂದಾಗಿ ಆರೋಗ್ಯದ ತೊಂದರೆಗಳನ್ನು ಎದುರಿಸುವಿರಿ. ಹೊಸದಾಗಿ ಕಾರ್ಯವನ್ನು ಶುರುಮಾಡುವ ಮೊದಲು ಹಿರಿಯರಿಂದ ಉತ್ತಮ ದಿನ ತಿಳಿದುಕೊಂಡು ಆಶೀರ್ವಾದ ಪಡೆಯಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.