ದಿನ ಭವಿಷ್ಯ: ಈ ರಾಶಿಯ ಸಂತಾನ ಅಪೇಕ್ಷಿಗಳಿಗೆ ಸತ್ಫಲಗಳು ದೊರಕಲಿವೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
ಮೇಷ
ಆತುರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮಗನಿಗೆ ತಿಳಿಸುವುದು ಉತ್ತಮ. ರಕ್ತದಾನ ಮಾಡಲು ಬಯಸುವ ವ್ಯಕ್ತಿಗಳು ಅನಗತ್ಯ ಸಲಹೆಗಳಿಗೆ ತಲೆಕೊಡಲು ಹೋಗದಿರಿ. ಕ್ರೀಡಾ ಚಟುವಟಿಕೆಗಳು ಹೆಚ್ಚುವುದು.
ವೃಷಭ
ಬಹುಕಾಲದ ಬಳಿಕ ವೃತ್ತಿ ಕ್ಷೇತ್ರದಿಂದ ಮರಳಿ ಬಂದು ಪಾಲಕ, ಪೋಷಕ ಹಾಗೂ ಸಂಬಂಧಿಗಳನ್ನು ಭೇಟಿಯಾಗುವ ಭಾಗ್ಯ ಸಿಗಲಿದೆ. ನಿರುದ್ಯೋಗಿಗಳಿಗೆ ಕೆಲವು ಸಂಘ ಸಂಸ್ಥೆಗಳ ಸಹಾಯದಿಂದ ಉದ್ಯೋಗ ಫಲವಿದೆ.
ಮಿಥುನ
ಹೆಂಡತಿಯನ್ನು ಉದ್ದೇಶಿಸಿ ಇತರರು ಹೇಳುವ ದೂರಿನ ಮಾತುಗಳನ್ನು ಕೇಳುವುದು ಸಹಿಸಲಾರದ ವಿಷಯವಾಗುತ್ತದೆ. ಯೋಜನೆಯ ಮೇಲೆ ಗಮನ ಹರಿಸಿ ಆದ ಆಯಾಸವು ಕಡಿಮೆ ಆಗುವುದು.
ಕರ್ಕಾಟಕ
ಮದುವೆಯ ವಿಚಾರದಲ್ಲಿ ಪದೇ ಪದೇ ಬರುತ್ತಿದ್ದ ವಿಘ್ನಗಳು ಸ್ನೇಹಿತನ ಸಹಾಯದಿಂದ ನಿವಾರಣೆಯಾಗುವುದು. ಗಡಿಬಿಡಿಯ ದಿನಚರಿಯಲ್ಲಿ ಶುಭ ಸಮಾಚಾರಗಳನ್ನು ಕೇಳುವಷ್ಟು ವ್ಯವಧಾನ ಇಲ್ಲದಂತೆ ಆಗುತ್ತದೆ.
ಸಿಂಹ
ಯೋಗಾಭ್ಯಾಸದಿಂದ ಏಕಾಗ್ರತೆ ಹಾಗು ಚಿತ್ತ ಶುದ್ಧಿಯನ್ನು ಮಾಡಿಕೊಳ್ಳುವುದು ಉತ್ತಮ. ಕೊಡುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ಮಕ್ಕಳು ಬಯಸುವುದು ತೀರ ಕೋಪವನ್ನು ಉಂಟುಮಾಡಬಹುದು.
ಕನ್ಯಾ
ಎಲ್ಲರಿಗಿಂತ ಕಡಿಮೆ ಪರಿಶ್ರಮದಲ್ಲಿ ಇತರರಿಗಿಂತ ಒಳ್ಳೆಯ ಫಲಿತಾಂಶ ಬರುವುದು ಉಳಿದವರಿಗೆ ಆಶ್ಚರ್ಯ ಚಕಿತ ವಿಷಯವಾಗಿ ತೋರುವುದು. ಅಬಕಾರಿ ಮತ್ತು ಪೊಲೀಸ್ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಲಿದೆ.
ತುಲಾ
ಅನ್ಯರ ಸಮಸ್ಯೆಗಳಿಗೆ ಮಾತುಗಳಿಂದಾಗಿ ಪರಿಹಾರ ದೊರೆತಿರುವುದು ಸಂತೋಷಕ್ಕೆ ಕಾರಣವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಅಧ್ಯಯನ ಅಗತ್ಯ. ಸಂತಾನ ಅಪೇಕ್ಷಿಗಳಿಗೆ ಸತ್ಫಲಗಳು ದೊರಕಲಿವೆ.
ವೃಶ್ಚಿಕ
ಮಕ್ಕಳನ್ನು ಅವರ ಸಂಗಡಿಗರು ವಂಚನೆಯ ಕಡೆಗೆ ಕರೆದೊಯ್ಯದಂತೆ ಮೇಲ್ವಿಚಾರಣೆ ನಡೆಸುವುದು ಉತ್ತಮ. ತನು, ಮನ, ಧನವನ್ನು ಅರ್ಪಿಸಿ ನೀವು ಮಾಡಿದಂಥ ಸಮಾಜಕಾರ್ಯವು ಜನಮನ್ನಣೆಗೊಳಗಾಗುವುದು.
ಧನು
ಸಕುಟುಂಬ ಸಮೇತರಾಗಿ ಮನೆದೇವರ ದರ್ಶನ ಮಾಡುವ ಆಸೆ ಮತ್ತೊಮ್ಮೆ ಕನಸಾಗಿ ಉಳಿಯುತ್ತದೆ. ಅಭೀಷ್ಟಗಳನ್ನು ನೆರವೇರಿಸಿಕೊಳ್ಳಲು ದೇವರ ಪ್ರಾರ್ಥನೆಯ ಜತೆಗೆ ನಿಮ್ಮ ಪ್ರಯತ್ನವಿರಲಿ.
ಮಕರ
ಬರಬೇಕಾದ ಹಣವೆಲ್ಲವೂ ಕೈ ಸೇರಿದರೂ ಈಗಿನ ಪರಿಸ್ಥಿತಿಗೆ ಹೆಚ್ಚಿನ ಧನಸಂಪತ್ತು ಬೇಕಾಗುವುದು. ದಿನನಿತ್ಯದ ಕೆಲಸಗಳಲ್ಲಿ ಅನಪೇಕ್ಷಿತವಾದ ತೊಡಕುಗಳು ಉಂಟಾಗುತ್ತವೆ.
ಕುಂಭ
ಉದ್ಯೋಗದಲ್ಲಿ ಮೇಲಧಿಕಾರಿಗಳ ಕಿರುಕುಳ ಸಂಗಡಿಗರನ್ನು ರೋಸಿಹೋಗುವಂತೆ ಮಾಡುತ್ತದೆ. ನಿಮ್ಮ ಭಾವನೆಗಳಿಗೆ ಕುಟುಂಬದವರು ಬೆಲೆ ಕೊಡದಿರುವುದು ಮಾನಸಿಕವಾಗಿ ನೊಂದುಕೊಳ್ಳುವಂತೆ ಮಾಡುತ್ತದೆ.
ಮೀನ
ಆಪ್ತರು ಹಲವು ಸಲಹೆಗಳನ್ನು ನೀಡಿದರೂ ಅದು ಸರಿ ಹೋಗದೆ ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಳೆಯ ಮಿತ್ರರ ಕೆಲವು ಮಾತುಗಳು ಸಂದರ್ಭಕ್ಕನುಸಾರವಾಗಿ ನೆನಪಾಗುತ್ತದೆ.