ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಮನೆ ದೇವರ ದರ್ಶನ, ಸ್ಮರಣೆ ಶುಭವನ್ನು ತರುತ್ತದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ನವೆಂಬರ್ 2025, 23:30 IST
Last Updated 1 ನವೆಂಬರ್ 2025, 23:30 IST
   
ಮೇಷ
  • ಬಿರುಸಿನ ಚಟುವಟಿಕೆಗಳಿಂದ ಬಿಡುವು ಮಾಡಿಕೊಂಡು ಮನೆಯವರೊಡನೆ ಮನರಂಜನಾಯುಕ್ತವಾಗಿ ಕಾಲ ಕಳೆಯುವಂತಾಗಲಿದೆ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಖರ್ಚು ಉಂಟಾಗುತ್ತದೆ.
  • ವೃಷಭ
  • ಮನೋರೋಗದಿಂದ ಬಳಲುತ್ತಿರುವವರು ಚಿಕಿತ್ಸೆಯನ್ನು ಪಡೆದುಕೊಳ್ಳಿರಿ. ಸಾಂಸಾರಿಕವಾಗಿ ಅಭಿವೃದ್ಧಿಯ ವಿಷಯದಲ್ಲಿ ಶುಭ ವಾರ್ತೆಗಳನ್ನು ಕೇಳುವಿರಿ. ಮುತ್ತು–ರತ್ನಗಳ ವ್ಯಾಪಾರಿಗಳಿಗೆ ಲಾಭವಾಗಲಿದೆ.
  • ಮಿಥುನ
  • ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ನೇಹಿತರನ್ನು ಭೇಟಿಯಾದ ಕಾರಣ ಸಂತೋಷ ಇಮ್ಮಡಿಗೊಳ್ಳಲಿದೆ. ಕಾರ್ಯ ಕ್ಷೇತ್ರದಲ್ಲಿ ವಿವಿಧ ರೀತಿಯ ಅಭಿವೃದ್ಧಿ ಚಟುವಟಿಕೆಗಳಿಂದ ಬಹುಮಟ್ಟಿಗೆ ಮನಸ್ಸು ಸಂತೃಪ್ತಗೊಳ್ಳಲಿದೆ.
  • ಕರ್ಕಾಟಕ
  • ವೃತ್ತಿ ಜೀವನದಲ್ಲಿ ಧೈರ್ಯದಿಂದ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕಣ್ಣೆದುರೇ ದುಷ್ಕರ್ಮಗಳು ನಡೆಯುತ್ತಿದ್ದರೂ ಎನೂ ಮಾಡಲಾಗದ ದುಃಸ್ಥಿತಿ ನಿಮ್ಮದಾಗಬಹುದು.
  • ಸಿಂಹ
  • ಮನೆಯಲ್ಲಿ ಮಾತಿನಿಂದ ಉಂಟಾದ ಬಿಗು ವಾತಾವರಣ ದಿನದ ಅಂತ್ಯದ ಸಮಯದಲ್ಲಿ ತಿಳಿಯಾಗಿ ಮನಸ್ಸಿಗೆ ಸಮಾಧಾನ ಉಂಟಾಗುವುದು. ಕೌಟುಂಬಿಕ ಕಲಹಗಳು ಗೋಚರಕ್ಕೆ ಬಂದಾವು.
  • ಕನ್ಯಾ
  • ಕೆಲವು ವಿಷಯಗಳು ಬೇಸರ ಹುಟ್ಟಿಸಿದರೂ, ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯುವ ಸಮಯ ಹಿಂದಿನ ಲವಲವಿಕೆಯನ್ನು ಮೂಡಿಸುತ್ತದೆ. ಕಿರಿಯರ ಮಾತನ್ನು ಕಡೆಗಣಿಸದೆ ಪರಾಮರ್ಶಿಸಿ.
  • ತುಲಾ
  • ಸಂದರ್ಭವನ್ನು ನೋಡಿಕೊಂಡು ಮನೋಭಿಲಾಷೆ ಬೇಡಿಕೆಯನ್ನು ಅಧಿಕಾರಿಗಳ ಮುಂದಿಡುವುದರಿಂದ ಈಡೇರುತ್ತದೆ. ಈ ದಿನ ವಿವಿಧ ರೀತಿಯಲ್ಲಿ ಆಗುವ ಧನಾಗಮನ ಉತ್ತಮವಾಗಿರಲಿದೆ.
  • ವೃಶ್ಚಿಕ
  • ಮುಂದಾಲೋಚನೆ ಇಲ್ಲದೆ ಶುರುಮಾಡಿದ ಕಾರ್ಯವು ಅನಿರೀಕ್ಷಿತ ಉತ್ತಮ ಫಲ ಕೊಡುವುದರಿಂದ ಸಂತೋಷ ಹೊಂದುವಿರಿ. ಮನೆ ದೇವರ ದರ್ಶನ ಅಥವಾ ಸ್ಮರಣೆ ಶುಭವನ್ನು ತರುತ್ತದೆ.
  • ಧನು
  • ಹಿರಿಯ ನಾಗರಿಕರನ್ನು ಮನೆಯಲ್ಲಿಯೇ ಶುಶ್ರೂಷೆ ಮಾಡುವ ಆಯಾಗಳಿಗೆ ನಿರೀಕ್ಷೆಯ ಹಣ ಸಿಗಲಾಗದು. ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದನ್ನು ಮರೆಯದಿರಿ. ಹರಿತ ವಸ್ತುಗಳಿಂದ ಸಣ್ಣ-ಪುಟ್ಟ ಗಾಯ ಆಗುವ ಸಾಧ್ಯತೆ ಇದೆ.
  • ಮಕರ
  • ಮನೆಯ ಜನರ ಜಗಳದಲ್ಲಿ ಮಾತಿನ ಅವಶ್ಯಕತೆ ಬಂದಾಗಲೂ ಮನಸ್ಸಿನಲ್ಲಿರುವ ಮಾತುಗಳನ್ನೆ ಹೇಳಲು ಸಾಧ್ಯವಾಗುವುದಿಲ್ಲ. ನ್ಯಾಯಾಲಯದದ ಮೊರೆ ಹೋಗುವಂಥ ಕೃತ್ಯಗಳು ನಡೆಯಲಿದೆ.
  • ಕುಂಭ
  • ವಿವಿಧ ಕಾರಣಗಳಿಂದಾಗಿ ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ಸತ್ಕರಿಸಲಾಗದೆ ದಿನದ ಕಡೆಯಲ್ಲಿ ಬೇಸರ ಪಡುವಿರಿ. ರುದ್ರಾರಾಧನೆಯನ್ನು ಮಾಡುವುದರಿಂದ ಬಯಸಿದ ದ್ರವ್ಯವು ಶೀಘ್ರದಲ್ಲಿ ಪ್ರಾಪ್ತಿ.
  • ಮೀನ
  • ಮಹತ್ವಾಕಾಂಕ್ಷೆಯಿಂದ ಗುರಿಯನ್ನು ತಲುಪುವುದು ಕಷ್ಟವೇನಲ್ಲವಾದರು ಪ್ರಯತ್ನ ಮುಖ್ಯ. ಕುದುರೆ ಸಾಕುವುದರ ಜತೆಗೆ ಸವಾರಿಯನ್ನು ಮಾಡುವವರಿಗೆ ಉತ್ತಮ ಅವಕಾಶ ದೊರೆಯಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.