ADVERTISEMENT

Horoscope Today - ದಿನ ಭವಿಷ್ಯ| ಕಟಕ ರಾಶಿಯವರ ಮನದ ಆಸೆಗಳು ಇಂದು ಈಡೇರಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಜೂನ್ 2023, 23:34 IST
Last Updated 28 ಜೂನ್ 2023, 23:34 IST
   
ಮೇಷ
  • ಹಿರಿಯರಿಂದ ಬೈಸಿಕೊಂಡ ಸಲುವಾಗಿ ಮನೆಯಲ್ಲಿ ಯಾರ ನೆರವೂ ಇಲ್ಲದೆ ಎಲ್ಲಾ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವಿರಿ. ಷೇರು ವ್ಯವಹಾರಗಳ ಹೂಡಿಕೆಯು ಸತ್ಫಲ ನೀಡಲಾರದು. ಕೆಂಪು ಬಣ್ಣ ಶುಭ ತರಲಿದೆ.
  • ವೃಷಭ
  • ಆಯ್ಕೆ ಸರಿಯಾಗಿದ್ದು ಕೆಲಸಗಳನ್ನು ನಿರ್ಭಯವಾಗಿ ಮಾಡಿ ಮುಗಿಸುವಿರಿ. ಹೋಟೆಲ್ ಅಥವಾ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರದಿಂದಿರಿ. ಕೆಲಸದ ಬಗ್ಗೆ ಅಧ್ಯಯನ ನಡೆಸಿಕೊಳ್ಳಿರಿ.
  • ಮಿಥುನ
  • ವ್ಯವಹಾರದಲ್ಲಿ ಬಹಳ ದಿನಗಳ ನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು. ಮನೋಕಾಮನೆಗಳು ಪೂರ್ಣಗೊಳ್ಳಲು ದುರ್ಗಾಪರಮೇಶ್ವರಿಯ ಆರಾಧನೆ ಮಾಡಿ. ನೆಮ್ಮದಿಯ ವಾತಾವರಣ ಉಂಟಾಗಲಿದೆ.
  • ಕರ್ಕಾಟಕ
  • ವೈಯಕ್ತಿಕ ವಿಚಾರಗಳಲ್ಲಿ ಅನ್ಯರಿಂದಾಗುವ ಒತ್ತಡಗಳಿಗೆ ಸಿಲುಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು. ನಿಮ್ಮ ಶತ್ರುಗಳ ಬಣ್ಣ ಬಯಲಾಗುವುದು ಸಂತೋಷಕ್ಕೆ ಕಾರಣವಾಗುತ್ತದೆ. ಮನದ ಆಸೆಗಳು ಈ ದಿನ ಈಡೇರಲಿವೆ.
  • ಸಿಂಹ
  • ಸಿಂಹ: ಕೃಷಿಯಲ್ಲಿ ಪಾಲಿಸುತ್ತಿರುವ ತಂತ್ರಗಳು ಶೀಘ್ರದಲ್ಲೇ ಫಲ ನೀಡಲಿದೆ. ವಿರೋಧಿಗಳ ಜೊತೆಯಲ್ಲಿ ದಿನದ ಹಲವು ಸಮಯವನ್ನು ಕಳೆಯಬೇಕಾಗುತ್ತದೆ. ಸಣ್ಣ ಉದ್ಯಮಿಗಳಿಗೆ ಹೆಚ್ಚು ವ್ಯಾಪಾರ ನಡೆಯುವುದು.
  • ಕನ್ಯಾ
  • ಕಾರ್ಯಕ್ಷೇತ್ರದಲ್ಲಿ ಕೆಲಸದ ಒತ್ತಡ ಕಡಿಮೆಯಾಗಿ ಮನೆಯ ವಿಚಾರಕ್ಕೆ ಸಮಯ ನೀಡಲು ಅವಕಾಶವಾಗುವುದು. ಹಿರಿಯರಿಂದ ಹಿತವಾಕ್ಯಗಳು, ಮಾರ್ಗದರ್ಶನ ಸಿಗುವುದು. ಪುಸ್ತಕ ಓದುವ ಹವ್ಯಾಸ ಹುಟ್ಟಲಿದೆ.
  • ತುಲಾ
  • ಮನರಂಜನೆಗೂ ಸಾಕಷ್ಟು ಸಮಯವನ್ನು ಮೀಸಲಿಟ್ಟು ಸಂತಸದಿಂದಿರುವಂತೆ ಆಗುವುದು. ಸ್ವತ್ತಿನ ವಿಚಾರದಲ್ಲಿ ಬಂಧುಗಳು ನೆರವಿಗೆ ಬರುವರು. ಲೆಕ್ಕ ಪರಿಶೋಧಕರು ಕೆಲಸದಲ್ಲಿ ಹೆಚ್ಚಿನ ತೃಪ್ತಿಯನ್ನು ಕಾಣಲಿದ್ದೀರಿ.
  • ವೃಶ್ಚಿಕ
  • ವಿವಾಹ ವಿಷಯಗಳು ನಿಶ್ಚಿತಗೊಂಡಿದ್ದರೂ ಇನ್ನೊಮ್ಮೆ ವಿಚಾರಿಸಿ ದೃಢಪಡಿಸಿಕೊಳ್ಳುವುದು ಉತ್ತಮ. ಲೇವಾದೇವಿ ವ್ಯವಹಾರಗಳು ಉತ್ತಮವಾಗಿ ಮುಂದುವರೆಯುವುದು.
  • ಧನು
  • ವ್ಯವಹಾರಿಕ ಚಾಣಾಕ್ಷತನಕ್ಕೆ, ಕ್ರಿಯಾಶೀಲತೆಗೆ ಸರಿಯಾಗಿ ಈ ದಿನ ಲಾಭವಾಗುವುದು. ನಾನಾ ರೀತಿಯಲ್ಲಿ ಉನ್ನತಿ ಗೋಚರಕ್ಕೆ ಬಂದರೂ ಹಣದ ಖರ್ಚು ವೆಚ್ಚಗಳ ಲೆಕ್ಕಾಚಾರದ ಬಗ್ಗೆ ಗಮನವಿರಲಿ.
  • ಮಕರ
  • ವ್ಯಾಪಾರ ವಿಷಯಗಳ ಸಂಬಂಧದಲ್ಲಿ ಕ್ಲಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಅಂತರಂಗದ ಭಾವನೆಗಳಿಗೆ ಆದ್ಯತೆ ನೀಡಿ. ನಿಮ್ಮ ಉತ್ತಮ ಕಾರ್ಯದಿಂದ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗುವಿರಿ.
  • ಕುಂಭ
  • ಪ್ರಾಮಾಣಿಕತೆಯ ಗುಣ ನೆರವಿಗೆ ಬರುತ್ತದೆ. ಅಸಹಾಯಕ ಪರಿಸ್ಥಿತಿಯಲ್ಲಿರುವ ನೀವು ಪರಿಣತರ ಸಲಹೆ, ಸೂಚನೆಗಳೊಂದಿಗೆ ಗಣಪತಿಯ ಆರಾಧನೆಯಿಂದ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ‌.
  • ಮೀನ
  • ಒಂದು ಘಟನೆ ನಿಮ್ಮನ್ನು ಭಾವುಕರನ್ನಾಗಿ ಮಾಡಲಿದೆ. ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವಿರಿ. ಅನ್ನ ದಾನ ಮಾಡುವ ಯೋಚನೆಗಳು ಈ ದಿನ ನಿಮಗೆ ಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.