ದಿನ ಭವಿಷ್ಯ:ಈ ರಾಶಿಯವರಿಗೆ ಸಜ್ಜನರ ಸಹವಾಸದಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
ದಿನ ಭವಿಷ್ಯ
ಮೇಷ
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಅವಕಾಶಗಳೊಂದಿಗೆ ಹೆಸರಾಂತ ಕಂಪನಿಯಲ್ಲಿ ಕೆಲಸ ಸಿಗುವ ಸಾಧ್ಯತೆಗಳು ಇವೆ. ಮನೆ ಹಾಗೂ ಮನದಲ್ಲಿ ಸುಖ-ಶಾಂತಿ ಸಮೃದ್ಢಿಯಾಗಿ ಕಾಣಲಿದೆ.
ವೃಷಭ
ವಿದ್ಯಾರ್ಥಿಗಳಿಗೆ ಸಹವಾಸ ದೋಷದಿಂದಾಗಿ ಮನಸ್ಸು ಬೇಡದ ದಿಕ್ಕಿನಲ್ಲಿ ಹರಿಯುವುದು. ಸಾಧನೆ ಕಷ್ಟಕರವೆನಿಸಲಿದೆ. ಆಕಸ್ಮಿಕ ಧನಾಗಮನ ದಿಂದಾಗಿ ಬಾಕಿ ಇರಿಸಿಕೊಂಡಿದ್ದ ವ್ಯವಹಾರವು ಪೂರ್ಣಗೊಳ್ಳುವುದು.
ಮಿಥುನ
ಮೇಲಾಧಿಕಾರಿಯ ಮೃದು ವರ್ತನೆಯಿಂದ ನಿಮಗೆ ಸರ್ಕಾರದ ಕೆಲಸ ಕಾರ್ಯಗಳು ಯಶಸ್ವಿಯಾಗಿ ಸಂಪೂರ್ಣಗೊಂಡು ತೃಪ್ತಿಯುಂಟಾಗಲಿದೆ. ನಿಮ್ಮ ಸಮಸ್ಯೆಗೆ ಬಂಧು ಮಿತ್ರರ ನೆರೆವು ಸಿಗಲಿದೆ.
ಕರ್ಕಾಟಕ
ಈ ದಿನ ಕೈಗೊಳ್ಳುವ ಮುಖ್ಯ ಕೆಲಸವು ಮುಕ್ತಾಯದ ಹಂತವನ್ನು ಬಹಳ ವಿಳಂಬವಾಗಿ ನೋಡುತ್ತದೆ. ಸತ್ಯಾಸತ್ಯತೆಗಳನ್ನು ಅರಿಯುವ ಬಗ್ಗೆ ಹೆಚ್ಚಿನ ಗಮನವಿರಲಿ. ಬೂದು ಬಣ್ಣ ಶುಭ ತರಲಿದೆ.
ಸಿಂಹ
ದಿನಸಿ ಮತ್ತು ಆಲಂಕಾರಿಕ ವಸ್ತುಗಳ ವ್ಯಾಪಾರಸ್ಥರಿಗೆ ಶುಭದಿನ. ಮಕ್ಕಳ ಹಿತಾಸಕ್ತಿಯ ಕುರಿತು ಹೆಚ್ಚಿನ ಗಮನವಿರಲಿ. ಆರ್ಥಿಕ ವಿಚಾರದಲ್ಲಿ ನಿಮ್ಮ ಶ್ರಮಕ್ಕೆ ಸರಿಸಮಾನವಾಗಿ ದಿನದಿಂದ ದಿನಕ್ಕೆ ಹೆಚ್ಚಿನ ಅಭಿವೃದ್ಧಿ ಕಾಣುವಿರಿ.
ಕನ್ಯಾ
ಸಜ್ಜನರ ಸಹವಾಸ ಮಾಡುವುದರಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗುತ್ತದೆ. ಮೂಳೆ ವೈದ್ಯರು ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ದಿನದ ಸಂಜೆಯ ಸಮಯದಲ್ಲಿ ವಾಹನ ಚಾಲನೆಯಲ್ಲಿ ಜಾಗರೂಕತೆ ವಹಿಸಿ.
ತುಲಾ
ಅವಿವೇಕಿಗಳ ನಡುವೆ ವಾದಿಸಲು ಹೋಗಬೇಡಿ. ವಿವೇಕಯುತ ನಡವಳಿಕೆಯು ಸಹಾಯಕ. ಹೊಸದನ್ನು ಕಲಿಯುವುದಕ್ಕೆ ಬಹಳ ಉತ್ಸುಕರಾಗಿದ್ದೀರಿ. ವಕೀಲರು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ.
ವೃಶ್ಚಿಕ
ಏಜೆನ್ಸಿಯಂತಹ ಉದ್ಯೋಗ ತೆರೆಯಲು ಸೂಕ್ತ ಸ್ಥಳದ ಹುಡುಕಾಟ ದಲ್ಲಿರುವ ನಿಮಗೆ ಉತ್ತಮ ಸ್ಥಳ ದೊರೆಯುವುದು. ಅನಾರೋಗ್ಯ ಸ್ಥಿತಿ ಎದುರಾಗಿ ಸಂಪಾದನೆಯಲ್ಲಿ ಕೊರತೆ, ಉಳಿತಾಯದಲ್ಲಿ ನಷ್ಟ ವಾಗಬಹುದು.
ಧನು
ಮಹತ್ವದ ನಿರ್ಧಾರವನ್ನು ಕೈಗೊಳ್ಳಬೇಕಾದ ಸಮಯ ಎದುರಾಗಬಹುದು. ಉಪಹಾರ ಗೃಹಗಳಿಂದ ಅಧಿಕ ಲಾಭ. ಆತ್ಮೀಯರ ಸಲಹೆ ಮತ್ತು ಸಹಕಾರದಿಂದ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಬರಲಿದೆ.
ಮಕರ
ರೈತರ ಬೆಳೆಗೆ ಅದರಲ್ಲೂ ಅಧಿಕವಾಗಿ ಹಣ್ಣು ಹಂಪಲುಗಳ ಬೆಳೆಗಾರರಿಗೆ ಕೀಟಬಾಧೆ ಕಾಡುವುದು. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸವಿರಲಿದೆ. ಕುಲದೇವರ ಆರಾಧನೆಯಿಂದ ಶುಭ.
ಕುಂಭ
ತೆರಿಗೆ ಇಲಾಖೆ ಸಿಬ್ಬಂದಿಗೆ ಹೆಚ್ಚಿನ ಕೆಲಸವಿರುವುದು ದೇಹಾಯಾಸಕ್ಕೆ ಕಾರಣವಾಗಲಿದೆ. ಶಿಸ್ತುಬದ್ಧ ಜೀವನವೆಂದು ಅನ್ಯರಿಂದ ಶ್ಲಾಘಿಸಲ್ಪಡುವಿರಿ. ರಫ್ತು ಕೆಲಸಗಳಲ್ಲಿ ಪ್ರಗತಿಯನ್ನು ಹೊಂದಲು ಆಂಜನೇಯನನ್ನು ಆರಾಧಿಸಿ.
ಮೀನ
ಇಂದು ನಡೆಯುವ ಹಲವು ಸಂದರ್ಭಗಳಲ್ಲಿ ಮೂಕಪ್ರೇಕ್ಷಕರಂತೆ ಇರುವ ನಿಮ್ಮ ಗುಣದಿಂದಾಗಿ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವಿರಿ. ಹಳೆಯ ಭಾವಚಿತ್ರಗಳನ್ನು ನೋಡಿ ಆ ಕ್ಷಣಗಳನ್ನು ನೆನಪಿಸಿಕೊಳ್ಳುವಂತೆ ಆಗಲಿದೆ.