ADVERTISEMENT

ದಿನ ಭವಿಷ್ಯ: ಈ ರಾಶಿಯವರು ಷೇರು ಖರೀದಿಸುವಾಗ ಎಚ್ಚರವಹಿಸಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಜುಲೈ 2025, 22:30 IST
Last Updated 23 ಜುಲೈ 2025, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮನೆಯ ಹಿರಿಯರ ಮಧ್ಯಸ್ಥಿಕೆಯಿಂದ ಅಣ್ಣ-ತಮ್ಮಂದಿರ ವಿವಾದಗಳು ಬಗೆಹರಿಯುವುದು. ಪುನಃ ಮೊದಲಿನಂತೆ ಸಂಬಂಧ ಗಟ್ಟಿಯಾಗಲಿದೆ. ಸರ್ಕಾರಿ ಗುತ್ತಿಗೆ ಕೆಲಸದ ಬಾಕಿ ಹಣ ಸಂದಾಯವಾಗುವುದು ನೆಮ್ಮದಿ ತರಲಿದೆ.
  • ವೃಷಭ
  • ಹಿಂದೆ ಕೊಟ್ಟಿರುವ ಸಾಲದ ಹಣ ಕೈಸೇರುವುದರಿಂದ ಲೇವಾದೇವಿ ವ್ಯವಹಾರ ಮುಂದುವರಿಸಲು ಮನಸ್ಸಾಗುವುದು. ತಿಳಿವಳಿಕೆ ಇಲ್ಲದ್ದವರಂತೆ ವರ್ತಿಸಿ ಮೂರ್ಖರೆನ್ನಿಸಬೇಡಿ. ಆದಾಯ ಇರುತ್ತದೆ.
  • ಮಿಥುನ
  • ಮುಖ್ಯ ಕೆಲಸಗಳತ್ತ ಮಾತ್ರ ಗಮನಹರಿಸಿ. ವೃತ್ತಿರಂಗದಲ್ಲಿ ತಿಳಿವಳಿಕೆಯಂತೆನೇ ನಡೆಯಿರಿ, ಅನ್ಯರ ಮಾತಿಗೆ ಕಿವಿ ಒಡ್ಡಬೇಡಿ. ಸಿನೆಮಾ ನಟ ನಟಿಯರಿಗೆ ಅವಕಾಶಗಳು ದೊರೆಯಲಿವೆ.
  • ಕರ್ಕಾಟಕ
  • ಕಚೇರಿಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯುವುದು ಹಾಗೂ ಅದರಿಂದ ನೆಮ್ಮದಿ ಸಿಗಲಿದೆ. ಆಹಾರದ ಪದ್ದತಿ ನಿಯಂತ್ರಿಸಿಕೊಂಡು ರಕ್ತದೊತ್ತಡ ಸ್ಥಿತಿ ಸಮತೋಲನಕ್ಕೆ ಬರುವಂತೆ ಮಾಡಿಕೊಳ್ಳಿರಿ.
  • ಸಿಂಹ
  • ಕೆಲಸಗಳನ್ನು ತುರಾತುರಿಯಿಂದ ಮುಗಿಸಿದಲ್ಲಿ ಬೇಕಾದ ಫಲಿತಾಂಶ ಸಿಗದಿರಬಹುದು, ಸಾವಕಾಶವಾಗಿ ವ್ಯವಹರಿಸಿ. ಎಣ್ಣೆ–ತಿಂಡಿಗಳು ಹಾಗೂ ನಂಜಿನ ಪದಾರ್ಥಗಳಿಂದ ದೂರವಿರಿ.
  • ಕನ್ಯಾ
  • ಪ್ರಭಾವಿ ವ್ಯಕ್ತಿಗಳ ಜತೆಯಲ್ಲಿನ ಓಡಾಟ ಸ್ಥಾನಮಾನವನ್ನು ಜತೆಯಲ್ಲಿ ಆಯಾಸವನ್ನು ತಂದು ಕೊಡಲಿದೆ. ಷೇರು ಖರೀದಿಸುವಾಗ ಎಚ್ಚರವಹಿಸಿ. ತೈಲ ಉತ್ಪನ್ನಗಳ ಮಾರಾಟದಿಂದ ಲಾಭವಿದೆ.
  • ತುಲಾ
  • ಸಮಯವನ್ನು ಅರಿತು ಎಚ್ಚರಿಕೆಯಿಂದ ವರ್ತಿಸುವುದರಿಂದ ಯಶಸ್ಸು ಹಾಗೂ ಅಭಿವೃದ್ಧಿಗೆ ಕಾರಣವಾಗುತ್ತದೆ. ಹಾಲು ಉತ್ಪಾದಕರಿಗೆ ಲಾಭ ಇರುವುದು. ಶ್ರೀವಿನಾಯಕನ ಸ್ತುತಿ ಮಾಡಿ ವಿಘ್ನಗಳನ್ನು ದೂರಮಾಡಿಕೊಳ್ಳಿರಿ.
  • ವೃಶ್ಚಿಕ
  • ಮಾತು ಬಲ್ಲವನಿಗೆ ಜಗಳವಿಲ್ಲ ಎಂಬಂತೆ ಮಾತಿನಿಂದ ದೊಡ್ಡ ಪ್ರಮಾಣದ ಜಗಳ ನಿಂತು ಹೋಗುತ್ತದೆ. ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಆತ್ಮತೃಪ್ತಿ ದೊರೆಯುತ್ತದೆ. ಮಧ್ಯವರ್ತಿಗಳ ಮಾತಿಗೆ ಮರುಳಾಗದಿರಿ.
  • ಧನು
  • ಔದ್ಯೋಗಿಕ ವ್ಯವಹಾರದವರಿಗೆ ನಿರೀಕ್ಷೆಗೆ ತಕ್ಕ ಫಲಗಳು ದೊರೆತು  ನೆಮ್ಮದಿಯನ್ನು ಕಾಣುವರು. ನಿರ್ಣಯಗಳಿಗೆ ಸಕಾರಾತ್ಮಕ ಬೆಂಬಲ ದೊರೆಯಲಿದೆ. ಸಲಹೆಗಳಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ.
  • ಮಕರ
  • ಕಮಿಷನ್ ಏಜೆಂಟರಿಗೆ ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಅಧಿಕ ಲಾಭ ಇರಲಿದೆ. ಪತ್ನಿಯ ಆರೋಗ್ಯ ಸುಧಾರಿಸಲಿದೆ. ಹಣಕಾಸಿನ ಚಿಂತೆ ದೂರವಾಗಿ ವೃದ್ಧಿ ಕಾಣಲಿದ್ದೀರಿ. ಕಪ್ಪು ಬಣ್ಣವು ಅದೃಷ್ಟ  ಬದಲಾಯಿಸಲಿದೆ.
  • ಕುಂಭ
  • ಸಂಬಂಧ ಪಡದ ವಿಚಾರದಲ್ಲಿ ಅಕ್ಕ ಪಕ್ಕದವರಿಗೆ ಅನವಶ್ಯಕವಾಗಿ ತೀರ್ಮಾನ ಹೇಳಿದರೆ ನಿಷ್ಠುರವಾಗುವುದು ಖಚಿತ. ತಂದೆ ತಾಯಿಯನ್ನು ನೋಡಿಕೊಳ್ಳುವ ಕರ್ತವ್ಯಗಳಿಂದ ತಪ್ಪಿಸಿಕೊಳ್ಳಬೇಡಿ.
  • ಮೀನ
  • ಚಾಣಾಕ್ಷತನದಿಂದ ಪ್ರತಿಸ್ಪರ್ಧಿಗಳು ದೂರಾಗುವರು. ಕೆಲಸಗಳ ಬಗೆಗೆ ಮುತುವರ್ಜಿವಹಿಸುವುದರಿಂದ  ಮನಸ್ಸಿಗೆ ಒಪ್ಪುವ ರೀತಿಯಲ್ಲಿ ಕೆಲಸ ಪೂರ್ಣಗೊಳ್ಳುವುದು. ವಾತ-ಪಿತ್ತಗಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. 
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.