ADVERTISEMENT

ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಇಂದು ಉತ್ತಮ ದಿನ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಜುಲೈ 2025, 23:30 IST
Last Updated 25 ಜುಲೈ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸ್ನೇಹಿತನ ಮಾತನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕೇಳುವುದರಿಂದ ಅವರ ಆಜ್ಞಾನುವರ್ತಿಯನ್ನಾಗಿಸಬಹುದು. ಸಿಹಿ ಖಾದ್ಯ ತಯಾರಕರಿಗೆ ಬೇಡಿಕೆಗಳು ಹೆಚ್ಚಲಿವೆ. ಗೃಹಾಲಂಕಾರ ವಸ್ತುಗಳ ಖರೀದಿಗೆ ಉತ್ತಮ ದಿನ.
  • ವೃಷಭ
  • ಹೊಸ ದಾರಿಯನ್ನು ಹಿಡಿಯಲು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಗ್ರಹಗತಿಯ ಬೆಂಬಲ ಇದೆ.  ನಡೆಯುವ ಘಟನೆಯಿಂದ  ಸಂಗಾತಿಗೆ ಸಂತೋಷವಾಗುವುದು. ಕೋಪವನ್ನು ನಿಯಂತ್ರಣ ಮಾಡಿಕೊಳ್ಳಿ.
  • ಮಿಥುನ
  • ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುವುದು ಅಗತ್ಯ.  ಶ್ರಮಕ್ಕೆ ಸರಿಸಮಾನ  ಧನಾಗಮನಕ್ಕೆ   ತೊಂದರೆಯಿಲ್ಲ. ಕೃಷಿಕರಿಗೆ ಅಧಿಕ ಒತ್ತಡ ದೇಹಕ್ಕೆ ಆಯಾಸವನ್ನು ಮಾಡಲಿದೆ.
  • ಕರ್ಕಾಟಕ
  • ಸಂಗೀತ ಕ್ಷೇತ್ರದಲ್ಲಿರುವವರು ಧ್ವನಿಯ ಬಗ್ಗೆ, ಕ್ರೀಡಾಪಟುಗಳು ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೌಟುಂಬಿಕ ಕೆಲಸಗಳು ನಿರಾಯಾಸವಾಗಿ ಸಾಗುವುದು. ವ್ಯಾಪಾರ ವಿಸ್ತರಣೆ ಮಾಡುವ ಬಗ್ಗೆ  ಯೋಚಿಸಿ.
  • ಸಿಂಹ
  •  ಕಲ್ಪನೆಗೂ ಮತ್ತು ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು  ಅಸಮಾಧಾನಕ್ಕೆ ಕಾರಣವಾಗಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ತಂದುಕೊಳ್ಳುವುದು ನಿಮ್ಮ ಕೈಯಲ್ಲಿದೆ.
  • ಕನ್ಯಾ
  • ಸಹೋದ್ಯೋಗಿಗಳಿಂದ  ನಿರೀಕ್ಷಿತ ಕೆಲಸಗಳು ನಡೆಯುವುದು ಕಷ್ಟವಾಗಲಿದೆ. ಭೂ ಖರೀದಿಯ ಯೋಜನೆಯಲ್ಲಿರುವವರಿಗೆ ಮಧ್ಯವರ್ತಿಗಳ ಮೂಲಕದ ವ್ಯವಹಾರ ಕೈಗೂಡುವುದು. ಸಂತಾನಭಾಗ್ಯದ ಲಕ್ಷಣವಿದೆ.
  • ತುಲಾ
  • ಅನುಸರಿಸುವ ವ್ಯಕ್ತಿಗಳು ಈ ದಿನ ಹೆಚ್ಚಿರುತ್ತಾರೆ. ನಡವಳಿಕೆಯಲ್ಲಿ ಹೆಚ್ಚಿನ ಗಮನವಿರಲಿ. ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಶುಭ ಸುದ್ದಿ ಕೇಳಲಿದೆ. ಅತಿಯಾದ ನಿದ್ದೆ ನಿಮ್ಮ ಕೆಲಸವನ್ನು ಹಾಳುಮಾಡುವುದು.
  • ವೃಶ್ಚಿಕ
  • ವಿಳಂಬವಾಗುತ್ತಿರುವ  ಕಾರ್ಯಗಳನ್ನು ಶೀಘ್ರವಾಗಿ ಮುಕ್ತಾಯ ಮಾಡಲು ಕುಲದೇವತೆ ಹಾಗು ಗ್ರಾಮದೇವತೆಯ ಮೊರೆ ಹೋಗಿ. ಸ್ನೇಹಿತರ ಕೆಲವು ಅಹಿತಕರ ನಡೆಗಳಿಂದ ಇರಿಸುಮುರಿಸಾಗುವುದು.
  • ಧನು
  • ಹೊಸ ಹೂಡಿಕೆಯಲ್ಲಿ ಅನುಭವವಿಲ್ಲದಿದ್ದರೆ ನಷ್ಟಗಳನ್ನೇ ನೋಡಬೇಕಾಗುತ್ತದೆ.  ಬಾಲ್ಯದ ಬಯಕೆಯು ಈಡೇರುವುದು. ಶತ್ರುಗಳ ಉಪಟಳ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಉಂಟಾಗುವ ಲಕ್ಷಣವಿದೆ.
  • ಮಕರ
  • ಮಾತಿನ ಬಗ್ಗೆ ಜಾಗ್ರತೆ ವಹಿಸಿ, ಮಾತಿನಿಂದ ಸಮಸ್ಯೆ ಉಂಟಾಗಬಹುದು. ಭೂ ಸಂಬಂಧ ವ್ಯವಹಾರದಲ್ಲಿ ಪತ್ರಗಳ ಬಗ್ಗೆ ಎರಡು ಬಾರಿ ಪರಿಶೀಲಿಸುವುದು ಉತ್ತಮ. ಆರೋಪವನ್ನು ಕೇಳಬೇಕಾಗಬಹುದು
  • ಕುಂಭ
  • ಪಾಲುದಾರಿಕೆ ವ್ಯವಹಾರದಲ್ಲಿ ಯಾವುದೇ ರೀತಿಯ ಸಂಶಯಕ್ಕೆ ಆಸ್ಪದ ಕೊಡದೆ ಪಾರದರ್ಶಕತೆ ಉಳಿಸಿಕೊಳ್ಳಿ. ಗುರುಗಳ ಆಜ್ಞೆಯನ್ನು ಪಾಲಿಸಿದಲ್ಲಿ ಶ್ರೇಯಸ್ಸಾಗುವುದು. ಬುದ್ಧಿ ಪರಮಾತ್ಮನಲ್ಲಿ ಸ್ಥಿರವಾದರೆ ಜಯ ಖಂಡಿತ.
  • ಮೀನ
  • ಗ್ರಹಗಳ ಚಲನೆಯು ಸುಖಮಯವಾಗಿ ಜೀವನ ನಡೆಸಲು ಅನುಕೂಲವಾಗಿದೆ. ಮಕ್ಕಳ ಮೂಲಕ ಕೆಲವು ಸಮಸ್ಯೆಗಳಿಗೆ ಪರಿಹಾರವು ದೊರೆಯುತ್ತದೆ.  ಅನಾರೋಗ್ಯ ಪರಿಹಾರವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.