ADVERTISEMENT

ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಇಷ್ಟವಾಗುವ ರೀತಿಯ ಸಂಬಂಧ ಪ್ರಾಪ್ತಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಡಿಸೆಂಬರ್ 2023, 23:47 IST
Last Updated 28 ಡಿಸೆಂಬರ್ 2023, 23:47 IST
   
ಮೇಷ
  • ಮನೆಯಲ್ಲಿ ಮಂಗಳ ಕಾರ್ಯವನ್ನು ನೆಡೆಸಲು ತೀರ್ಮಾನಿಸಿ, ಅದಕ್ಕೆ ಬೇಕಾದ ಜನಬಲ ಮತ್ತು ಆರ್ಥಿಕ ಬೆಂಬಲವು ಬಂಧುಗಳಿಂದ ತಾನಾಗಿಯೇ ಒದಗಿಬರಲಿದೆ. ಆರಕ್ಷಕ ಅಧಿಕಾರಿಗಳಿಗೆ ಕೆಲಸಗಳ ಒತ್ತಡ ಕಡಿಮೆಯಾಗಲಿದೆ.
  • ವೃಷಭ
  • ನಿಮ್ಮ ಇಷ್ಟಾರ್ಥ ನೆರವೇರುವ ಸಲುವಾಗಿ ಹೇಳಿಕೊಂಡಿರುವ ಹರಕೆಯನ್ನು ತೀರಿಸುವ ಬಗ್ಗೆ ಗಮನವಿರಲಿ. ಕುಟುಂಬ ವರ್ಗದಲ್ಲಿ ಆರೋಗ್ಯ ಉತ್ತಮವಾಗಿ ಇರುವುದು. ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿಯಾಗುವುದು.
  • ಮಿಥುನ
  • ಸಂಬಂಧಿಕರೊಂದಿಗಿದ್ದ ವ್ಯವಹಾರಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ನಿರಪರಾಧಿಯಾದರೂ ಶಿಕ್ಷೆಗೆ ಒಳಗಾಗುವ ಲಕ್ಷಣಗಳಿರುವುದರಿಂದ ಜಾಗ್ರತರಾಗಿರಿ. ಸಿನೆಮಾ ರಂಗದವರಿಗೆ ಹೆಚ್ಚಿನ ಅವಕಾಶ ಲಭಿಸುವುದು.
  • ಕರ್ಕಾಟಕ
  • ಮೇಧಾವಿಗಳ ಮೂಲಕ ಧನ ಸಂಪಾದನೆ ಹೊಂದುವಿರಿ. ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದಲ್ಲಿ ಹೊಸ ಬದಲಾವಣೆಯ ಸೂಚನೆಯು ಸಿಗಲಿದೆ. ಈಶ್ವರನ ಸೇವೆ ಮಾಡುವುದರಿಂದ ಹೆಚ್ಚಿನ ಕಾರ್ಯ ಸಾಧನೆಗೆ ಸಹಾಯವಾಗುವುದು.
  • ಸಿಂಹ
  • ಅಧಿಕಾರಸ್ಥರು ಹಾಗೂ ನಿಮ್ಮ ಹಿರಿಯ ನೌಕರರ ಜತೆ ನಿಮ್ಮ ಸ್ನೇಹ ಸಂಬಂಧ ಹೆಚ್ಚಾಗಿ ಬೆಳೆದು ವೃತ್ತಿಯಲ್ಲಿ ನವ ಉಲ್ಲಾಸ ಮೂಡಲಿದೆ. ಇಂದು ವೃತ್ತಿರಂಗದಲ್ಲಿ ನಿಮಗಾಗಿ ಅದೃಷ್ಟದ ಬಾಗಿಲು ತೆರೆಯುವುದು.
  • ಕನ್ಯಾ
  • ಮರಕೆಲಸ ಮಾಡುವವರಿಗೆ ಹೆಚ್ಚಿನ ಅವಕಾಶಗಳು ಬಂದುರೂ ಕೆಲಸಕ್ಕೆ ಸೋಮಾರಿತನ ಅಡ್ಡಬರುವುದು. ರಾಜಕೀಯ ವ್ಯಕ್ತಿಗಳಿಗೆ ತಮ್ಮ ಚಟುವಟಿಕೆಗಳಿಗಾಗಿ ಬಿರುಸಿನ ಓಡಾಟ ಅನಿವಾರ್ಯವಾಗುವುದು.
  • ತುಲಾ
  • ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲ್ಯಗಳನ್ನು ಹೊರ ತೆಗೆಯಲು ವೇದಿಕೆ ಸಿಗುವುದು. ಲೆಕ್ಕ ಪತ್ರಗಳ ವ್ಯವಹಾರ ನೋಡುವವರಿಗೆ ಸಂದಿಗ್ಧ ಪರಿಸ್ಥಿತಿಗಳು ಎದುರಾಗಬಹುದು. ನಿಮ್ಮ ಮಾತುಗಳಲ್ಲಿ ಸತ್ಯವಿರಲಿ.
  • ವೃಶ್ಚಿಕ
  • ಅನಾರೋಗ್ಯದಿಂದ ಹೊರಬರಲು ಚಿಕಿತ್ಸೆಯ ಜೊತೆಯಲ್ಲಿ ನವಗ್ರಹ ಶಾಂತಿಯಂತಹ ಧಾರ್ಮಿಕ ಮಾರ್ಗವನ್ನೂ ಆಚರಿಸುವುದು ಶುಭಫಲಕ್ಕೆ ದಾರಿಯಾಗಲಿದೆ. ಆಪ್ತರ ಕಷ್ಟಗಳ ಕಡೆಗೆ ಗಮನ ಹರಿಸುವುದು ಸಾಧ್ಯವಾಗುತ್ತದೆ.
  • ಧನು
  • ವಿಭಿನ್ನ ರೀತಿಯ ಕೆಲಸವೊಂದನ್ನು ನಿಮ್ಮ ಸ್ನೇಹಿತರೊಬ್ಬರು ನಿಮಗೊಪ್ಪಿಸಲಿದ್ದಾರೆ, ಒಪ್ಪಿಕೊಳ್ಳಿ ಅದು ನಿಮಗೆ ಸಾಕಷ್ಟು ಆದಾಯ ಮತ್ತು ಹೆಸರನ್ನು ತರಲಿದೆ. ಹಿಂದಿನ ಕಹಿ ಘಟನೆಗಳು ಪುನಃ ಮರುಕಳಿಸದಂತೆ ಎಚ್ಚರ ವಹಿಸಿ.
  • ಮಕರ
  • ಗೌರವಯುತವಾದಂತಹ ಸ್ಥಾನಮಾನಗಳು ಈ ದಿನ ನಿಮ್ಮದಾಗಲಿದೆ. ಅಧಿಕಾರಕ್ಕಾಗಿ ಯಾವುದೇ ಅಡ್ಡದಾರಿಯನ್ನು ಅನುಸರಿಸಬೇಡಿ. ಹೊಸ ಮನೆಯೊಂದನ್ನು ಖರೀದಿಸುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಯಲಿದೆ.
  • ಕುಂಭ
  • ಅತೀ ಸಂಭ್ರಮದ ಜೀವನ ಶೈಲಿಯಿಂದ ಖರ್ಚುಗಳು ಸಂಭವಿಸುವುದು. ಆದರೆ ಆದಾಯಕ್ಕೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗಲಾರದು. ಪತ್ನಿ ವರ್ಗದವರಿಂದ ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಸಹಾಯ ದೊರೆಯಲಿದೆ.
  • ಮೀನ
  • ಅವಿವಾಹಿತರಿಗೆ ಅವರ ಮನಸ್ಸಿಗೆ ಇಷ್ಟವಾಗುವ ರೀತಿಯ ಸಂಬಂಧಗಳು ಈ ದಿನ ಪ್ರಾಪ್ತಿಯಾಗುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಅತಿ ಜಾಗರೂಕರಾಗಿರುವುದು ಅವಶ್ಯ. ಕುಟುಂಬದವರಿಂದ ಶುಭವಾರ್ತೆ ಕೇಳುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.