ADVERTISEMENT

ದಿನ ಭವಿಷ್ಯ | ಸೋಮವಾರ 29 ಮೇ 2023

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಮೇ 2023, 22:04 IST
Last Updated 28 ಮೇ 2023, 22:04 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಸವಾಲನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಅಭಿವೃದ್ಧಿಯಾಗು ವುದು. ಈ ಹಿಂದೆ ನಡೆದ ದುರ್ಘಟನೆ ಮತ್ತೆ ಮರುಕಳಿಸದಂತೆ ಎಚ್ಚರವಹಿಸುವುದು ಸೂಕ್ತ. ದೇಹಾಯಾಸ ಮತ್ತು ಶೀತ ಬಾಧೆ ನಿವಾರಣೆಯಾಗುವುದು.
  • ವೃಷಭ
  • ದೇವರ ಆಭರಣ ತಯಾರಿಕೆ ಅಥವಾ ದೇವಾಲಯದ ಕೆಲಸದ ಗುತ್ತಿಗೆದಾರರಿಗೆ ಹೊಸ ಗುತ್ತಿಗೆ ಸಿಗುವ ಸಂಭವಗಳಿವೆ. ಈ ದಿನದ ಕಾರ್ಯ ಮೊದಲೇ ನಿಶ್ಚಯಿಸಿಕೊಂಡು ಕ್ರಮ ಪ್ರಕಾರವಾಗಿ ಮಾಡುವುದು ಉತ್ತಮ.
  • ಮಿಥುನ
  • ದಾಂಪತ್ಯದಲ್ಲಿ ಸಮಸ್ಯೆಗಳು ತೋರಿಬಂದರೂ ಮುಂದಿನ ದಿನಗಳಲ್ಲಿ ಸಂತಸವಿದೆ. ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ, ಗೆಲುವು ನಿಮ್ಮದಾಗುವುದು. ಸಂಬಂಧಿಗಳಲ್ಲಿರುವ ವ್ಯವಹಾರ ಮುಗಿಸುವ ಯತ್ನ ಮಾಡಿ.
  • ಕರ್ಕಾಟಕ
  • ಆತ್ಮ ವಿಶ್ವಾಸ ಹೆಚ್ಚಲಿದೆ. ದೃಢ ನಿಶ್ಚಯ ಮತ್ತು ಸಾಧಿಸಲೇ ಬೇಕೆಂಬ ಛಲದ ಮನೋಭಾವ ಯಶಸ್ಸಿಗೆ ಕಾರಣವೆನಿಸಲಿದೆ. ಮನೆಯ ಕಟ್ಟಡದ ದುರಸ್ತಿ ಕಾರ್ಯಗಳು ಅನಿವಾರ್ಯ. ಔಷಧ ಮಾರಾಟಗಳಲ್ಲಿ ಸಂಪಾದನೆ ಹೆಚ್ಚಲಿದೆ.
  • ಸಿಂಹ
  • ಮಗಳಿಂದ ಶುಭ ಸುದ್ದಿ ತಿಳಿಯುವಿರಿ. ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ಅವರಿಂದಾಗಿ ಹೆಸರು ಹಾಳಾಗುವಂತೆ ಮಾಡುವ ಪ್ರಯತ್ನ ನಡೆಯಬಹುದು. ಅಪರೂಪದ ಸಮಾರಂಭಕ್ಕೆ ಶುಭಾಹ್ವಾನ ಬರುವುದು.
  • ಕನ್ಯಾ
  • ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವವು ನಿಮ್ಮಲ್ಲಿದೆ. ಭಾಗ್ಯವಂತರಾದ ಸಂಸ್ಥೆಯ ಹೊಸ ಯೋಜನೆಯು ಬಹಳ ಸುಲಭವೆನಿಸಲಿದೆ. ಅಧಿಕಾರಕ್ಕಾಗಿ ಹೆಚ್ಚಿನ ಓಡಾಟವನ್ನು ನಡೆಸುವಿರಿ. ಕೃಷಿ ಚಟುವಟಿಕೆ ಹೆಚ್ಚಿಸಿಕೊಳ್ಳಬಹುದು.
  • ತುಲಾ
  • ಸಾಂಸಾರಿಕವಾಗಿ ಅಥವಾ ವೈಯಕ್ತಿಕವಾಗಿ ಕೆಲವು ಮುಖ್ಯ ನಿರ್ಧಾರ ಕೈಗೊಳ್ಳುವಿರಿ. ಕಾರ್ಮಿಕರ ಸಮಸ್ಯೆಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುವುದು. ಸ್ವತಂತ್ರ ಜೀವನ ನಡೆಸುವ ನಿಮ್ಮ ಮುಂಗೋಪಿತನದ ತೀರ್ಮಾನ ಸರಿಯಲ್ಲ.
  • ವೃಶ್ಚಿಕ
  • ಸ್ನೇಹಿತರಲ್ಲಿ ಅನಗತ್ಯ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ಸಹೋದ್ಯೋಗಿಯ ನೆರವಿನಿಂದ ಕೆಲಸ ಕಾರ್ಯಗಳು ಶೀಘ್ರವಾಗಿ ಮನಸ್ಸಿಗೆ ಹಿತ ಕೊಡುವ ರೀತಿಯಲ್ಲಿ ಪೂರ್ಣಗೊಳ್ಳಲಿದೆ.
  • ಧನು
  • ದೈವಾನುಗ್ರಹದಿಂದ ನೀವು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಪಡೆಯುವಿರಿ. ಸಮಯ ಯಾಚಿಸುತ್ತಿರುವುದರಿಂದ ಸ್ವಂತ ಕೆಲಸಗಳು ನಿಧಾನ ಗತಿಯಲ್ಲಿ ಸಾಗಲಿದೆ. ಉದ್ಯೋಗದಿಂದ ಒಳ್ಳೆಯ ಅನುಭವ ಸಿಗಲಿದೆ.
  • ಮಕರ
  • ಕುಟುಂಬದಲ್ಲಿ ಹಿಂದೆ ನಡೆದ ಕೆಟ್ಟ ವಿಚಾರಗಳ ಬಗ್ಗೆಮಾತನಾಡುವುದು ಸಹೋದರರಲ್ಲಿ ಪುನಃ ಭಿನ್ನಾಭಿಪ್ರಾಯ ಬೆಳೆಯಲು ಕಾರಣವಾಗುತ್ತದೆ. ನಿಮ್ಮನ್ನು ನೀವೇ ವಿಮರ್ಶಿಕೊಳ್ಳಿ ನಡವಳಿಕೆಯ ತಪ್ಪುಗಳು ಅರಿವಾಗುವುದು.
  • ಕುಂಭ
  • ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯವೆನಿಸಲಿದೆ. ಹಲವು ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ವೃಥಾ ವೈರತ್ವ ಕಟ್ಟಿಕೊಳ್ಳದೆ ಕಾರ್ಯನಿರ್ವಹಿಸಿ.
  • ಮೀನ
  • ಜೀವನದಲ್ಲಿ ಸೋಮಾರಿತನ ಜತೆ ಅಹಂಕಾರವನ್ನು ದೂರ ಮಾಡಿದರೆ, ಯೋಗ್ಯತೆಗೆ ಮೀರಿದ ಕೆಲಸಕಾರ್ಯಗಳಿಗೆ ಕೈ ಹಾಕಿದರೂ ಸಮಸ್ಯೆ ಆಗುವುದಿಲ್ಲ. ಖರ್ಚುವೆಚ್ಚಗಳನ್ನು ಸರಿಯಾದ ಲೆಕ್ಕಾಚಾರ ನಡೆಸಿ.
  • ಮೇಷ

  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.