ADVERTISEMENT

ದಿನ ಭವಿಷ್ಯ | ಶನಿವಾರ, 03 ಜೂನ್ 2023

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಜೂನ್ 2023, 18:31 IST
Last Updated 2 ಜೂನ್ 2023, 18:31 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ವಕೀಲರ ಬಳಿ ವೈಯಕ್ತಿವಾಗಿ ಮಾತನಾಡಬೇಕಾಗುವುದು. ಆಗು ಹೋಗುಗಳ ಮೇಲೆ ಹೆಚ್ಚು ಚಿಂತೆಗೊಳಗಾಗದಿರಿ.
  • ವೃಷಭ
  • ಕನಸು ಸಾಕಾರಗೊಳಿಸಲು ಶ್ರಮವಹಿಸಲು ಆರಂಭಿಸುವಿರಿ. ಸಣ್ಣ ಪ್ರಮಾಣದಲ್ಲಿ ವಾಹನಕ್ಕೆ ಅವಘಡಗಳಾಗುವ ಸಾಧ್ಯತೆ ಇದೆ. ಸ್ಥಳ ಬದಲಾದ ಕಾರಣ ನೀರಿನಿಂದ ಸೋಂಕು ಉಂಟಾಗಬಹುದು.
  • ಮಿಥುನ
  • ಪವಿತ್ರವಾದ ವಸ್ತುಗಳನ್ನು ಗೌರವದಿಂದ ಕಾಣಿ. ಚಿನ್ನ ಮೊದಲಾದ ದುಬಾರಿ ಲೋಹಗಳಿಗೆ ಹಣ ವಿನಿಯೋಗ ಮಾಡುವಿರಿ. ಹಲವು ದಿನಗಳ ನಂತರ ನಿಮ್ಮ ಹವ್ಯಾಸದ ಕೆಲಸವನ್ನು ಸಂತಸದಿಂದ ಮಾಡುವಿರಿ.
  • ಕರ್ಕಾಟಕ
  • ನಿನ್ನೆಯ ಭೂರಿ ಭೋಜನದ ಸಲುವಾಗಿ ಅಜೀರ್ಣ ಮೊದಲಾದ ಸಮಸ್ಯೆಗಳನ್ನು ಎದುರಿಸುವಿರಿ. ಯೋಗಪಟುಗಳಿಗೆ ದೊಡ್ಡ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಮಾಡುವ ಅವಕಾಶ ದೊರೆಯಲಿದೆ.
  • ಸಿಂಹ
  • ಮನೆಯಲ್ಲಿ ನಡೆಯಬೇಕಾದ ಮಂಗಳ ಕಾರ್ಯದ ಕುರಿತು ಹಿರಿಯೊರೊಂದಿಗೆ ಹೆಚ್ಚಿನ ಸಮಾಲೋಚನೆ ನಡೆಸುವಿರಿ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು.
  • ಕನ್ಯಾ
  • ಈ ದಿನ ನಿಮಗೆ ಎದುರಾಗುವ ಪರಿಸ್ಥಿತಿಗೆ ನೀವೇ ಹೊಂದಿಕೊಳ್ಳುವ ತೀರ್ಮಾನವನ್ನು ಮಾಡಿರಿ. ಸಹೋದ್ಯೊಗಿಗಳೊಡನೆ ಸಹನೆಯಿಂದ ನಡೆದುಕೊಳ್ಳಿ. ಉದರ ಸಂಬಂಧದ ವ್ಯಾಧಿಗಳು ಕಾಣಿಸಿಕೊಳ್ಳಬಹುದು.
  • ತುಲಾ
  • ಆತ್ಮೀಯನಿಗೆ ಸಾಂತ್ವನ ಹೇಳಬೇಕಾದ ಸಂದರ್ಭ ಬರಲಿದೆ. ಕಿರು ಸಂಚಾರ ಯೋಗವಿದೆ. ನಿಮಗೆ ಒದಗಿದ್ದ ಆತಂಕ ದೂರವಾಗುತ್ತದೆ. ಕೆಲಸವನ್ನು ಆಸಕ್ತಿಯಿಂದ ನಿರ್ವಹಿಸುತ್ತೀರಿ.
  • ವೃಶ್ಚಿಕ
  • ವೃತ್ತಿಯ ಬಗ್ಗೆ ಅಧ್ಯಯನ ನಡೆಸುವ ಅಥವಾ ಹೆಚ್ಚಿನ ಮಾಹಿತಿಯನ್ನು ಕಲೆಹಾಕಬೇಕಾಗಬಹುದು. ಮಗನ ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡು ಮನೆಯವರಿಗೆ ಸಂತಸವಾಗುವುದು.
  • ಧನು
  • ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿ ಕೊಳ್ಳುವ ಉಪಾಯವನ್ನು ಆಪ್ತರೊಬ್ಬರು ತಿಳಿಸಿಕೊಡುವರು. ಮೇಲಧಿಕಾರಿಗಳ ಒತ್ತಡದಿಂದ ಕೆಲಸದಲ್ಲಿ ಆಯಾಸವೆನಿಸುವುದಾದರೂ ಅಧಿಕಾರಿಗಳ ಮನ ಗೆಲ್ಲುವಂತಾಗುತ್ತದೆ.
  • ಮಕರ
  • ನೂತನ ಮನೆ ನಿರ್ಮಾಣದಲ್ಲಿರುವ ಸಹೋದರರಿಗೆ ಸಹಾಯ ಹಸ್ತ ನೀಡುವ ಮನಸ್ಸಾಗುವುದು. ಮಗನೊಡನೆ ಮಾತುಕತೆ ನಡೆಯುವ ಸಂಭವವಿದೆ. ಸಾಹಿತ್ಯ ವಲಯದಲ್ಲಿರುವ ನಿಮಗೆ ಮನ್ನಣೆ ಸಿಗಲಿದೆ.
  • ಕುಂಭ
  • ಕೆಲ ದಿನಗಳ ಹಿಂದೆ ತೆಗೆದುಕೊಂಡಿದ್ದ ತೀರ್ಮಾನ ಸರಿಯಾದುದೇ ಎಂಬುದರ ಬಗ್ಗೆ ಇಂದು ಆಲೋಚಿಸಿ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುವುದು. ಆಧ್ಯಾತ್ಮಿಕ ವಿಷಯಗಳತ್ತ ಮನಸ್ಸು ಹೊರಳುವುದು.
  • ಮೀನ
  • ಉದ್ಯೋಗದ ವಿಷಯದಲ್ಲಿದ್ದ ಚಿಂತೆ ದೂರಾಗುವುದು. ಹೊಸ ಉದ್ಯೋಗದಲ್ಲಿ ಹೊಂದಿಕೊಳ್ಳುವ ವಾತಾವರಣ ಸಿಗುವುದು. ವೃತ್ತಿಪರವಾದ ಸಾಧನೆಗಳಿಂದಾಗಿ ಸೂಕ್ತ ಸ್ಥಾನಮಾನ ಒದಗಿ ಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.