ADVERTISEMENT

ದಿನ ಭವಿಷ್ಯ: ದಾಖಲೆಯ ನಿರ್ವಹಣೆಯ ವಿಚಾರದಲ್ಲಿ ಕೆಲಸ ಪೂರ್ಣಗೊಳಿಸುವಿರಿ

ಮಂಗಳವಾರ, 16 ಸೆಪ್ಟೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಸೆಪ್ಟೆಂಬರ್ 2025, 23:30 IST
Last Updated 15 ಸೆಪ್ಟೆಂಬರ್ 2025, 23:30 IST
   
ಮೇಷ
  • ತೃಪ್ತಿಕರ ಜೀವನ ನಡೆಸಲು ಬೇಕಾದ ಸಂಪಾದನೆಯ ಕೆಲಸ ಸಿಕ್ಕಿ ಸಂತೋಷ ಹೊಂದುವಿರಿ. ಸಂಸಾರ ನಿರ್ವಹಣೆಗೆ ಮತ್ತು ಹೆಂಡತಿಯ ಸಂತೋಷಕ್ಕಾಗಿ ಕೆಲವು ವಸ್ತುಗಳ ಖರೀದಿ ಮಾಡಬೇಕಾಗುವುದು.
  • ವೃಷಭ
  • ವ್ಯವಸ್ಥಾಪಕರ ಜತೆ ಧೈರ್ಯದ ಮಾತುಗಳು ಇಂದಿನ ಜವಾಬ್ದಾರಿಯನ್ನು ಉತ್ತಮ ಗುಣಮಟ್ಟದ್ದಾಗಿಸುತ್ತದೆ. ದೇವಸ್ಥಾನದ ಭೇಟಿ ಹಾಗೂ ದೇವರ ದರ್ಶನದಿಂದ ಮನಸ್ಸಿಗೆ ಸಂತಸವಾಗುವುದು.
  • ಮಿಥುನ
  • ಯಶಸ್ಸನ್ನು ಹೊಂದಲು ಕಠಿಣ ಪರಿಶ್ರಮ ಅಗತ್ಯ. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದು ತಿಳಿಯಲಿದೆ. ಅದೇ ಮಾರ್ಗದಲ್ಲಿ ನಡೆಯಿರಿ. ಫಲ ಸಿಗುವುದು. ಮನೆಯ ರಿಪೇರಿಗಾಗಿ ಖರ್ಚು ಸಂಭವಿಸಬಹುದು.
  • ಕರ್ಕಾಟಕ
  • ಕುಟುಂಬದ ಅಭಿವೃದ್ಧಿಗೆ ಅಂತಃಕಲಹ, ಹಿತಶತ್ರುಗಳ ಬಾಧೆಯು ಅನುಭವಕ್ಕೆ ಬರಲಿದೆ. ರೈತರು ತಳಿಯ ಬೆಳೆಯಿಂದ ಸಂತೋಷವನ್ನು ಹೊಂದುವರು. ಮಕ್ಕಳ ಪರೀಕ್ಷೆಯು ಸಮಸ್ಯೆಯಾಗದಿರಲಿ.
  • ಸಿಂಹ
  • ಸರ್ಕಾರಿ ಅಧಿಕಾರಿಗಳಿಂದ ಆಗಬೇಕಾದ ಕೆಲಸಗಳು ಸರಿಯಾಗಿ ಆಗುವ ಸಾಧ್ಯತೆಗಳು ಕಂಡುಬರುತ್ತವೆ. ಕಾರ್ಖಾನೆಯೊಂದನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಅವಕಾಶಗಳು ಸ್ನೇಹಿತನ ಸಹಾಯದಿಂದ ಸಿಗಬಹುದು.
  • ಕನ್ಯಾ
  • ಪ್ರತಿಭೆಯ ಸಾಮರ್ಥ್ಯ ಬೆಳಕಿಗೆ ಬರಲಿದೆ. ಸೃಜನಶೀಲತೆಗೆ ಮನ್ನಣೆಯು ದೊರಕುವುದು. ಮನೆಯಲ್ಲಿ ಉದ್ವೇಗದ ವಾತಾವರಣ ಎದುರಾಗಬಹುದು. ಎಳ್ಳೆಣ್ಣೆ ದೀಪ ಹಚ್ಚುವುದರಿಂದ ಪಾಪ ಪರಿಹಾರವಾಗಲಿದೆ.
  • ತುಲಾ
  • ಕೊಡು-ಕೊಳ್ಳುವಿಕೆಗಳಿಂದ ಅಧಿಕ ಲಾಭವಿರುವುದು. ಉದ್ಯೋಗದಲ್ಲಿ ಒಳ್ಳೆಯ ಆಭಿವೃದ್ಧಿ ಹೊಂದುವಿರಿ. ಕಾರ್ಮಿಕ ಜನರಿಗೆ ಒಳ್ಳೆಯ ದಿನ. ಮನೆಯಲ್ಲಿ ಮಂಗಳಕಾರ್ಯಗಳು ನೆರವೇರುವ ಬಗ್ಗೆ ಸೂಚನೆ ಸಿಗಲಿದೆ.
  • ವೃಶ್ಚಿಕ
  • ಹಗಲು ರಾತ್ರಿ ಎಂದೆನ್ನದೆ ನೀವು ಪಟ್ಟ ಶ್ರಮವು ಉತ್ತಮ ಫಲವನ್ನು ಶೀಘ್ರ ನೀಡಲಿದೆ. ಆಪ್ತರು ಸಕಾಲಿಕ ನೆರವಿಗಾಗಿ ಧನ್ಯವಾದ ತಿಳಿಸುವರು. ದಾಖಲೆಯ ನಿರ್ವಹಣೆಯ ವಿಚಾರದಲ್ಲಿ ಕೆಲಸಗಳನ್ನು ಪೂರ್ಣಗೊಳಿಸುವಿರಿ.
  • ಧನು
  • ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಾದ–ವಿವಾದಗಳು ಎಲ್ಲರಿಗೂ ಸರಿಯಾಗುವ ರೀತಿಯಲ್ಲಿ ಕೊನೆಗೊಳ್ಳಲಿವೆ. ತಂದೆ-ತಾಯಿಯ ಆರೋಗ್ಯದ ಕಡೆಗೆ ಗಮನ ಕೊಡುವುದು ಅನಿವಾರ್ಯ.
  • ಮಕರ
  • ಭಾವನೆಗಳಿಗೆ ಬೆಲೆ ಕೊಡದವರ ಎದುರು ದುಃಖಗಳನ್ನು ಹೇಳಿಕೊಳ್ಳುವುದರಿಂದ ಪ್ರಯೋಜನವಿರುವುದಿಲ್ಲ. ಪೂರ್ಣ ಮನಸ್ಸಿನಿಂದ ಮಾಡಿದಂಥ ಕಾರ್ಯಗಳು ಉತ್ತಮ ಫಲ ನೀಡುತ್ತವೆ.
  • ಕುಂಭ
  • ಉದ್ಯೋಗ ಕ್ಷೇತ್ರದಲ್ಲಿ ಬಂದಿರುವ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರಗಳು ದೊರೆಯಲಿವೆ. ಉದ್ಯೋಗದಲ್ಲಿ ಸಣ್ಣದಾಗಿ ಬದಲಾವಣೆ ಕಂಡುಬರುವುದು. ಬೌದ್ಧಿಕ ಶಕ್ತಿಗೆ ಪುಷ್ಟಿ ದೊರೆಯಲಿದೆ.
  • ಮೀನ
  • ವೈಯಕ್ತಿಕ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ. ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ದಿನಗಳು ನೆಮ್ಮದಿದಾಯಕವಾಗಿ ಇರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.