ADVERTISEMENT

ದಿನ ಭವಿಷ್ಯ: ಆಫೀಸಿನಲ್ಲಿಂದು ಸಮರ್ಥಿಸಿಕೊಳ್ಳುವುದು ಕಷ್ಟ ಎನಿಸಿದರೂ ಜಯ ಸಿಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಜುಲೈ 2025, 0:05 IST
Last Updated 28 ಜುಲೈ 2025, 0:05 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಭವಿಷ್ಯದ ಬಗ್ಗೆ ಕೆಲವು ಗಂಭೀರ ಹಾಗೂ ಅರ್ಥಪೂರ್ಣ ಪ್ರಶ್ನೆಗಳು ಕಾಡಲಿವೆ. ಗಂಭೀರ ಆಲೋಚನೆ ನೈತಿಕತೆ ಮೇಲೆ ಪರಿಣಾಮ ಬೀರುವುದು. ಒಳಾಂಗಣ ವಿನ್ಯಾಸಕಾರರು, ಆರ್ಕಿಟೆಕ್ಟ್‌ಗಳು ಹೊಸರೀತಿಯಲ್ಲಿ ಆಲೋಚಿಸಿ.
  • ವೃಷಭ
  • ಆಫೀಸಿನಲ್ಲಿಂದು ಸಮರ್ಥಿಸಿಕೊಳ್ಳುವುದು ಕಷ್ಟ ಎನಿಸಿದರೂ ಜಯ ಸಿಗಲಿದೆ. ಬರಹಗಾರರಿಗೆ ಹಾಗೂ ಚಲನಚಿತ್ರರಂಗದವರಿಗೆ ಹಣದ ಜತೆಗೆ ಖ್ಯಾತಿಯೂ ದೊರೆಯುವುದು.
  • ಮಿಥುನ
  • ಮುಂದಿನ ಕೆಲಸಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವುದು ವಿಜಯಕ್ಕೆ ಮುಖ್ಯ ಕಾರಣವಾಗುವುದು. ಹೂಡಿಕೆಯ ವಿಷಯದಲ್ಲಿ ನಿಶ್ಚಿಂತೆಯಿಂದ ಇರಿ. ಹೊಸ ವಿಷಯಗಳನ್ನು ಪತ್ತೆ ಮಾಡುವ ಬಗ್ಗೆ ಕುತೂಹಲ ಹೆಚ್ಚಾಗಲಿದೆ.
  • ಕರ್ಕಾಟಕ
  • ಹಿಂದಿನ ಸಣ್ಣ ಹೂಡಿಕೆಯೂ ಭಾರಿ ಲಾಭ ತರುವ ಸಾಧ್ಯತೆ ಇದೆ. ಆಪ್ತಸ್ನೇಹಿತರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಿಮ್ಮದಾಗಿದೆ. ಲವಲವಿಕೆಯಿಂದ ಕೆಲಸಗಳನ್ನು ಮಾಡುವಿರಿ.
  • ಸಿಂಹ
  • ಕಠಿಣ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಲ್ಲಿ ಯಶಸ್ವಿ ಆಗುವಿರಿ. ಗುರುಗಳಿಂದ ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗಲಿದೆ. ವೈದ್ಯಕೀಯ ಕ್ಷೇತ್ರದವರಿಗೆ ಕ್ಲಿಷ್ಟಕರ ಕೆಲಸಗಳು ಎದುರಾಗಲಿವೆ.
  • ಕನ್ಯಾ
  • ವೃತ್ತಿ ಮತ್ತು ಪ್ರವೃತ್ತಿಯಂಥ ಎರಡು ದೋಣಿಗೆ ಕಾಲುಹಾಕಿದ ಸ್ಥಿತಿಯಿಂದ ಹೊರಬಂದು, ವೃತ್ತಿಯ ಬಗ್ಗೆ ಸಂಪೂರ್ಣವಾಗಿ ಗಮನ ವಹಿಸಿ. ಸಗಟು ವ್ಯಾಪಾರವನ್ನು ಪ್ರಾರಂಭಿಸಲು ಸಕಾಲ.
  • ತುಲಾ
  • ರಾಜಕೀಯ ವ್ಯಕ್ತಿಗಳು ಪಕ್ಷದ ವರಿಷ್ಠರಲ್ಲಿ ಇಟ್ಟಂತಹ ಬೇಡಿಕೆಗಳು ಈಡೇರಲಿವೆ. ಆರೋಗ್ಯದ ದೃಷ್ಟಿಯಿಂದ ಧ್ಯಾನ ಮತ್ತು ವ್ಯಾಯಾಮ ಆರಂಭಿಸುವುದು ಫಲಕಾರಿಯಾಗಲಿದೆ.
  • ವೃಶ್ಚಿಕ
  • ಅಂದುಕೊಂಡ ಕಾರ್ಯಗಳು ನಿಧಾನಗತಿಯಲ್ಲಿ ಇದ್ದರೂ, ಪ್ರಗತಿಯತ್ತ ಸಾಗುವುದು ಸಂತೋಷವನ್ನು ತರಲಿದೆ. ನಿವೇಶನ ಮಾರಾಟದಲ್ಲಿ ಲಾಭವನ್ನು ಹೊಂದುವಿರಿ. ಪ್ರಾಮಾಣಿಕತೆಯಿಂದ ದೇವರ ಕೃಪೆಗೆ ಪಾತ್ರರಾಗುವಿರಿ.
  • ಧನು
  • ಅರಣ್ಯ ಅಧಿಕಾರಿಗಳಿಗೆ ವರ್ಗಾವಣೆ ಸಂಭವವಿದೆ. ಕೌಟುಂಬಿಕವಾಗಿಇದ್ದಂತಹ ಎಲ್ಲಾ ತೊಂದರೆಗಳು ನಿವಾರಣೆ ಆಗಲಿವೆ. ಬರುವ ಅವಕಾಶಗಳನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಳ್ಳಿರಿ.
  • ಮಕರ
  • ಕೆಲಸವನ್ನು ಬೇರೆಯವರು ತನ್ನದೆಂದು ಹೇಳಿಕೊಳ್ಳುವುದನ್ನು ನೋಡಬೇಕಾಗಬಹುದು. ಪ್ರಭಾವಿ ವ್ಯಕ್ತಿಗಳ ಮೇಲೆ ದ್ವೇಷ ಇಟ್ಟುಕೊಂಡು ಅದನ್ನು ಸಾಧಿಸುವುದರಲ್ಲಿ ಹುರುಳಿಲ್ಲ. ದೃಢ ನಿರ್ಧಾರ ತೆಗೆದುಕೊಳ್ಳಿರಿ.
  • ಕುಂಭ
  • ಭೂಖರೀದಿಗೆ ಮುಂದಾಗಿರುವ ಆಯ-ವ್ಯಯದ ಬಗ್ಗೆ ವಾಸ್ತು ವಿಚಾರದ ಬಗ್ಗೆ ಗಮನಹರಿಸುವುದು ಒಳ್ಳೆಯದು. ಮಂಗಳಕರ ಕಾರ್ಯಕ್ರಮಕ್ಕೆ ಉಡುಗೆ ತೊಡುಗೆಗಳು ಸಾಂಪ್ರದಾಯಿಕವಾಗಿರಲಿ
  • ಮೀನ
  • ಕೆಲವು ವಿಚಾರಗಳು ಭ್ರಾಂತಿಯ ಕಾರಣದಿಂದ ಅನಿಶ್ಚಿತತೆಯನ್ನು ಉಂಟುಮಾಡಬಹುದು. ಕಾರ್ಯಗಳ ನಿರ್ವಹಣೆಯನ್ನು ಇತರರಿಗೆ ಕೊಟ್ಟರೆ ಮಂದಗತಿಯಲ್ಲಿ ಸಾಗುವ ಸಾಧ್ಯತೆ ಇರುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.