ADVERTISEMENT

ಮಾಸ ಭವಿಷ್ಯ | ಫೆಬ್ರುವರಿ 2025: ಈ ರಾಶಿಯವರ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ..

ಅರುಣ ಪಿ.ಭಟ್ಟ
Published 31 ಜನವರಿ 2025, 23:30 IST
Last Updated 31 ಜನವರಿ 2025, 23:30 IST
   
ಮೇಷ
  • ತಿಂಗಳ ಆರಂಭದಲ್ಲಿ ಜೀವನದಲ್ಲಿನ ಅಡೆತಡೆ ದೂರವಾಗುವುದು. ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗುತ್ತದೆ. ಕೆಲಸದ ಸ್ಥಳ ಮತ್ತು ವ್ಯಾಪಾರದಲ್ಲಿ ಹೊಸ ಉತ್ಸಾಹವನ್ನು ಹೊಂದುವುದರೊಂದಿಗೆ ಹೆಚ್ಚಿನ ಆತ್ಮವಿಶ್ವಾಸ ಹೊಂದುವಿರಿ. ಇಷ್ಟ ಮಿತ್ರರ ಸಹಾಯ. ಆರ್ಥಿಕ ವ್ಯವಹಾರವು ಮದ್ಯಮ ಸ್ಥಿತಿಯಲ್ಲಿರುವುದು. ಷೇರು ಕ್ರಯವಿಕ್ರಯಗಳನ್ನು ಮುಂದೂಡುವುದು ಒಳಿತು. ಕೃಷಿ ವ್ಯವಹಾರಗಳಲ್ಲಿ ಉತ್ತಮ ಲಾಭವಾಗುವುದು. ಶುಭ 12.16.21. ಅಶುಭ. 10.18.22.
  • ವೃಷಭ
  • ಯಾವುದಾದರೂ ಉತ್ತಮ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಅವಕಾಶ ಬರುತ್ತದೆ. ಇದರಿಂದ ಭವಿಷ್ಯದಲ್ಲಿ ನಿಮಗೆ ಅತ್ಯಂತ ಹೆಚ್ಚಿನ ಲಾಭ ದೊರಕುವುದು. ವ್ಯಾಪಾರಿಗಳು ಬಹಳ ಸಮಯದಿಂದ ನಷ್ಟವನ್ನು ಎದುರಿಸುತ್ತಿದ್ದರೆ ಈಗ ಲಾಭವನ್ನು ಪಡೆಯುವ ಯೋಗವಿದೆ. ಪ್ರೀತಿ ಪಾತ್ರರು ಅಥವಾ ಮನೆಯ ಯಾವುದಾದರೂ ಸದಸ್ಯರಿಂದ ಶುಭ ಸುದ್ದಿಯನ್ನು ಪಡೆಯುವಿರಿ. ಇದರಿಂದಾಗಿ ಮನಸ್ಸು ಸಂತಸದಿಂದ ಇರುವುದು. ವಾಹನ ಕ್ರಯ ವಿಕ್ರಯಕ್ಕೆ ಇದು ಸಕಾಲ. ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಜಯ ಲಭಿಸುವ ಸಾಧ್ಯತೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಲಭಿಸುವ ಸಾದ್ಯತೆ‌‌ಯಿದೆ. ಶುಭ 10.16.25. ಅಶುಭ 12.18.20.
  • ಮಿಥುನ
  • ತಿಂಗಳ ಆರಂಭದಲ್ಲಿ ನಿಮಗೆ ತುಂಬಾ ಕೆಲಸ ಕಾರ್ಯಗಳಿರುತ್ತದೆ. ಹೆಚ್ಚು ಶ್ರಮ ಹಾಕಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಕೆಲಸ ಪೂರ್ಣವಾಗಿಸಲು ಸಹೋದ್ಯೋಗಿಗಳ ಬೆಂಬಲ ಕೂಡ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಈ ಸಮಯ ಅಷ್ಟೊಂದು ಅನುಕೂಲಕರವಲ್ಲ. ಸಮೀಪ ಬಂದುಗಳಲ್ಲಿ ಹಣದ ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಿ. ಖರ್ಚು ಹೆಚ್ಚಿರಲಿದೆ, ಸಾಲ ತೆಗೆದುಕೊಳ್ಳಬೇಕಾಗಬಹುದು. ಉನ್ನತ ಪದವಿದರರಿಗೆ ವಿದೇಶ ಪ್ರವಾಸ ಯೋಗ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಉತ್ತಮ ಧನಯೋಗವಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಕುಟುಂಬದವರ ನಡುವೆ ಬಾಂಧವ್ಯ ಚೆನ್ನಾಗಿರಲಿದೆ. ಶುಭ 11.19.25. ಅಶುಭ 13.16.27.
  • ಕರ್ಕಾಟಕ
  • ತಿಂಗಳ ಆರಂಭದಲ್ಲಿ ಅತಿಯಾದ ಆಯಾಸ ಮತ್ತು ತಲೆನೋವಿನ ಸಮಸ್ಯೆ ಕಾಡಬಹುದು. ಅವಿವಾಹಿತರಿಗೆ ಶುಭಸುದ್ದಿ. ನಿರುದ್ಯೋಗಿಗಳು ಉದ್ಯೋಗ ಹುಡುಕುವದರಲ್ಲಿ ಯಶಸ್ಸು ಸಾಧಿಸುವಿರಿ. ಪ್ರಯತ್ನಕ್ಕೆ ತಕ್ಕ ಫಲವು ದೊರೆಯಲಿದೆ. ಕ್ರೀಡೆ, ಕಲೆ, ಸಾಹಿತ್ಯ, ಕ್ಷೇತ್ರದವರಿಗೆ ಮಧ್ಯಮ ತಿಂಗಳು‌. ತಿಂಗಳಾಂತ್ಯದಲ್ಲಿ ಆರೋಗ್ಯದಲ್ಲಿ ನವ ಚೈತನ್ಯ ಬರುವುದು. ವಜ್ರ ಬಂಗಾರ ಆಭರಣ ವ್ಯಾಪಾರಸ್ಥರಿಗೆ ಉತ್ತಮ ಲಾಭ. ವಿದ್ಯಾರ್ಥಿಗಳಿಗೆ ಶುಭ. ಶುಭ 14.18.27. ಅಶುಭ 10.18.26.
  • ಸಿಂಹ
  • ಈ ತಿಂಗಳು ನಿಮಗೆ ಮಧ್ಯಮ ಫಲಿತಾಂಶ. ಹಣದ ಕೊರತೆ ಉಂಟಾಗಬಹುದು. ಖರ್ಚುಗಳು ಹೆಚ್ಚಾಗಬಹುದು. ಕಾಲುಗಳ ನೋವು ಮುಂತಾದ ಆರೋಗ್ಯ ಸಮಸ್ಯೆಗಳು ಕಾಡಬಹುದು. ದೂರ ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಕೋರ್ಟ ಕಛೇರಿ ಸಂಬಂಧಿಸಿದ ವ್ಯವಹಾರಗಳು ತ್ವರಿತಗತಿಯಲ್ಲಿ ಮುಂದುವರಿಯುತ್ತದೆ. ತಿಂಗಳಾಂತ್ಯದಲ್ಲಿ ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಚೇತರಿಕೆ ಕಾಣಬರುತ್ತದೆ . ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ. ಕೃಷಿ ಉತ್ಪನ್ನಗಳಿಂದ ಉತ್ತಮ ಲಾಭ. ಶುಭ 17.19.25. ಅಶುಭ 10.14.26.
  • ಕನ್ಯಾ
  • ವಾಹನ ಸೌಖ್ಯವಿದೆ. ಕೈ ತಪ್ಪಿ ಹೋಗಿರುವ ಅಧಿಕಾರ ಸಿಗಲಿದೆ. ಮಕ್ಕಳಿಂದ ಮಾನಸಿಕ ಕಿರಿಕಿರಿ. ಮನೆಗೆ ನೆಂಟರ ಆಗಮನದಿಂದ ಸಂತಸ. ಸಾಹಿತ್ಯ ರಚನೆ ಓದಿನಲ್ಲಿ ಆಸಕ್ತಿ. ಸಣ್ಣ ಪ್ರವಾಸ ಯೋಗ. ಬರತಕ್ಕ ಬಾಕಿ ಹಣ ದೊರಕಬಹುದು. ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಹಿರಿಯರ ಬಳಿ ನಿಮ್ಮ ಮಹತ್ವಾಕಾಂಕ್ಷೆಗಳನ್ನು ವ್ಯಕ್ತಪಡಿಸುವಿರಿ ಹಾಗೂ ಅವರು ನಿಮಗೆ ಸಹಾಯ ಮಾಡಲು ಸಾಧ್ಯವಾದಷ್ಟೂ ಪ್ರಯತ್ನಿಸುತ್ತಾರೆ. ನೀವು ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿದ್ದೀರಿ ಅದಕ್ಕೆ ಈಗ ತಕ್ಕ ಪ್ರತಿಫಲ ಸಿಗುವ ಸಮಯವಿದು. ಶುಭ.11. 16. 22. ಅಶುಭ. 15.18.27.
  • ತುಲಾ
  • ತಿಂಗಳ ಆರಂಭದಲ್ಲಿ ನಿಮ್ಮ ಕೌಟುಂಬಿಕ ಜೀವನದಲ್ಲಿ ಸಣ್ಣ ಸಮಸ್ಯೆಗಳು ಎದುರಾಗಬಹುದು. ಅಹಂಕಾರವನ್ನು ದೂರವಿಡಿ. ವಾದಗಳಿಂದ ದೂರವಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವಿರಿ. ಹೊಸ ಆಲೋಚನೆಗಳೊಂದಿಗೆ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ. ವೃತ್ತಿಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವಿರಿ. ಗೃಹಾಲಂಕಾರ ವಸ್ತು ಖರೀದಿ. ತಿಂಗಳ ಮಧ್ಯಬಾಗದಲ್ಲಿ ಜ್ವರ ಕಾಡುವುದು. ವಿವಾಹಾಪೇಕ್ಷಿತರಿಗೆ ಶುಭ ಸುದ್ದಿ. ಕೋರ್ಟ ಪ್ರಕರಣ ವಿಚಾರಣೆಗಳಿದ್ದಲ್ಲಿ ಗೆಲುವು ಸಾದ್ಯತೆ. ಶುಭ. 10.16.19. ಅಶುಭ 16.20.16.
  • ವೃಶ್ಚಿಕ
  • ಉದ್ಯಮಿಗಳು ಹೊಸ ಆರ್ಥಿಕ ಒಪ್ಪಂದ ಮಾಡಿಕೊಳ್ಳುವಿರಿ.ಮತ್ತು ಹೊಸ ಹಣ ಬರುತ್ತದೆ. ನಿಮ್ಮ ಕುಟುಂಬದ ಜೊತೆ ಕಟ್ಟುನಿಟ್ಟಾಗಿ ವರ್ತಿಸಬೇಡಿ ಇದು ಶಾಂತಿ ಭಂಗವುಂಟುಮಾಡಬಹುದು. ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ನಿಮಗಿಂತ ಕಿರಿಯ ವ್ಯಕ್ತಿಗಳಿಂದ ನಿಮಗೆ ತುಂಬಾ ಅನುಕೂಲವಾಗುತ್ತದೆ. ತಿಂಗಳಾಂತ್ಯದಲ್ಲಿ ಅನಗತ್ಯ ತಿರುಗಾಟ. ಪೋಷಕರಿಂದ ಹಣಕಾಸಿನ ನೆರವು ಸಾದ್ಯತೆ. ಬೆನ್ನು ನೋವು ಕಾಣಿಸಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪರೀಕ್ಷೆಯಲ್ಲಿ ಯಶಸ್ಸು. ಶುಭ 14.18.23. ಅಶುಭ 17.25.27.
  • ಧನು
  • ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಹೊಸದಾಗಿ ವ್ಯವಹಾರಿಕ ಹೊಂದಾಣಿಕೆ ಒಪ್ಪಂದ ಮಾಡಲು ಇದು ಅತ್ಯುತ್ತಮ ಸಮಯ. ಅನಿರೀಕ್ಷಿತ ಲಾಭಗಳು ಅಥವಾ ಆದಾಯದ ಅವಕಾಶಗಳು ನಿಮಗೆ ಬರಬಹುದು. ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ಸಹೋದ್ಯೋಗಿಗಳು ಕೆಲಸದಲ್ಲಿ ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ. ನಿಮ್ಮ ಮೇಲಧಿಕಾರಿಗಳು ನಿಮ್ಮ ಪ್ರಗತಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುವರು. ಬಂಧು ಮಿತ್ರರಲ್ಲಿ ಭಿನ್ನಾಭಿಪ್ರಾಯ ತಲೆದೋರಿತು. ಬಂಧುಮಿತ್ರರೊಡನೆ ಆರ್ಥಿಕ ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಿ. ರಾಜಕಿಯ ಸಂಭಂದಿತ ವಿಷಯ ವಿವಾದಗಳಿಂದ ದೂರವಿರಿ. ವಿದ್ಯಾರ್ಥಿಗಳಿಗೆ ಉತ್ತಮ. ಶುಭ. 10.16.26. ಅಶುಭ. 15.19.27.
  • ಮಕರ
  • ತಿಂಗಳ ಶುರುವಿನಲ್ಲೇ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಜತೆಗೆ ಖರ್ಚನ್ನು ಕೂಡ ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗುತ್ತೀರಿ. ಉದ್ಯಮಿಗಳು, ಉದ್ಯೋಗಸ್ಥರು ಹಿಂದೆಂದಿಗಿಂತ ಹೆಚ್ಚು ಚಟುವಟಿಕೆಯಿಂದ ಕೆಲಸ ಮಾಡುತ್ತೀರಿ. ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡುವಿರಿ. ಮಕ್ಕಳಿಂದ ಧನಲಾಭ. ಸರ್ಕಾರಿ ಕಛೇರಿ ಕೆಲಸಗಳು ಸರಾಗವಾಗುತ್ತದೆ. ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಒಟ್ಟಾರೆ ಈ ರಾಶಿಯವರಿಗೆ ಮಿಶ್ರಫಲ. ಶುಭ. 16.22.28. ಅಶುಭ 12.19.26.
  • ಕುಂಭ
  • ಉತ್ತಮ ಫಲ ಪ್ರಾಪ್ತಿಯ ರಾಶಿಯಿದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಂಭವ. ಮನೆಕೆಲಸದ ಹೊಸ ಸೇವಕರು ಸಿಗುವರು. ವ್ಯಾಪಾರಸ್ಥರಿಗೆ ಉತ್ತಮ ಲಾಭ. ಕುಟುಂಬ ಸೌಖ್ಯ. ನಿಮ್ಮ ಪೋಷಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರಿ. ಮನೆಗೆ ಬಂಧುಗಳ ಆಗಮನದಿಂದ ಸಂಭ್ರಮದ ವಾತಾವರಣ ನೆಲೆಸುವುದು. ರಾಜಕಿಯದವರಿಗೆ ಕೈ ತಪ್ಪಿ ಹೋಗುವ ಅಧಿಕಾರ ಪ್ರಾಪ್ತಿ. ವಾಹನ ಸೌಖ್ಯ. ಶುಭ 12.19.27. ಅಶುಭ 11.18.28.
  • ಮೀನ
  • ಕೌಟುಂಬಿಕ ವಿಚಾರಗಳಲ್ಲಿ ಉತ್ತಮವಾದ ಪ್ರಗತಿಯನ್ನು ಕಾಣಲಿದ್ದೀರಿ.ಆರೋಗ್ಯ ಉತ್ತಮವಾಗಿ ಇರುತ್ತದೆ. ಬಂಡವಾಳ ಹೂಡಿಕೆಗೆ ಉತ್ತಮವಾದ ಅವಕಾಶ ಆರಿಸಿಕೊಳ್ಳುವಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಮಗ ಅಥವಾ ಮಗಳ ಸಲುವಾಗಿ ಮದುವೆ ಸಂಬಂಧಗಳನ್ನು ಹುಡುಕುತ್ತಿದ್ದಲ್ಲಿ ಅದರಲ್ಲಿ ಯಶಸ್ಸು ಕಾಣುವ ಅವಕಾಶ ಹೆಚ್ಚಾಗಿದೆ. ಸಂಗೀತ ನಾಟ್ಯಾದಿ ಕಲಾಕಾರರಿಗೆ ವಿಶೇಷ ಗೌರವಗಳು ಪ್ರಾಪ್ತವಾಗುವುದು. ಭೂ ಖರೀದಿ ವಿಕ್ರಿ ವ್ಯವಹಾರಗಳಲ್ಲಿ ಉತ್ತಮ ಲಾಭ. ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ. ಬಂದುಮಿತ್ರರಿಂದ ಸಹಕಾರ ಶುಭ. 12.18.22. ಅಶುಭ. 10.19.26.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.