ADVERTISEMENT

ಮಾಸ ಭವಿಷ್ಯ | ಮೇ 2024: ಈ ರಾಶಿಯವರಿಗೆ ಉನ್ನತ ಶಿಕ್ಷಣದಲ್ಲಿ ಯಶಸ್ಸು

ಅರುಣ ಪಿ.ಭಟ್ಟ
Published 30 ಏಪ್ರಿಲ್ 2024, 21:40 IST
Last Updated 30 ಏಪ್ರಿಲ್ 2024, 21:40 IST
   
ಮೇಷ
  • ಮನೆಯ ದುರಸ್ತಿ, ನವೀಕರಣಕ್ಕೆ ಖರ್ಚು. ದಾನ ಧರ್ಮಗಳಲ್ಲಿ ಆಸಕ್ತಿ. ವ್ಯಾಪಾರ, ಉದ್ಯೋಗ ವಿಚಾರದಲ್ಲಿ ದೊಡ್ಡ ಅಧಿಕಾರಿಗಳು, ವ್ಯಾಪಾರಸ್ಥರ ಜತೆಗೆ ಮಾತುಕತೆ. ಕುಟುಂಬ ಬಾಂಧವ್ಯ ಗಟ್ಟಿಯಾಗುತ್ತದೆ. ಸಾಮಾಜಿಕ-,ರಾಜಕೀಯ ಕ್ಲೇತ್ರದಲ್ಲಿ ಶ್ರಮಪಟ್ಟು ಕೆಲಸ ಮಾಡಬೇಕು.
  • ವೃಷಭ
  • ಉತ್ಸಾಹ ಹೆಚ್ಚಲಿದೆ. ಶ್ರಮದಿಂದ ಹೆಚ್ಚಿನ ಯಶಸ್ಸು ಪಡೆಯುವಿರಿ. ಆ ಕಾರಣಕ್ಕಾಗಿ ಹಲವು ಕೆಲಸ ಕಾರ್ಯಗಳನ್ನು ಪೂರೈಸಬೇಕಾಗುತ್ತದೆ. ಸಹೋದ್ಯೋಗಿಗಳ ಜತೆಗಿನ ಭಿನ್ನಾಭಿಪ್ರಾಯ ಮರೆಯಲು ಯತ್ನಿಸುವಿರಿ. ತಿಂಗಳ ಕೊನೆಯಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
  • ಮಿಥುನ
  • ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ಲಾಭ. ಅಂದುಕೊಂಡ ಹಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗಸ್ಥರು ಕೆಲಸದಲ್ಲಿ ಗುಣಮಟ್ಟ ಕಂಡುಕೊಳ್ಳುವರು. ಸಾಮಾಜಿಕ ಸ್ಥಾನಮಾನ ಹೆಚ್ಚಲಿದೆ. ಉತ್ಸಾಹವೂ ಹೆಚ್ಚಾಗಲಿದೆ. ತಲೆ ನೋವು ಹಲ್ಲು ನೋವು ಕಾಣಿಸಿಕೊಳ್ಳಬಹುದು.
  • ಕರ್ಕಾಟಕ
  • ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಸಮಯವಿದು. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಸ್ವಯಂ ವೈದ್ಯರಾಗಬೇಡಿ. ಮುಂಬರುವ ದಿನಗಳಲ್ಲಿ ಹಲವು ಅವಕಾಶಗಳು ಬರಲಿವೆ. ತಿಂಗಳ ಅಂತ್ಯದ ವೇಳೆ ತುಂಬ ಒಳ್ಳೆಯ ಮೊತ್ತ ದೊರೆಯಲಿದೆ.
  • ಸಿಂಹ
  • ಪ್ರಶಸ್ತಿ ಗೌರವಕ್ಕೆ ಪಾತ್ರರಾಗುವ ಯೋಗವಿದೆ. ಕಿರು ಪ್ರಯಾಣ ಮಾಡಬೇಕಾಗಿ ಬರಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ವೃತ್ತಿಪರ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡುವಿರಿ. ವ್ಯಾಪಾರಸ್ಥರಿಗೆ ಉತ್ತಮ ಸಂಪರ್ಕ ದೊರೆಯಲಿದೆ. ಆದಾಯದಲ್ಲಿ ಹೆಚ್ಚಳ.
  • ಕನ್ಯಾ
  • ಕುಟುಂಬ ಸದಸ್ಯರು, ಬಂಧುಗಳು, ಪ್ರೀತಿಪಾತ್ರರೊಂದಿಗೆ ಉತ್ತಮ ಕ್ಷಣಗಳನ್ನು ಕಳೆಯಲಿದ್ದೀರಿ. ವಿರೋಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದೀರಿ. ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮನ್ನಣೆ ಸಿಗಲಿದೆ. ದೊಡ್ಡ ವ್ಯವಹಾರಗಳ ಬಗ್ಗೆ ತೀರ್ಮಾನ ಕೈಗೊಳ್ಳುವಾಗ ತಾಳ್ಮೆ ಇರಲಿ.
  • ತುಲಾ
  • ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಲಾಭ. ಸಿನಿಮಾ, ವೈದ್ಯಕೀಯ, ಕಲಾ ವೃತ್ತಿಯಲ್ಲಿರುವವರಿಗೆ ಲಾಭ. ತಿಂಗಳ ಮಧ್ಯಭಾಗದಲ್ಲಿ ಪ್ರಗತಿ ವೇಗ ಪಡೆದುಕೊಳ್ಳುತ್ತದೆ. ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಆರೋಗ್ಯ ಚೆನ್ನಾಗಿರುತ್ತದೆ.
  • ವೃಶ್ಚಿಕ
  • ತಾಳ್ಮೆ ಮತ್ತು ಧೈರ್ಯ ಬಹಳ ಮುಖ್ಯವಾಗುತ್ತದೆ. ಸಮಯದ ಕೊರತೆ ಕಾಡುತ್ತದೆ. ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದುಕೊಳ್ಳುತ್ತೀರಿ. ತಿಂಗಳ ಅಂತ್ಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಅತ್ಯುತ್ತಮವಾಗುತ್ತದೆ. ವೈಯಕ್ತಿಕ ಸಂಬಂಧಗಳು ಉತ್ತಮವಾಗಿರುತ್ತವೆ.
  • ಧನು
  • ಆಸ್ತಿ ಖರೀದಿಗೆ ಸಂಬಂಧಪಟ್ಟ ಕಾಗದಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ಆರೋಗ್ಯ ಸಮಸ್ಯೆಗಳು ಕಾಡಬಹುದು. ವೈಯಕ್ತಿಕ ಸಂಬಂಧದಲ್ಲಿ ಕೆಲವು ಕಹಿ ಬೆಳವಣಿಗೆಗಳಾಗಬಹುದು. ಕುಟುಂಬದವರ ಬೆಂಬಲ ದೊರೆಯಲಿದೆ. ಒಡಹುಟ್ಟಿದವರೊಡನೆ ಬಾಂಧವ್ಯ ಗಟ್ಟಿಯಾಗುತ್ತದೆ.
  • ಮಕರ
  • ಪ್ರತಿಷ್ಠಿತ ಸಂಸ್ಥೆಯೊಂದರ ಜತೆಗೆ ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕುವ ಸಾಧ್ಯತೆಗಳಿವೆ. ವ್ಯಾಪಾರ ಉದ್ಯಮ ವಿಸ್ತರಣೆ ಬಗ್ಗೆ ಮುಖ್ಯ ತೀರ್ಮಾನ ಕೈಗೊಳ್ಳಲಿದ್ದೀರಿ. ವೈವಾಹಿಕ ಜೀವನ ಸಂತೋಷದಾಯಕವಾಗಿರುತ್ತದೆ. ಉದ್ಯೋಗ ನಿಮಿತ್ತವಾಗಿ ಪ್ರಯಾಣ ಮಾಡಬೇಕಾಗುತ್ತದೆ.
  • ಕುಂಭ
  • ಹಣದ ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಮಾರಾಟ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಲಾಭ ಪಡೆಯಲು ಅವಕಾಶಗಳಿವೆ. ಅಂದುಕೊಂಡ ಸಮಯಕ್ಕಿಂತ ಮುಂಚಿತವಾಗಿಯೇ ಗುರಿ ತಲುಪುವಿರಿ. ಸಂಗಾತಿಯ ಭಾವನೆಗಳಿಗೆ ಗೌರವ ನೀಡುತ್ತೀರಿ.
  • ಮೀನ
  • ಉನ್ನತ ಶಿಕ್ಷಣದಲ್ಲಿ ಯಶಸ್ಸು. ಉದ್ಯೋಗ ಸ್ಥಳದಲ್ಲಿ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ತಂದೆಗೆ ಅಥವಾ ತಂದೆಯ ಸಮಾನರಾದವರಿಗೆ ಅನಾರೋಗ್ಯ ಕಾಡಬಹುದು. ತಿಂಗಳ ಮಧ್ಯ ಭಾಗದಲ್ಲಿ ವೃತ್ತಿಪರ ಜೀವನದಲ್ಲಿ ಅತ್ಯುತ್ತಮವಾದ ಬೆಳವಣಿಗೆ ಇದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.