ದಿನ ಭವಿಷ್ಯ:ಜನವರಿ 11 ಗುರುವಾರ 2024–ಇಂದು ಈ ರಾಶಿಯವರಿಗೆ ನಿರೀಕ್ಷೆಗೂ ಮೀರಿ ಲಾಭ
ದಿನ ಭವಿಷ್ಯ: ಜನವರಿ 11 ಗುರುವಾರ 2024
ಪ್ರಜಾವಾಣಿ ವಿಶೇಷ
Published 10 ಜನವರಿ 2024, 19:23 IST
Last Updated 10 ಜನವರಿ 2024, 19:23 IST
ದಿನ ಭವಿಷ್ಯ: ಜನವರಿ 11 ಗುರುವಾರ 2024–ಇಂದು ಈ ರಾಶಿಯವರಿಗೆ ನಿರೀಕ್ಷೆಗೂ ಮೀರಿ ಲಾಭ
ಮೇಷ
ಸಮಾಜದಲ್ಲಿ ಸ್ಥಾನಮಾನ ಹೊಂದಿರುವ ನಿಮಗೆ ಮಸಿ ಬಳಿಯುವ ಪ್ರಯತ್ನ ಸಂಬಂಧಿಕರಿಂದಲೇ ನಡೆಯಲಿದೆ. ಪ್ರತಿಷ್ಠಿತ ಮತ್ತು ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ. ಸಾಮಾಜಿಕವಾಗಿ ಅನುಯಾಯಿಗಳು ಹೆಚ್ಚುವರು.
ವೃಷಭ
ಸಹಚರರಲ್ಲಿನ ವಾದ ವಿವಾದಗಳಲ್ಲಿ ಸೋಲನ್ನು ಎದುರು ನೋಡಿದರೂ ಅದರಿಂದಾಗಿ ತಪ್ಪು ತಿಳಿವಳಿಕೆಗಳು ದೂರಾಗಲಿವೆ. ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರವಾದ ದಿನಗಳು.
ಮಿಥುನ
ಹಾಸ್ಯ ಪ್ರಜ್ಞೆ ಹೆಚ್ಚುವುದು. ಆದರೆ ನಿಮ್ಮ ಹಾಸ್ಯದಿಂದ ಬೇರೆಯವರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಿ. ಸುಗಂಧ ವಸ್ತುಗಳ ತಯಾರಕರಿಗೆ ಮತ್ತು ಮಾರಾಟಗಾರರಿಗೆ ಹೆಚ್ಚಿನ ಆದಾಯ ದೊರಕುವುದು.
ಕರ್ಕಾಟಕ
ಉದ್ಯೋಗದ ಹುಡುಕಾಟ ನಡೆಸುವವರಿಗೆ ಅಪರಿಚಿತ ವ್ಯಕ್ತಿ ಯಿಂದ ಸಹಾಯ ಆಗುವುದು. ಉದರಬಾಧೆಯನ್ನು ಉಪಶಮನ ಮಾಡಿಕೊಳ್ಳುವುದಕ್ಕಾಗಿ ಹಸಿ ತರಕಾರಿಯನ್ನು ಸೇವಿಸಿ.
ಸಿಂಹ
ಹೊಸ ಬದುಕನ್ನು ಆರಂಭಿಸಲು ಬೇಕಾದ ಅವಕಾಶದ ಬಾಗಿಲು ತೆರೆಯುವುದು. ಸದುಪಯೋಗಪಡಿಸಿಕೊಳ್ಳುವ ಕಾರ್ಯ ಮಾತ್ರ ಸಂಪೂರ್ಣವಾಗಿ ನಿಮಗೆ ಬಿಟ್ಟ ವಿಚಾರವಾಗಿದೆ.
ಕನ್ಯಾ
ಹೊಸ ಮನೆಯ ಅಥವಾ ನಿವೇಶನದ ಕೆಲಸಗಳಿಗಾಗಿ ಸರ್ಕಾರಿ ಕಚೇರಿ ಗಳಿಗೆ ಓಡಾಟ ನಡೆಸಬೇಕಾಗುವುದು. ಆರ್ಥಿಕ ತಾಪತ್ರಯಗಳು ಯಾರಲ್ಲಿಯೂ ಹೇಳಿಕೊಳ್ಳಲು ಆಗದು. ಅಕ್ಕಪಕ್ಕದವರ ವದಂತಿಗಳಿಗೆ ಕಿವಿಗೊಡದಿರಿ.
ತುಲಾ
ಪ್ರೀತಿಪಾತ್ರರಿಗೆ ನೋವಾದ ಕಾರಣದಿಂದ ಮನಸ್ಸು ಎಲ್ಲಾ ಕೆಲಸಗಳಿಂದ ವಿಮುಖವಾಗುವ ಸಾಧ್ಯತೆ ಇರುವುದು. ಹೂವು ಹಣ್ಣುಗಳ ರಫ್ತು ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವಿದೆ.
ವೃಶ್ಚಿಕ
ದಂಪತಿ ಮಧ್ಯೆ ಅನವಶ್ಯಕವಾದ ವಾದ ವಿವಾದವು ಸಂಬಂಧವನ್ನು ಹಾಳುಮಾಡಬಹುದು. ಕಟ್ಟಡ ನಿರ್ಮಾಣದ ಸಾಮಗ್ರಿಗಳಿಂದ ಲಾಭವಿದೆ. ಹಲವಾರು ಆಸಕ್ತಿದಾಯಕ ವಿಚಾರಗಳು ಕಿವಿಗೆ ಬೀಳಲಿದೆ.
ಧನು
ತಾಯಿಯ ಅಥವಾ ಸೋದರ ಮಾವನ ಆರೋಗ್ಯದ ವ್ಯತ್ಯಾಸದಿಂದ ದಿನಚರಿಯಲ್ಲಿ ಬದಲಾವಣೆ ಉಂಟಾಗುತ್ತದೆ. ವೃತ್ತಿರಂಗದಲ್ಲಿ ನಿಮಗಾಗಿ ಅದೃಷ್ಟದ ಬಾಗಿಲು ತೆರೆಯುವುದು. ಮಹಿಳೆಯರಿಗೆ ಅಧಿಕಾರ ಲಭ್ಯವಾಗಲಿದೆ.
ಮಕರ
ಗೃಹ ನಿರ್ಮಾಣದಂಥ ಕಾರ್ಯ ಕೈಗೊಂಡವರಿಗೆ ಆರ್ಥಿಕತೆ ಸ್ವಲ್ಪ ಮಟ್ಟಿನ ತೊಂದರೆ ಸೃಷ್ಟಿ ಮಾಡುವುದು. ಪ್ರೀತಿ-ಪ್ರೇಮದ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆಗಳಿದೆ. ಎಚ್ಚರಿಕೆಯಿಂದ ಕಾರ್ಯಗಳನ್ನು ನಿರ್ವಹಿಸಿ.
ಕುಂಭ
ಕೆಲಸ ನಿಧಾನವಾಗಿ ನಡೆದರೂ ಸಹಚರರು ಸಮರ್ಪಕವಾಗಿ ಪೂರೈಸಿ ಕೊಡುವರು. ದುರಭ್ಯಾಸಗಳು ಹೊಂದಿದ ಸ್ನೇಹಿತರಿಂದ ಆಪತ್ತಿಗೆ ಸಿಲುಕುವಂತಾಗಿ ಅಶಾಂತಿ ಹೊಂದುವಿರಿ. ಪ್ರಾಮಾಣಿಕತೆ ಇರಲಿ.
ಮೀನ
ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ತೇಜೋವಧೆಯನ್ನು ಮಾಡಿದ ವ್ಯಕ್ತಿಗಳ ಎದುರು ಇಂದು ಅವರಿಗಿಂತ ಉತ್ತಮ ಸ್ಥಿತಿಯಲ್ಲಿರುವ ನೀವು ನಿಮ್ಮ ವಿನಯವನ್ನು ಮರೆಯದಿರಿ. ಒತ್ತಡಗಳಿಂದ ಹೊರಬರುವಿರಿ.