ADVERTISEMENT

ದಿನ ಭವಿಷ್ಯ: ಫೆಬ್ರುವರಿ 21 ಬುಧವಾರ 2024– ಇಂದು ಅನುಕೂಲವಾಗುವ ಮಾರ್ಗ ಗೋಚರ

ದಿನ ಭವಿಷ್ಯ: ಫೆಬ್ರುವರಿ 21 ಬುಧವಾರ 2024

ಪ್ರಜಾವಾಣಿ ವಿಶೇಷ
Published 20 ಫೆಬ್ರುವರಿ 2024, 18:35 IST
Last Updated 20 ಫೆಬ್ರುವರಿ 2024, 18:35 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಾಹನ ವಹಿವಾಟುಗಳಲ್ಲಿ ಅನಿರೀಕ್ಷಿತ ನಷ್ಟವಾದರೂ ಅಸಲಿಗೆ ಯಾವ ರೀತಿಯ ತೊಂದರೆ ಉಂಟಾಗುವುದಿಲ್ಲ. ಮಕ್ಕಳ ಜೀವನದ ಕೆಲವು ವಿಚಾರದ ನಿರ್ಧಾರ ಮಾಡುವ ದಿನ ಇದಾಗಲಿದೆ. ಹೊರಗುತ್ತಿಗೆ ಕೆಲಸ ಲಾಭ ತರಲಿದೆ.
  • ವೃಷಭ
  • ಸಮಯೋಚಿತವಾದ ಬುದ್ಧಿಶಕ್ತಿಯು ಸಂಕಟಗಳನ್ನು ದೂರ ಮಾಡಲಿದೆ. ಸೇವಾ ಮನೋಭಾವವಿರುವ ವ್ಯಕ್ತಿಗಳು ಹೆಚ್ಚು ಪ್ರಶಂಸೆ ಪಡೆಯುವರು. ನೀಲಿ ಬಣ್ಣ ಶುಭದಾಯಕ.
  • ಮಿಥುನ
  • ಯಾವುದೇ ರೀತಿಯ ಬದಲಾವಣೆ ಮಾಡಲು ಈ ದಿನ ಸೂಕ್ತ ಕಾಲವಾಗಿರುತ್ತದೆ. ತೆಗೆದುಕೊಳ್ಳುವ ತೀರ್ಮಾನಗಳು ಸರಿಯಾಗಿಯೇ ಇರುವುದು. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನವಿರಲಿ.
  • ಕರ್ಕಾಟಕ
  • ಹೋಟೆಲ್ ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭ ಮತ್ತು ಸ್ನೇಹಪರ ಸ್ವಭಾವದಿಂದ ಸುತ್ತಮುತ್ತಲಿನ ಸಮಾಜದಲ್ಲಿ ಗೌರವವು ಹೆಚ್ಚಲಿದೆ. ವಿದ್ಯಾರ್ಥಿವರ್ಗಕ್ಕೆ ತಮ್ಮ ಅಭ್ಯಾಸದಲ್ಲಿ ಸಾಧಿಸಲು ಹೆಚ್ಚಿನ ಅವಕಾಶ ಸಿಗಲಿದೆ.
  • ಸಿಂಹ
  • ಎಲ್ಲಾ ವಿಚಾರದಲ್ಲೂ ಸಾವಧಾನವಾಗಿ ಮುಂದುವರಿಯುವುದು ಉತ್ತಮ. ವಿದ್ಯಾರ್ಥಿ ವಲಯಕ್ಕೆ ಶೈಕ್ಷಣಿಕ ವಿಷಯಗಳಲ್ಲಿ ಅಪಾರ ಆಸಕ್ತಿ ಮೂಡಲಿದೆ. ವ್ಯಾಪಾರದಲ್ಲಿ ಬಹಳ ಪ್ರಗತಿ ಸಾಧಿಸುವಿರಿ.
  • ಕನ್ಯಾ
  • ಸತ್ಕಾರ ಸಮಾರಂಭಗಳಲ್ಲಿ ಭಾಗವಹಿಸುವಿರಿ . ಬಂಧು ಮಿತ್ರರು ಮನೆಗೆ ಬರಲಿದ್ದಾರೆ. ಕೆಲಸ ಬದಲಿಸುವ ಯೋಚನೆಯನ್ನು ಮಾಡುವವರಿಗೆ ಸಕಾಲ. ವ್ಯವಹಾರದಲ್ಲಿ ಸ್ವಲ್ಪ ನಿಗೂಢತೆ ಕಾಪಾಡಿಕೊಳ್ಳುವುದು ಒಳ್ಳೆಯದು.
  • ತುಲಾ
  • ಮನೆಯವರಲ್ಲಿ ತೋರಿದ ಹೆಚ್ಚಿನ ಪ್ರೀತಿ ಹಾಗೂ ಕಾಳಜಿಯಿಂದ ಮನೆಯ ವಾತಾವರಣ ಬಹಳ ಸಂತೋಷವಾಗಿರುವುದು. ಆಫೀಸಿನ ಕೆಲಸಗಳನ್ನು ಕೇಳಿ ತಿಳಿದುಕೊಳ್ಳುವುದು ಉತ್ತಮ.
  • ವೃಶ್ಚಿಕ
  • ಗೊಂದಲದಲ್ಲಿ ಸಿಕ್ಕಿರುವ ನಿಮಗೆ ದೃಢ ನಿರ್ಧಾರವನ್ನು ಕೈಗೊಂಡ ಫಲದಿಂದಾಗಿ ಒಳ್ಳೆಯ ಫಲಿತಾಂಶ ಪಡೆಯುವಿರಿ. ಹುಡುಕಾಟದಿಂದ ಜೀವನೋಪಾಯಕ್ಕೆ ಅನುಕೂಲವಾಗುವ ಮಾರ್ಗ ಗೋಚರವಾಗಲಿದೆ.
  • ಧನು
  • ಹರಿತ ಯಂತ್ರೋಪಕರಣಗಳ ಸಹಾಯದಿಂದ ಕೆಲಸ ಮಾಡುವ ವೇಳೆಯಲ್ಲಿ ಅಪಾಯ ಸಂಭವಿಸಬಹುದು. ಗಮನವಿಟ್ಟು ಕೆಲಸವನ್ನು ಮಾಡಿ. ಆಪ್ತರ ಹಾಗೂ ಪ್ರೀತಿಪಾತ್ರರಿಗಾಗಿ ಮೀಸಲಿಡಿ.
  • ಮಕರ
  • ತಾಯಿಯ ಆಯಸ್ಸಿನ ವೃದ್ಧಿಗೋಸ್ಕರ ಧಾರ್ಮಿಕ ಕಾರ್ಯವನ್ನು ಮಾಡಿ. ಅಧಿಕ ಒತ್ತಡದಿಂದ ದೇಹದಲ್ಲಿ ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು. ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶ ಸಿಗುವುದು.
  • ಕುಂಭ
  • ಕೃಷಿಕರು ಮತ್ತು ಉದ್ಯಮಿಗಳು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ ಅವರಲ್ಲಿನ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ವೈಜ್ಞಾನಿಕ ಸಂಶೋಧನೆಯಲ್ಲಿರುವವರಿಗೆ ಸಾಧಿಸಿದ ಸಂತೋಷ ಸಿಗಲಿದೆ.
  • ಮೀನ
  • ಕ್ಷುಲ್ಲಕ ಕಾರಣದಿಂದ ಉಂಟಾಗಿದ್ದ ಕುಟುಂಬದ ಕಲಹಗಳು ನಿವಾರಣೆಯಾಗಿ ಶಾಂತಿ ನೆಮ್ಮದಿ ಕಾಣಬಹುದು. ಪ್ರಾಪಂಚಿಕ ವಿಚಾರವನ್ನು ಬಿಟ್ಟು ಆಧ್ಯಾತ್ಮಿಕ ವಿಚಾರಗಳ ಕಡೆಗೆ ಮನ ಹರಿಯಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.