ADVERTISEMENT

ದಿನ ಭವಿಷ್ಯ: ಏಪ್ರಿಲ್ 20 ಶನಿವಾರ 2024– ಸಹೋದ್ಯೋಗಿಗಳ ಬೆಂಬಲ ಚೆನ್ನಾಗಿರಲಿದೆ

ದಿನ ಭವಿಷ್ಯ: ಏಪ್ರಿಲ್ 20 ಶನಿವಾರ 2024

ಪ್ರಜಾವಾಣಿ ವಿಶೇಷ
Published 19 ಏಪ್ರಿಲ್ 2024, 18:31 IST
Last Updated 19 ಏಪ್ರಿಲ್ 2024, 18:31 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದು ತಿಳಿಯಲಿದೆ. ಮನೆ ನಿರ್ಮಾಣದ ಕೆಲಸಗಳನ್ನು ಪೂರ್ತಿಗೊಳ್ಳುವ ಹಂತ ತಲುಪಲಿದೆ.
  • ವೃಷಭ
  • ವಾಸ್ತವವಾಗಿ ಕಚೇರಿಯಲ್ಲಿರುವ ವಿಷಯಗಳು ಹಾಗೂ ತಲುಪುತ್ತಿರುವ ವಿಚಾರಗಳ ನಡುವೆ ಇರುವ ವ್ಯತ್ಯಾಸವು ಇಂದು ನಿಮಗೆ ತಿಳಿಯುತ್ತದೆ. ಜಾತ್ರೆಯಂಥ ಮಹೋತ್ಸವದಲ್ಲಿ ಚಿನ್ನದ ಮೇಲೆ ಜಾಗ್ರತೆ ಇರಲಿ.
  • ಮಿಥುನ
  • ನಿಮ್ಮ ಸಾಂಸಾರಿಕ ವಿಚಾರದಲ್ಲಿ ಬೇರೆಯವರ ಸಲಹೆಗಳನ್ನು ಕಡೆಗಣಿಸುವುದು ಮತ್ತು ಹೋಲಿಕೆಯನ್ನು ಮಾಡಿಕೊಳ್ಳದೇ ಇರುವುದು ಒಳ್ಳೆಯದು.
  • ಕರ್ಕಾಟಕ
  • ವಿವಾಹದ ಭಾವನೆಗಳನ್ನು ತಂದೆ ತಾಯಿಯ ಬಳಿ ವ್ಯಕ್ತಪಡಿಸಲು ಇದು ಸುಸಮಯ. ಆಭರಣಗಳಿಗಾಗಿ ಹಣ ಖರ್ಚು ಮಾಡುವಿರಿ. ಸಹೋದ್ಯೋಗಿಗಳ ಬೆಂಬಲ ಚೆನ್ನಾಗಿರುತ್ತದೆ.
  • ಸಿಂಹ
  • ಆರ್ಥಿಕ ಜೀವನದ ಪುನರುಜ್ಜೀವನಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಅಕ್ರಮವಾದ ವ್ಯವಹಾರ ಕೈಬಿಡುವುದು ಕ್ಷೇಮಕರ. ಗೃಹೋಪಯೋಗಿ ವಸ್ತುಗಳ ಮಾರಾಟದಿಂದ ಲಾಭ ಬರಲಿದೆ.
  • ಕನ್ಯಾ
  • ಅತ್ಯಾಪ್ತರಿಗಾಗಿ ಉಡುಗೊರೆ ಕೊಡುವ ಸಲುವಾಗಿ ಹುಡುಕುತ್ತಿರುವ ವಸ್ತುವು ಲಭ್ಯವಾಗುವುದು. ಜಾಹೀರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡಬಹುದು.
  • ತುಲಾ
  • ಮುಖ್ಯ ಗಣ್ಯರ ಭೇಟಿಯಲ್ಲಿ ನಿಮ್ಮ ಉಡುಗೆ ತೊಡುಗೆಗಳು ಪ್ರಾಮುಖ್ಯತೆ ಹೊಂದುತ್ತವೆ. ಮನೋಬಲವು ಹೆಚ್ಚಿರುವುದರಿಂದ ದೈಹಿಕ ವೈಕಲ್ಯತೆ ಅಡ್ಡಿ ಪಡಿಸುವುದಿಲ್ಲ.
  • ವೃಶ್ಚಿಕ
  • ಸಜ್ಜನರ ಸಹವಾಸ ಹಾಗೂ ಜನಬಳಕೆಯಿಂದಾಗಿ ಪ್ರಾಪಂಚಿಕವಾದ ಜ್ಞಾನ ವೃದ್ಧಿ. ಸ್ನೇಹಪರ, ದಾನ-ಧರ್ಮದ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ವಾಹನ ಚಲಾಯಿಸುವಾಗ ಎಚ್ಚರವಿರಲಿ.
  • ಧನು
  • ವಿದೇಶದಲ್ಲಿ ನೆಲೆಸಿರುವವರಿಗೆ ಸ್ವಸ್ಥಾನದಲ್ಲಿ ಇರುವಂಥ ಪೋಷಕರ ಬಗ್ಗೆ ತಲೆಬಿಸಿಯಾಗುತ್ತದೆ. ಗೃಹ ವಿನ್ಯಾಸಗಾರರಿಗೆ ಹಾಗೂ ಆಂತರಿಕ ವಿನ್ಯಾಸಗಾರರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
  • ಮಕರ
  • ಮಂಗಳಕರವಾದ ಕಾರ್ಯಕ್ರಮಕ್ಕೆ ದೃಷ್ಟಿದೋಷಗಳನ್ನು ಉಂಟುಮಾಡುವಂಥ ಅಮಂಗಳಕಾರಿ ವ್ಯಕ್ತಿಗಳನ್ನು ಆಹ್ವಾನಿಸದಿರಿ. ಸಂಬಂಧಗಳನ್ನು ಗಟ್ಟಿಪಡಿಸಲು ಸ್ವಗೃಹದಲ್ಲಿ ಕಾರ್ಯಕ್ರಮ ಆಯೋಜಿಸಿ.
  • ಕುಂಭ
  • ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ನಂತರದಲ್ಲಿ ಷೇರುಗಳನ್ನು ಕೊಳ್ಳವ ಯೋಜನೆಗೆ ಮುಂದಾಗಿ. ಭಾವನಾತ್ಮಕ ಪ್ರವೃತ್ತಿಯು ಹೆಚ್ಚು ಕೆಲಸ ಮಾಡಿಸುವಂತೆ ಮಾಡಬಹುದು.
  • ಮೀನ
  • ಮಾತೃ ಸಂಬಂಧಿ ಬಂಧುಗಳ ಆಗಮನದಿಂದ ಸಂತೋಷ ಹೊಂದುವಿರಿ. ಸುಖಮಯವಾಗಿರುವ ಜೀವನವನ್ನು ಮೂರನೇ ವ್ಯಕ್ತಿಗಳ ಮಾತನ್ನು ಕೇಳಿ ಹಾಳುಮಾಡಿಕೊಳ್ಳದಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.