ADVERTISEMENT

ದಿನ ಭವಿಷ್ಯ: ಏಪ್ರಿಲ್ 21 ಭಾನುವಾರ 2024–ಈ ರಾಶಿಯವರಿಗೆ ಉತ್ತಮ ಅವಕಾಶಗಳು ಬರಲಿವೆ

ದಿನ ಭವಿಷ್ಯ: ಏಪ್ರಿಲ್ 21 ಭಾನುವಾರ 2024

ಪ್ರಜಾವಾಣಿ ವಿಶೇಷ
Published 20 ಏಪ್ರಿಲ್ 2024, 20:21 IST
Last Updated 20 ಏಪ್ರಿಲ್ 2024, 20:21 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ನೀವು ತಲುಪಿದ ಸ್ಥಾನದಲ್ಲಿ ನ್ಯಾಯಯುತವಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಯೊಚನೆ ಮಾಡಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಯೋಗಪಟುಗಳಿಗೆ ಉತ್ತಮ ಅವಕಾಶಗಳು ಬರಲಿವೆ.
  • ವೃಷಭ
  • ನಿನ್ನೆ ಮೊನ್ನೆಯಷ್ಟೆ ಇತ್ಯರ್ಥವಾಯಿತು ಎಂದುಕೊಂಡ ಕುಟುಂಬ ಕಲಹವು ಮತ್ತೆ ಹೊಗೆಯಾಡುವ ಸಾಧ್ಯತೆ ಇದೆ. ಸಾಧು ಸಂತರ ಮಾತುಗಳು ನಿಮ್ಮನ್ನು ಇಂದು ಆಕರ್ಷಿಸಲಿವೆ. ಮಕ್ಕಳ ಯೋಗಕ್ಷೇಮವನ್ನು ಮರೆಯಬೇಡಿ.
  • ಮಿಥುನ
  • ಉದ್ಯೋಗ ಆಕಾಂಕ್ಷಿಗಳು ನಿಮ್ಮದೇ ಇಷ್ಟ ಕ್ಷೇತ್ರದಲ್ಲಿ ಕೆಲಸ ಪಡೆಯುವುದರಿಂದ ಉತ್ತಮ ಹೆಸರು ಪಡೆಯುವಿರಿ. ಆರೋಗ್ಯದ ಏರುಪೇರುಗಳಾಗುವ ಸಾಧ್ಯತೆ ಇದ್ದು, ಎಚ್ಚರ ವಹಿಸಬೇಕು.
  • ಕರ್ಕಾಟಕ
  • ನಿಮ್ಮ ಮೃದು ನಡತೆ ಹಾಗೂ ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳ ಜೊತೆ ಅನ್ಯೋನ್ಯವಾದ ನಡತೆಯಿಂದ ಮನ್ನಣೆ ಗಳಿಸುತ್ತೀರಿ. ಸಹೋದರರ ಜೊತೆ ಉತ್ತಮ ಬಾಂಧವ್ಯ ಮತ್ತು ಸ್ನೇಹ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ.
  • ಸಿಂಹ
  • ಕೃಷಿಗೆ ಸಂಬಂಧಿಸಿದ ಆರ್ಥಿಕತೆಯಲ್ಲಿ ಪಡೆದ ಸಾಲ ಹಿಂದಿರುಗಿಸುವ ಶಕ್ತಿ ದೊರಕಲಿದೆ. ಅನೇಕ ಕಾಲದಿಂದ ಕಾಡುತ್ತಿರುವ ದೇಹ ಬಾಧೆ ನಿವಾರಿಸಿಕೊಳ್ಳಲು ವೈದ್ಯರನ್ನು ಬದಲಿಸುವುದು ಉತ್ತಮ.
  • ಕನ್ಯಾ
  • ಸಂಗಾತಿಯೊಂದಿಗಿನ ಸಂಬಂಧ ಗಟ್ಟಿ ಮಾಡಿಕೊಳ್ಳಲು ನಿಮ್ಮ ಬಿಡುವಿಲ್ಲದ ಸಮಯದಲ್ಲೂ ಸ್ವಲ್ಪ ಸಮಯ ನೀಡುವ ಪ್ರಯತ್ನ ಮಾಡಿ. ಬಂಧುಗಳಿಂದ ಉಡುಗೊರೆಯ ರೂಪದಲ್ಲಿ ದ್ರವ್ಯ ಲಾಭವಾಗಲಿದೆ.
  • ತುಲಾ
  • ನಿಮ್ಮ ಇಂದಿನ ದಿನದಲ್ಲಿ ವೃತ್ತಿಯ ವಿಷಯವಾಗಿ ವಿಷೇಶವಾದ ವ್ಯಕ್ತಿಯೊಬ್ಬರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಕಚೇರಿ ಕೆಲಸದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.
  • ವೃಶ್ಚಿಕ
  • ಉಚ್ಚ ಸ್ಥಾನದಲ್ಲಿರುವಂತಹ ನೀವು ತಪ್ಪುಗಳನ್ನು ಮಾಡಿದ್ದಲ್ಲಿ, ನಿಮ್ಮನ್ನೇ ಅನುಸರಿಸುವ ಸಹೋದ್ಯೋಗಿಗಳಿಗೆ ನೀವು ಏನೂ ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕತ್ತಲೆಯಲ್ಲಿ ಸಂಚರಿಸದಿರಿ.
  • ಧನು
  • ಸಮಯದ ಗಡುವಿರುವ ಕೆಲಸಗಳನ್ನು ಕಡೆಯ ತನಕ ಉಳಿಸಿಕೊಳ್ಳುವ ಬದಲು ಈಗಲೇ ಮುಗಿಸಿಕೊಳ್ಳುವುದು ಉತ್ತಮ. ವೃದ್ಧರಾದ ತಂದೆಯ ಆರೋಗ್ಯವು ಕ್ಷೀಣಿಸಬಹುದಾದ್ದರಿಂದ ಎಚ್ಚರ ವಹಿಸಬೇಕು.
  • ಮಕರ
  • ಇಂದು ವಿವಿಧ ಕಾರ್ಯಗಳ ಜವಾಬ್ದಾರಿಗಳ ಭಾರ ನಿಮ್ಮ ಮೇಲೆಯೇ ಬೀಳುವುದರಿಂದ ಕೆಲಸದ ಒತ್ತಡ ಹೆಚ್ಚಿರುತ್ತದೆ. ಆಸೆಗಳು ಈಡೇರಿ ಸಂಸಾರದಲ್ಲಿ ನೆಮ್ಮದಿ ಕಾಣುವುದರಿಂದಾಗಿ ಮನಸ್ಸು ಉಲ್ಲಾಸವಾಗಿರುತ್ತದೆ.
  • ಕುಂಭ
  • ಲೋಹ ವಸ್ತುಗಳ ವ್ಯಾಪಾರಿಗಳಿಗೆ ಸಂಪಾದನೆ ಹೆಚ್ಚಳವಾಗುವ ಜೊತೆಗೆ ವ್ಯಾವಹಾರಿಕ ಪ್ರಚಾರಗಳು ಸಿಗಲಿದೆ. ಪ್ರಶಾಂತ ವಾತಾವರಣದ ಅಗತ್ಯವು ಇಂದು ನಿಮಗೆ ಇರುವುದರಿಂದ ಉದ್ಯಾನವನಕ್ಕೆ ಭೇಟಿ ನೀಡಿ.
  • ಮೀನ
  • ಸಮಾಜದಲ್ಲಿ ಬೆರೆಯುವುದರಿಂದ ಅಥವಾ ಅಕ್ಕ-ಪಕ್ಕದವರ ಜತೆ ಮಾತುಕತೆಯಿಂದ ಉದ್ಯೋಗಕ್ಕೆ ಸಂಬಂಧಿಸಿ ಅನುಕೂಲವಾಗಲಿದೆ. ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವ ಹೊಂದುವ ಅವಕಾಶವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.