ದಿನ ಭವಿಷ್ಯ: ಆಗಸ್ಟ್ 20 ಬುಧವಾರ 2025– ದಿನಚರಿ ಎಂದಿನಂತೆ ವ್ಯವಸ್ಥಿತವಾಗಿರುವುದು
ದಿನ ಭವಿಷ್ಯ: ಆಗಸ್ಟ್ 20 ಬುಧವಾರ 2025
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಆಗಸ್ಟ್ 2025, 18:31 IST
Last Updated 19 ಆಗಸ್ಟ್ 2025, 18:31 IST
ದಿನ ಭವಿಷ್ಯ
ಮೇಷ
ಜವಾಬ್ದಾರಿಯ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗುವಿರಿ. ಹಿಂದೆ ಮಾಡಿದ ಬಂಗಾರದ ಮೇಲಿನ ಹೂಡಿಕೆ ದುಪ್ಪಟ್ಟಾಗಿರುವುದು ಹೆಚ್ಚಿನ ಸಂತೋಷವನ್ನು ತಂದುಕೊಡುವುದು..
ವೃಷಭ
ಸಣ್ಣ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯ ಹಸ್ತ ದೊರಕಲಿದೆ. ಸ್ನೇಹಿತರೊಂದಿಗೆ ಪ್ರವಾಸ ಮಾಡಬೇಕೆನಿಸಿದ್ದರೂ ಮುಂದೂಡುವುದು ಉತ್ತಮ. ನವವಿವಾಹಿತರಿಗೆ ಸಂತಾನ ಭಾಗ್ಯ.
ಮಿಥುನ
ಎದುರು ಬರುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಿ. ಗೃಹ ನಿರ್ಮಾಣ ಮತ್ತು ಸ್ವತ್ತು ಸಂಪಾದನೆಯಂಥ ಕಾರ್ಯಗಳ ಸಂಭವವಿದೆ.
ಕರ್ಕಾಟಕ
ವೃತ್ತಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವುದು ನಿಮಗೆ ಆಶ್ಚರ್ಯಕರವಾಗಲಿದೆ. ಭೂ ಮತ್ತು ವಾಹನಗಳಿಂದ ಅಧಿಕ ಲಾಭವಿದೆ. ಕುಟುಂಬದಲ್ಲಿ ಸೌಖ್ಯವಿದ್ದು ಮನೋರಂಜನೆ ಪಡೆಯುವಿರಿ.
ಸಿಂಹ
ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಓಡಾಟ ನಡೆಸಬೇಕಾಗುವುದು. ತಂದೆ ತಾಯಿ ಅಥವಾ ಹಿರಿಯರ ಆರೋಗ್ಯ ಉತ್ತಮವಾಗಿರಲಿದೆ. ಕೆಲಸದ ಮುಕ್ತಾಯದ ಸಮಯದಲ್ಲಿ ಬಹಳ ಆಯಾಸವಾಗಬಹುದು.
ಕನ್ಯಾ
ನೆರೆ-ಹೊರೆಯವರೊಂದಿಗಿನ ಸಂಬಂಧ ಉತ್ತಮಗೊಳ್ಳುವುದು. ತಾಳ್ಮೆ ಮೂಲ ಮಂತ್ರವಾಗಲಿದೆ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆ ಕಾಪಾಡಿಕೊಳ್ಳಿರಿ. ಪ್ರೀತಿ ಪಾತ್ರರೊಡನೆ ಆತ್ಮೀಯ ಒಡನಾಟ ಇಟ್ಟುಕೊಳ್ಳಿ.
ತುಲಾ
ಯೋಜನೆಯನ್ನು ಪೂರ್ಣಗೊಳಿಸುವ ವಿಚಾರವಾಗಿ ಗಡಿಬಿಡಿಯ ವಾತಾವರಣ ಇರಲಿದೆ. ಎಲ್ಲಾ ಕೆಲಸಗಳೂ ತ್ವರಿತ ಗತಿಯಲ್ಲಿ ಸಾಗುವುವು. ದುರ್ಗಾಪರಮೇಶ್ವರಿಯ ಆರಾಧನೆ ಕಷ್ಟವನ್ನು ದೂರ ಮಾಡುವುದು.
ವೃಶ್ಚಿಕ
ಜನಸಂಪರ್ಕದಲ್ಲಿರುವ ರಾಜಕಾರಣಿಗಳಿಗೆ ಬಹಳ ಕೆಲಸದ ಒತ್ತಡ ಇರುವುದು. ಹೆದರಬೇಡಿ ಅದೃಷ್ಟ ನಿಮ್ಮ ಪಾಲಿಗೇ ಇದೆ. ಜೀವನೋಪಾಯಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವುದು ಅನಿವಾರ್ಯವಾಗುವುದು.
ಧನು
ಯೋಗ್ಯ ವಯಸ್ಕರರಿಗೆ ವಿವಾಹ ಭಾಗ್ಯ ಒದಗಿ ಬರುವುದು. ಶೀತ ಬಾಧೆಯನ್ನು ಹೋಗಲಾಡಿಸಿಕೊಳ್ಳುವ ವಿಚಾರವಾಗಿ ಆಯುರ್ವೇದದ ಮೊರೆ ಹೋಗಿ. ವೃತ್ತಿ ಜೀವನ , ದಿನಚರಿಯು ಎಂದಿನಂತೆ ವ್ಯವಸ್ಥಿತವಾಗಿರುವುದು.
ಮಕರ
ನೆನೆಗುದಿಗೆ ಬಿದ್ದಿದ್ದ ಕೆಲಸಗಳು ದೇವತಾನುಗ್ರಹದಿಂದ ಆರಂಭವಾಯಿತೆಂದು ಸಂತೋಷಪಡುವಿರಿ. ಸಿನಿಮಾ ನಟ–ನಟಿಯರಿಗೆ ಶುಭ ಸುದ್ದಿ ಸಿಗುವುದು. ಮಕ್ಕಳ ಅನಾರೋಗ್ಯ ತಲೆನೋವಿಗೆ ಕಾರಣವಾಗುತ್ತದೆ.
ಕುಂಭ
ಬದುಕಿನಲ್ಲಿ ಮಹತ್ವದ ದಿನವೆನಿಸಲಿದೆ. ಬಂಧುವೊಬ್ಬರ ಸಹಾಯವನ್ನು ನಯವಾಗಿ ನಿರಾಕರಿಸುವಿರಿ. ಮುಂದಿನ ಕಾರ್ಯ ಯೋಜನೆಗಳಿಗೆ ಸ್ಪಷ್ಟ ರೂಪ ಕೊಡುವಿರಿ. ತಲೆ ಎತ್ತಿನಿಲ್ಲುವಂತಾಗುತ್ತದೆ.
ಮೀನ
ವಿನ್ಯಾಸಕಾರ ಸಲಹೆಗಾರರಾಗಿ ಕಟ್ಟಡ ನಿರ್ಮಾಣ ಸಂಸ್ಥೆಯೊಂದಕ್ಕೆ ನೇಮಕಗೊಳ್ಳುವ ಯೋಗವಿದೆ. ಆದಾಯದಲ್ಲಿ ಹೆಚ್ಚಳ. ಆತ್ಮೀಯರಿಗೆ ಸಾಂತ್ವನ ಹೇಳಬೇಕಾದ ಸಂದರ್ಭ ಬರಲಿದೆ. ಇಷ್ಟಾರ್ಥಗಳು ಸಿದ್ಧಿಯಾಗುವುದು.